ಕನ್ನಡ ಚಿತ್ರರಂಗದ ಧ್ರುವತಾರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವನ್ನು ಸ್ವಲ್ಪಮಟ್ಟಿಗೆ ಮರೆತು
ಅವರ ನೆನಪಿನ ಜೊತೆ ಬದುಕು ನಡೆಸಲು ಮುಂದಾಗಿದ್ದಾರೆ ಅಶ್ವಿನಿ ರಾಜಕುಮಾರ್ ರವರು. ಅಶ್ವಿನಿ ಅವರು ಪುನೀತ್ ರಾಜಕುಮಾರ್ ಅವರ ಕನಸುಗಳನ್ನು ನನಸು ಮಾಡುತ್ತಾ ತಮ್ಮ ಮುಂದಿನ ಬದುಕನ್ನು ಸಾಗಿಸುವ ನಿರ್ಧಾರವನ್ನು ಇದೀಗ ಕೈಗೊಂಡಿದ್ದಾರೆ ಇದೀಗ ಸ್ವಲ್ಪ ಮಟ್ಟಿಗೆ ದುಃಖದಿಂದ ಹೊರಬಂದಿದ್ದು ಎರಡು ತಿಂಗಳ ಬಳಿಕ ಕೊನೆಗೂ ನಗುಮುಖದಿಂದ ಕಾಣಿಸಿಕೊಂಡಿದ್ದಾರೆ..
[widget id=”custom_html-5″]

ಹೌದು ನಟ ವಿಜಯ್ ರಾಘವೇಂದ್ರ ಅವರ ಮನೆಯಲ್ಲಿ ನಡೆದಿರುವ ಸಮಾರಂಭವೊಂದರಲ್ಲಿ ಇದೀಗ ಅಶ್ವಿನಿ ಅವರು ಭಾಗಿಯಾಗಿದ್ದು ವಿಜಯ ರಾಘವೇಂದ್ರ ಅವರ ಪತ್ನಿ ಹಾಗೂ ಕುಟುಂಬದ ಜೊತೆ ಖುಷಿಯಿಂದ ಸಮಯವನ್ನು ಕಳೆದಿದ್ದಾರೆ ಹೌದು ಅಶ್ವಿನಿ ಅವರು ವಿಜಯ ರಾಘವೇಂದ್ರ ಪತ್ನಿ ಜೊತೆ ಎಲ್ಲಾರೂ ಜೊತೆಯಾಗಿ ತೆಗೆಸಿಕೊಂಡಿರುವ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ವಿಜಯ ರಾಘವೇಂದ್ರ ಅವರ ಮನೆಯಲ್ಲಿ ಪೂಜೆ ಇದ್ದ ಕಾರಣ ನಮ್ಮ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಡದಿ ಅಶ್ವಿನಿ ಅವರು ಬಂದಿದ್ದು ವಿಜಯರಾಘವೇಂದ್ರ ದಂಪತಿಗೆ ಒಂದು ಚಿನ್ನದ ಸರವನ್ನು ಉಡುಗೊರೆಯಾಗಿ ನೀಡಿದ್ದಾರೆ ಎನ್ನಲಾಗಿದೆ.
[widget id=”custom_html-5″]

ಹಲವು ದಿನಗಳ ಬಳಿಕ ಅಶ್ವಿನಿ ಅವರ ಮುಖದಲ್ಲಿ ನಗುವನ್ನು ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ.ಅವರು ಸದಾ ಹೀಗೆ ನಗುತ್ತಾ ಸಂತೋಷದಿಂದಿರಲಿ ಎಂದು ಕಾಮೆಂಟ್ ಮೂಲಕ ವ್ಯಕ್ತಪಡಿಸಿದ್ದಾರೆ. ಹಾಗೂ ಅಪ್ಪು ಅವರಂತೆ ಸಾಮಾಜಿಕ ಕೆಲಸಗಳನ್ನು ನಡೆಸಿಕೊಂಡು ಹೋಗಲಿ ಬಡಮಕ್ಕಳಿಗೆ ಆದರ್ಶವಾಗಿರಲಿ ಎಂದು ಅಪ್ಪು ಅವರ ಅಭಿಮಾನಿಗಳು ಹೇಳಿಕೊಂಡಿದ್ದಾರೆ