Advertisements

ಈತ ಟಾಪ್ ಕಬ್ಬಡಿ ಆಟಗಾರ..! ಈಗ ರಸ್ತೆಬದಿಯಲ್ಲಿ ಆಹಾರ ಮಾರಾಟ ಮಾಡುತ್ತಿದ್ದಾನೆ..! ಈ ಪರಿಸ್ಥಿತಿಗೆ ಕಾರಣ ಏನು ಗೊತ್ತಾ..? ಕಣ್ಣೀರು ತರಿಸುತ್ತದೆ..

Kannada News Sports

ನಮಸ್ತೆ ಸ್ನೇಹಿತರೆ, ಇವರು ರಾಷ್ಟ್ರಮಟ್ಟದ ಕಬಡ್ಡಿ ಆಟಗಾರರಾಗಿದ್ದರು. ಅವರು ಅನೇಕ ಚಾಂಪಿಯನ್‌ ಶಿಪ್‌ಗಳಲ್ಲಿ ಭಾಗವಹಿಸಿ ಚಿನ್ನ, ಕಂಚು ಮತ್ತು ಬೆಳ್ಳಿ ಪದಕಗಳನ್ನು ಸ್ವಂತವಾಗಿಸಿಕೊಂಡಿದ್ದಾರೆ. ಅವರಿಗೆ ಅನೇಕ ಪ್ರಶಸ್ತಿಗಳು ಬಂದಿವೆ. ಆದರೆ, ಅವರು ಈಗ ಯಾವ ಸ್ಥಿತಿಯಲ್ಲಿದ್ದಾರೆ ಗೊತ್ತಾ..? ಜಾರ್ಖಂಡ್‌ನ ಆರ್ಚರ್ ದೀಪಿಕಾ ಕುಮಾರಿ ಪ್ರಸ್ತುತ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಅ ರಾಜ್ಯದ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ರಾಹುಲ್ ಕುಮಾರ್ ಬಡತನದಲ್ಲಿ ಬಳಲುತ್ತಿದ್ದಾರೆ. ಒಂದು ಕಾಲದ ಸ್ಟಾರ್ ಆಟಗಾರನ ಈ ಸ್ಥಿತಿಗೆ ಕಾರಣ ಏನು ಗೊತ್ತಾ..? ಮುಂದೆ ಓದಿ.

Advertisements
Advertisements

2007 ರಲ್ಲಿ ಕಬಡ್ಡಿ ಆಟಗಾರನಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಹುಲ್ ಕುಮಾರ್, 2019 ರವರೆಗೆ ತಮ್ಮ ವೃತ್ತಿಜೀವನವನ್ನು ಬಹಳ ಕಷ್ಟದಿಂದ ಮುಂದುವರಿಸಿದರು. ಇವರು ಭಾಗವಹಿಸಿದ ಎಲ್ಲಾ ಚಾಂಪಿಯನ್‌ ಶಿಪ್‌ಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಕೆಲವು ಚಾಂಪಿಯನ್ ಶಿಪ್‌ಗಳಲ್ಲಿ ಚಿನ್ನದ ಪದಕಗಳನ್ನು ಸಹ ಗೆದ್ದಿದ್ದಾರೆ. ಆದರೆ, ಬಡ ಕುಟುಂಬ ಮತ್ತು ಹೊರಗಿನಿಂದ ಪ್ರೋತ್ಸಾಹ ಕೊರತೆಯೇ ರಾಹುಲ್ ನ ಪಾಲಿಗೆ ಶಾಪವಾಗಿ ಬಿಟ್ಟಿತ್ತು. ರಾಹುಲ್ ನ ಪೋಷಕರು ರಸ್ತೆಯ ಬದಿಯಲ್ಲಿ ಒಂದು ಸಣ್ಣ ಹೋಟೆಲ್ ನಡೆಸಿಕೊಂಡು ರಾಹುಲ್‌ಗೆ ವಿದ್ಯಾಭ್ಯಾಸ ಕೊಡಿಸಿದರು. ಈಗ ಅವರಿಬ್ಬರೂ ವೃದ್ಧಾಪ್ಯವನ್ನು ತಲುಪಿದ್ದಾರೆ ಮತ್ತು ಅನಾರೋ’ಗ್ಯದಿಂದಾಗಿ ಆ ಚಿಕ್ಕ ಹೋಟೆಲನ್ನು ನಡೆಸಲು ಸಹ ಅವರ ಕೈಯಲ್ಲಿ ಆಗುವುದಿಲ್ಲ. ಇದರಿಂದ ರಾಹುಲ್ ಕುಟುಂಬವನ್ನು ಪೋಷಿಸಲು ಆ ಚಿಕ್ಕ ಹೋಟೆಲನ್ನು ಅವಲಂಬಿಸಿದ್ದಾರೆ.

ರಾಹುಲ್ ಕಬಡ್ಡಿಯನ್ನು ಸಂಪೂರ್ಣವಾಗಿ ಬದಿಗಿಟ್ಟು, ರಸ್ತೆಯ ಪಕ್ಕದಲ್ಲಿ ಚಿಕ್ಕ ಹೋಟೆಲನ್ನು ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರದಿಂದ ಸಣ್ಣ ಪ್ರೋತ್ಸಾಹ ದೊರೆತರೆ, ರಾಹುಲ್ ಅವರು ತಮ್ಮ ಕಬ್ಬಡ್ಡಿ ವೃತ್ತಿಜೀವನವನ್ನು ಮತ್ತೆ ಪ್ರಾರಂಭಿಸುತ್ತೇನೆ ಎನ್ನುತ್ತಾರೆ. ಕಬಡ್ಡಿಯಲ್ಲಿ ರಾಜ್ಯ ಮತ್ತು ದೇಶಕ್ಕೆ ಒಳ್ಳೆಯ ಹೆಸರು ತರುತ್ತೇನೆ ಎಂಬ ವಿಶ್ವಾಸವಿದೆ. ಸರ್ಕಾರದಿಂದ ಸ್ವಲ್ಪ ಬೆಂಬಲವಿದ್ದರೂ ಸಹ, ನನ್ನ ಮಗನು ತನ್ನ ಕೈಲಾದಷ್ಟು ಪ್ರಯತ್ನ ಮಾಡುತ್ತಾನೆ ಮತ್ತು ಕಬ್ಬಡಿಯಲ್ಲಿ ಉತ್ತಮ ಹೆಸರು ಮಾಡುತ್ತಾನೆ ಎಂದು ರಾಹುಲ್ ತಾಯಿ ಹೇಳುತ್ತಾರೆ. ಈಗಲಾದರೂ ಸರಿ ಸರ್ಕಾರಗಳು ಇಂತಹ ಪ್ರತಿಭೆಯುಳ್ಳ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಉತ್ತಮ ಬೆಂಬಲ ನೀಡಿದರೆ, ಅವರ ದೇಶಕ್ಕೆ ಕೀರ್ತಿಯನ್ನು ತರುತ್ತಾರೆ ಎನ್ನುವುದರಲ್ಲಿ ಅನುಮಾನವಿಲ್ಲ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.