ನಮಸ್ಕಾರ ವೀಕ್ಷಕರೆ ಪವರ್ ಸ್ಟಾರ್ ಡಾಕ್ಟರ್ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ನೋವಿನಿಂದ ಇನ್ನು ಆಚೆ ಬರದ ಪುನೀತ್ ರಾಜಕುಮಾರ್ ಪತ್ನಿ ಅಶ್ವಿನಿ ಮೇಡಮ್ ಅವರು ಅಪ್ಪು ಹುಟ್ಟುಹಬ್ಬದ ದಿನ ಬಿಡುಗಡೆ ಆಗಿರುವ ಜೇಮ್ಸ್ ಸಿನಿಮಾವನ್ನು ನಾನು ನೋಡುವುದಿಲ್ಲ ಎಂದಿದ್ದಾರೆ! ಮಾಧ್ಯಮಗಳ ಜೊತೆ ಮಾತನಾಡಿರುವ ಅವರು ನನ್ನ ಮತ್ತು ಪುನೀತ್ ರಾಜಕುಮಾರ್ ಅವರ ಬದುಕಿನ ಜರ್ನಿ ಇಪ್ಪತ್ತೊಂದು ವರ್ಷಗಳದ್ದು ಸಡನ್ ಆಗಿ ಅವರು ಹೀಗೆ ಬಿಟ್ಟು ಹೋಗುತ್ತಾರೆ

ಎಂದು ನಾನು ಭಾವಿಸಿರಲಿಲ್ಲ ಅವರ ಅಗಲಿಕೆಯ ನೋವನ್ನು ಇಂದಿಗೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ನಾನು ಆ ನೋವಿನಿಂದ ಇನ್ನೂ ಆಚೆ ಬಂದಿಲ್ಲ.. ಹಾಗಾಗಿ ತೆರೆಯ ಮೇಲೆ ನಾನು ಅವರನ್ನು ನೋಡಲಾರೆ ಎಂದು ತಮ್ಮ ನೋವಿನ ಮಾತುಗಳನ್ನು ಹಂಚಿ ಕೊಂಡಿದ್ದಾರೆ ಅಭಿಮಾನಿಗಳು ತೋರುತ್ತಿರುವ ಪ್ರೀತಿಯ ಬಗ್ಗೆಯೂ ಮಾತನಾಡಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಅಭಿಮಾನಿಗಳು ಸ್ವಯಂ ಪ್ರೇರಿತರಾಗಿ ಅನ್ನದಾನ ಮತ್ತು ನೇತ್ರದಾನ ದಂತಹ ಪುಣ್ಯದ ಕೆಲಸಗಳನ್ನು ಮಾಡುತ್ತಿದ್ದಾರೆ..

ಅದಕ್ಕೆ ಪುನೀತ್ ರಾಜಕುಮಾರ್ ಅವರೇ ಪ್ರೇರಣೆ ಎಂದು ಹೇಳುತ್ತಿದ್ದಾರೆ ಇಂತಹ ಪ್ರೀತಿಯ ಅಭಿಮಾನಿಗಳನ್ನು ಅವರು ಪಡೆದಿದ್ದರು ಈಗ ಅಭಿಮಾನಿಗಳ ಮೂಲಕ ಅವರು ಸದಾ ನಮ್ಮೊಂದಿಗೆ ಇರುತ್ತಾರೆ ಎಂದಿದ್ದಾರೆ ಇನ್ನು ಅಪ್ಪು ಅವರ ಹುಟ್ಟುಹಬ್ಬದ ದಿನ ಪ್ರಯುಕ್ತ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿ ತನ್ನ ಪ್ರೀತಿಯ ಪತಿ ಮುತ್ತು ರತ್ನ ಪುನೀತ್ ರಾಜಕುಮಾರ್ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ ಅಶ್ವಿನಿ ಮೇಡಮ್, ಅಶ್ವಿನಿ ಅವರ ಈ ನೋವಿನ ನಿರ್ಧಾರಕ್ಕೆ ಅಪ್ಪು ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ ಈ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ