Advertisements

ನಟ ರಮೇಶ್ ಅರವಿಂದ್ ಅವರ ಮದುವೆಯ ಅಪರೂಪದ ಕ್ಷಣ..

Cinema

ಕನ್ನಡ ಚಿತ್ರರಂಗ ಕಂಡ ಪ್ರತಿಭಾವಂತ ನಟರಲ್ಲಿ ರಮೇಶ್ ಅರವಿಂದ್ ಕೂಡ ಒಬ್ಬರು ಅವರು ಜನಿಸಿದ್ದು ಸೆಪ್ಟೆಂಬರ್ ಹತ್ತು 1964 ರಲ್ಲಿ. ಅವರು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಇಂಜಿನಿಯರಿಂಗ್ ಪದವಿಯನ್ನು ಪಡೆದುಕೊಂಡಿದ್ದಾರೆ. ಇವರು ತಮ್ಮ ಕಾಲೇಜು ದಿನಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯ ಕ್ರಮಗಳಲ್ಲಿ ಭಾಗವಹಿಸುವ ಮೂಲಕ ಸಿನಿಮಾಗೆ ಸೇರುವ ಆಸಕ್ತಿಯನ್ನು ಬೆಳೆಸಿಕೊಂಡರು. ಬಾಲ ಚಂದ್ರನ್ ಅವರ ನಿರ್ದೇಶನದ ಸುಂದರ ಸ್ವಪ್ನಗಳು ಮೂಲಕ ಚಿತ್ರರಂಗಕ್ಕೆ ಪ್ರವೇಶ ಮಾಡಿದರು.

Advertisements
Advertisements

ಈ ಮೊದಲು ಬೆಂಗಳೂರು ದೂರದರ್ಶನದಲ್ಲಿ ಪರಿಚಯ ಎಂಬ ಕಾರ್ಯ ಕ್ರಮವನ್ನು ನಡೆಸು ಕೊಡುತ್ತಿದ್ದರು. ಅನೇಕ ಚಿತ್ರಗಳಲ್ಲಿ ನಾಯಕ ನಟನಾಗಿ ನಟಿಸಿ ಯಶಸ್ವಿಯಾಗಿದ್ದಾರೆ. ರಾಮ ಶಾಮ ಭಾಮ ಚಿತ್ರವನ್ನು ನಿರ್ದೇಶಿಸುವ ಮೂಲಕ ನಿರ್ದೇಶಕರಾಗಿದ್ದಾರೆ. ಹೀಗೆ ಕನ್ನಡ ಸೇರಿದಂತೆ ತೆಲುಗು ತಮಿಳು ಮಲಯಾಳಂ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ನಟನೆಗೆ ಹಲವು ಪ್ರಶಸ್ತಿಗಳು ಲಭಿಸಿವೆ. ಅರವಿಂದ್ ಅವರು ಸರ್ 1991 ರಲ್ಲಿ ಅರ್ಚನಾ ಅವರನ್ನು ಮದುವೆಯಾದರು.