Advertisements

ನಾನು ಐಟಂ ಸಾಂಗ್ ಮಾಡುವುದು ಹಣಕ್ಕಾಗಿ ಅಲ್ಲ, ನಿಜವಾದ ಕಾರಣ ತಿಳಿಸಿದ ನಟಿ ತಮನ್ನಾ! ಅಬ್ಬಬ್ಬಾ ಉತ್ತರ ಕೇಳಿ ಬೆಚ್ಚಿಬಿದ್ದ ಅಭಿಮಾನಿಗಳು!!

Kannada News

ಒಂದು ಕಾಲದಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು ಮಿಲ್ಕಿ ಬ್ಯೂಟಿ ಎಂದೇ ಖ್ಯಾತಿ ಪಡೆದಿರುವ ತಮನ್ನಾ ಭಾಟಿಯಾ. ಆದರೆ ಇತ್ತೀಚೆಗೆ ತಮನ್ನಾ ಅವರ ಬೇಡಿಕೆ ಕಡಿಮೆ ಆಗುತ್ತಾ ಬರುತ್ತಿದೆ.‌ಹೊಸ ನಟಿಯರ ಆಗಮನದಿಂದಾಗಿ ಒಂದು ಕಾಲದಲ್ಲಿ ಟಾಪ್‌ ನಟಿಯಾಗಿದ್ದ ತಮನ್ನಾ ಅವರು ಇದೀಗ ಸಿನಿಮಾದಲ್ಲಿ ಕಡಿಮೆ ಕಾಣಿಸಿಕೊಳ್ಳುತ್ತಿದ್ದಾರೆ. 1989 ಡಿಸೆಂಬರ್ 21 ರಂದು ಮುಂಬೈನಲ್ಲಿ ಸಿಂಧಿ ಕುಟುಂಬದಲ್ಲಿ ಜನಿಸಿದ್ದ, ತಮನ್ನಾ ಅವರ ತಂದೆ ಸಂತೋಷ್ ಭಾಟಿಯಾ ಒಬ್ಬ ವಜ್ರ ವ್ಯಾಪಾರಿ. ಮುಂಬೈನಲ್ಲಿಯೇ ವಿಧ್ಯಾಭ್ಯಾಸ ಮುಗಿಸಿದ ಅವರು ತಮ್ಮ 13 ನೇ ವಯಸ್ಸಿನಲ್ಲಿಯೇ ನಟನೆಗೆ ಇಳಿದಿದ್ದರು.

Advertisements
Advertisements

ಮೊದಲ‌ ಬಾರಿ 2005 ರಲ್ಲಿ ತೆರೆ ಕಂಡ `ಚಾಂದ್ ಸಾ ರೋಷನ್ ಚೆಹರಾ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. 2006 ರಲ್ಲಿ ತೆಲುಗಿನ ಶ್ರೀ ಮತ್ತು ತಮಿಳಿನ ಕೇಡಿ ಚಿತ್ರಗಳಲ್ಲಿ ನಟಿಸಿ ಅದ್ಭುತ‌ ನಟಿ ಅನ್ನಿಸಿಕೊಂಡರು. ಆ ನಂತರ ತೆರೆಕಂಡ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳು ಕೂಡ ತಮನ್ನಾ ಅವರಿಗೆ ಇನ್ನಷ್ಟು ಖ್ಯಾತಿ ನೀಡಿತ್ತು.‌ ಅದೇ ರೀತಿ, ‘ಕೊಂಚಂ ಇಷ್ಟಂ ಕೊಂಚಂ ಕಷ್ಟಂ’, ಪೈಯ್ಯ, 100 ಲವ್, ಬದ್ರಿನಾಥ್ ಮುಂತಾದ ಚಿತ್ರಗಳು ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ತಮನ್ನಾಗೆ ಭದ್ರವಾದ ತಳಪಾಯ ಹಾಕಿದವು. ಹಿಂದಿಯಲ್ಲಿ ಹಿಮ್ಮತ್ತವಾಲಾ, ಎಂಟರ್ಟೇನ್ಮೆಂಟ್ ಮುಂತಾದ ಚಿತ್ರಗಳಲ್ಲಿ ನಟಿಸಿದರು.

ಎರಡು ಭಾಗಗಳಲ್ಲಿ ತೆರೆಕಂಡ ಬಾಹುಬಲಿ ಚಿತ್ರ ತಮನ್ನಾ ಭಾರತದಾದ್ಯಂತ ಜನಪ್ರಿಯತೆ ತಂದು ಕೊಟ್ಟಿತು. ಚಿರಂಜೀವಿ ಜೊತೆ ಭೋಲ ಶಂಕರದಲ್ಲಿಯೂ ಮಿಲ್ಕಿ‌ ಬ್ಯೂಟಿ ನಟಿಸಿದ್ದಾರೆ. ಇನ್ನು ಕೇವಲ‌ ನಟಿಯಾಗಿ ಅಷ್ಟೇ ಅಲ್ಲ ಐಟಂ ಹಾಡುಗಳಿಗೂ ಸೊಂಟ ಕುಣಿಸಿದ್ದಾರೆ. ಕನ್ನಡದಲ್ಲಿ ಸಿನಿಮಾದಲ್ಲಿ ನಟನೆ ಮಾಡದಿದ್ದರೂ `ಜಾಗ್ವಾರ್’ ಮತ್ತು `ಕೆಜಿಎಫ್’ ಚಿತ್ರಗಳ ಐಟಂ ಹಾಡುಗಳಿಗೆ ನೃತ್ಯ ಮಾಡಿದ್ದಾರೆ. ಹೀಗೆ ತಮನ್ನಾ ಇಂಡಸ್ಟ್ರಿಗೆ ಬಂದು 16 ವರ್ಷಗಳಾಗಿದ್ದು, 50ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೋಟಿಗೂ ಮೀರಿ ಸಂಭಾವನೆ ಪಡೆಯುತ್ತಿದ್ದ ತಮನ್ನಾ‌ ಇದೀಗ ಸಿನಿಮಾ ಅವಕಾಶದಿಂದ ವಂಚಿತರಾಗುತ್ತಿದ್ದಾರೆ.

ಇದರಿಂದ ತೀವ್ರವಾಗಿ ನೊಂದಿದ್ದ ತಮನ್ನಾ ಇನ್ನು‌ ಮುಂದೆ‌ ಸಿನಿಮಾ ಸಹವಾಸವೇ ಬೇಡ ಅನ್ನುವಷ್ಟರಮಟ್ಟಿಗೆ‌ ಬೇಸರ ಗೊಂಡಿದ್ದರು.‌ ಆದರೆ ಇದೀಗ ತಮನ್ನಾ ಅವರು ನಟನೆಗಿಂತ ಐಟಂ ಹಾಡುಗಳಿಗೆ ಕುಣಿಯಲು ಆರಂಭಿಸಿದ್ದು, ಇದು ಹಣಕ್ಕಾಗಿ ಇರಬಹುದೇ ಎಂದು ಅನೇಕರು ಪ್ರಶ್ನೆ ಮಾಡಿದ್ದರು. ಆದರೆ ತಮನ್ನಾ ಅವರಿಗೆ ಮೊದಲಿನಿಂದಲೂ ನೃತ್ಯ ‌ಮೇಲೆ ಒಲವು ಹೆಚ್ಚು. ಅದ್ಬುತ ನೃತ್ಯಗಾರ್ತಿಯಾದ ತಮನ್ನಾ ಅವರು ಈ ಪ್ರೀತಿಯಿಂದಾಗಿಯೇ ಐಟಂ‌ ಹಾಡಿಗೆ ಕುಣಿಯುತ್ತಿದ್ದೇನೆ, ಅದು‌ ಬಿಟ್ಟು ಹಣಕ್ಕಾಗಿ ಅಲ್ಲ ಅಂದಿದ್ದಾರೆ. ಈ ಮಾಹಿತಿಯ ಬಗ್ಗೆ ನಿಮ್ಮ‌ ಅನಿಸಿಕೆ ಏನು ಅನ್ನುವುದನ್ನು ತಪ್ಪದೇ ಕಾಮೆಂಟ್ ಮಾಡಿ ತಿಳಿಸಿ.