Advertisements

ಒಂದುವೇಳೆ ಆಸ್ಪತ್ರೆಲ್ಲಿ ಹೆಣ್ಣು ಹುಟ್ಟಿದ್ರೆ ಈ ಮಹಿಳಾ ಡಾಕ್ಟರ್ ಏನು ಮಾಡ್ತಾರೆ ಗೊತ್ತಾ! ನಿಜಕ್ಕೂ ಇಂಥ ಡಾಕ್ಟರ್ ಗಳು ಇನ್ನು ಇದ್ದಾರಾ ನಮ್ಮ ದೇಶದಲ್ಲಿ.! ನೋಡಿ ನಿಮಗೆ ತಿಳಿಯುತ್ತದೆ..!

Kannada News

ನಮ್ಮ ದೇಶಲ್ಲಿ ವಿವಿಧ ರೀತಿಯ ಜನಗಳನ್ನು ಕಾಣಬಹುದು ಕೆಲವರು ಹಲವು ರೀತಿಯ ವಿಶೇಷ ವ್ಯಕ್ತಿತ್ವವನ್ನು ಹೊಂದಿರುತ್ತಾರೆ, ಮುಖ್ಯವಾಗಿ ಹೇಳಬೇಕಾದ್ರೆ ಇಂದಿನ ದಿನಗಳಲ್ಲಿ ವೈದ್ಯರು ಅಂದ್ರೆ ಜನರಿಂದ ಹಣ ಕೀಳುವ ವೃತ್ತಿ ಅನ್ನೋ ಮನೋಭಾವ ಸಾಮಾನ್ಯರಲ್ಲಿ ಎಲ್ಲರಿಗೂ ಬಂದಿದೆ..

ಇಂತಹಾ ವೈದ್ಯರ ನಡುವೆ ಈ ರೀತಿಯ ವೈದ್ಯರುಗಳು ಇರುವುದು ನಿಜಕ್ಕೂ ನಾವು ಹೆಮ್ಮೆ ಪಡುವ ವಿಚಾರ ಅಂತ ಹೇಳಬಹುದು.. ಯಾಕೆಂದರೆ ಯಾರ ಮನೆಯಲ್ಲಿಯೇ ಆಗಲಿ ಗಂಡು ಹುಟ್ಟಿದ್ರೆ ಹೆಚ್ಚು ಖುಷಿ ಪಡುತ್ತಾರೆ ಆದ್ರೆ ಅದೇ ಹೆಣ್ಣು ಹುಟ್ಟಿದ್ರೆ ಸಂತೋಷ ಕಡಿಮೆ ಹಾಗೂ ಅದರಲ್ಲೂ ಬಡವರ ಮನೆಯಲ್ಲಿ ಹೆಣ್ಣು ಹುಟ್ಟಿದ್ರೆ ಸಂತೋಷವೇ ಇಲ್ಲವೇನೋ ಅನ್ನೋ ಭಾವನೆ ಸೃಷ್ಟಿಯಾಗಿದೆ,

ಆಗಾಗಿ ಭಾರತದ ಲಿಂ’ಗಾನುಪಾತದಲ್ಲಿ ಹುಡುಗಿಯರ ಸಂಖ್ಯೆಗಿಂತ ಹುಡುಗರ ಸಂಖ್ಯೆ ಹೆಚ್ಚಾಗಿದೆ.. ಈ ವೈದ್ಯರ ವಿಷ್ಯಕ್ಕೆ ತಿಳಿಯುವುದಾದ್ರೆ ಇಲ್ಲೊಬ ವೈದ್ಯ ದಂಪತಿಗಳು ಹೆಣ್ಣನ್ನು ಉಳಿಸಿ ಬೆಳೆಸುವುದಕ್ಕಾಗಿ ಶ್ರಮಿಸುತ್ತಿದ್ದಾರೆ.. ಹೌದು ಭ್ರೂ’ಣ ಹ’ತ್ಯೆಯನ್ನು ತಡೆಗಟ್ಟಲು ಮತ್ತು ಹೆಣ್ಣು ಮಗುವಿನ ಜನನವನ್ನು ಹೆಚ್ಚಿಸಲು ವಾರಣಾಸಿಯ ಈ ವೈದ್ಯೆ ಆಸ್ಪತ್ರೆಯ ಹಣವನ್ನ ಕೇಳೋದಿಲ್ಲ. ಇದರ ಬದಲಿಗೆ ಇಡೀ ನರ್ಸಿಂಗ್ ಹೋಂಗೆ ಸಿಹಿ ಹಂಚಿ ಸಂಭ್ರಮಿಸುತ್ತಾರೆ..

ಅಷ್ಟಕ್ಕೂ ಇವರ ಹೆಸರೇನು ಇವರ ಬಗ್ಗೆ ಒಂದಿಷ್ಟು ವಿಚಾರ ಇಲ್ಲಿ ತಿಳಿಯೋಣ, ಹೌದು ಇವರ ಹೆಸರು ಡಾ. ಶ್ರೀಪ್ರಧಾರ್, ಇವರು ದೆಹಲಿಯ ವಾರಣಾಸಿಯಲ್ಲಿದ್ದಾರೆ, ಇವರ ಪತಿ ಕೂಡ ಇವರ ಈ ಸಾಮಾಜಿಕ ಕೆಲಸಕ್ಕೆ ಕೈ ಜೋಡಿಸಿದ್ದಾರೆ. ಅಷ್ಟೇ ಅಲ್ದೆ ಹೆಣ್ಣು ಗಂಡು ಅನ್ನೋ ತಾರತಮ್ಯ ಮಾಡುವವರಿಗೆ ಸರಿಯಾಗಿಯೇ ಉತ್ತರ ನೀಡುತ್ತಾರೆ ಈ ದಂಪತಿ..

ಈ ಸಮಾಜ ಕಾರ್ಯಕ್ಕೆ ಕಾರಣವಾಗಿದ್ದು ಹೇಗೆ ಅನ್ನೋದನ್ನ ತಿಳಿಯುವುದಾದರೆ ಡಾ. ಶ್ರೀಪ್ರಾಧಾರ್ ವಾರಣಾಸಿಯ ಪಹಡಿಯಾ ಪ್ರದೇಶದಲ್ಲಿ ಕಾಶಿ ಮೆಡಿಕಲ್ ಹೆಸರಿನಲ್ಲಿ ನರ್ಸಿಂಗ್ ಹೋಂ ನಡೆಸುತ್ತಿದ್ದಾರೆ ಹೀಗಿರುವಾಗ ಬಡವರು, ಆರ್ಥಿಕವಾಗಿ ಸಫಲತೆ ಕಾಣದೆ ಇರೋರು ಹೆಣ್ಣು ಹುಟ್ಟಿದರೆ ತುಂಬ ದುಃಖ ಪಡುತ್ತಾರೆ ಹಾಗು ಅಳುತ್ತಾರೆ. ಇದನ್ನರಿತ ಡಾ. ಶ್ರೀಪ್ರಾಧಾರ್ ಅವರಿಂದ ಹಣವನ್ನ ಪಡೆಯುತ್ತಿರಲಿಲ್ಲ..

ಇದರಿಂದ ಈ ವೈದ್ಯರಿಗೆ ಆರ್ಥಿಕವಾಗಿ ತುಂಬಾನೇ ನಷ್ಟವಾಗುತ್ತದೆ ಹಾಗೂ ಆಸ್ಪತ್ರೆ ನಡೆಸಲು ಹಣದ ಕೊರತೆ ಉಂಟಾಗುತ್ತದೆ ಅನ್ನೋದನ್ನ ಕೂಡ ಹೇಳುತ್ತಾರೆ ಆದ್ರೆ ನಾವು ಮಾಡುವಂತ ಕೆಲಸ ನಮಗೆ ಆತ್ಮ ತೃಪಿ ನೀಡುತ್ತದೆ ಎಂದು ಹೇಳುತ್ತಾರೆ, ಇವರ ಈ ಕಾರ್ಯಕ್ಕೆ ಮೆಚ್ಚಿ ಪ್ರಧಾನಿ ಮೋದಿಯವರು

ವಾರಣಾಸಿಗೆ ಭೇಟಿ ನೀಡಿದಾಗ ಪ್ರಧಾನಿ ನರೇಂದ್ರ ಮೋದಿಯವರಿಗೆ ಡಾಕ್ಟರ್ ಶ್ರೀಪ್ರಾ ಬಗ್ಗೆ ತಿಳಿದು ತುಂಬಾ ಪ್ರಭಾವಿತರಾಗಿ. ನಂತರ ಪ್ರಧಾನಮಂತ್ರಿ ತಮ್ಮ ಭಾಷಣದಲ್ಲಿ ದೇಶದ ಎಲ್ಲಾ ವೈದ್ಯರಿಗೆ ಪ್ರತಿ ತಿಂಗಳು 9 ರಂದು ಜನಿಸಿದ ಹೆಣ್ಣು ಮಗುವಿಗೆ ಯಾವುದೇ ಶುಲ್ಕ ವಿಧಿಸಬಾರದು ಎಂದು ಕರೆ ನೀಡಿದ್ದರು..

ಅಷ್ಟೇ ಅಲ್ಲದೆ ಈ ವೈದ್ಯೆ ಬಡವರಿಗಾಗಿ ಉತ್ತಮ ಪೌಷ್ಟಿಕಾಂಶ ನೀಡಲು ತಲಾ 10 ಕೆಜಿ ಗೋದಿ ಮತ್ತು 5 ಕೆಜಿ ಅಕ್ಕಿಯನ್ನು ವಿಧವೆಯರಿಗೆ ಹಾಗು ಬಡವರಿಗೆ ನಿರ್ಗತಿಕರಿಗೆ ಒದಗಿಸುತ್ತಾರೆ. ಇವರಿಂದ ಸ್ಪೂರ್ತಿಗೊಂಡ ಬೇರೆ ವೈದ್ಯರು ಕೂಡ ಇವರ ಜೊತೆ ಈ ಸಾಮಾಜಿಕ ಕಾರ್ಯಕ್ಕೆ ಜೋಡಿಸಿದ್ದಾರೆ.. ಸ್ನೇಹಿತರೆ ಈ ವೈದ್ಯ ದಂಪತಿಗಳು ಮಾಡ್ತೀರೋ ಸಮಾಜಮುಖಿ ಕೆಲಸಕ್ಕೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ..