Advertisements

ಸಾಲು ಸಾಲು ವಿವಾದಗಳಿದ್ರೂ, ಕಾಂಟ್ರವರ್ಸಿ ಮಾಡಿಕೊಂಡ್ರು ದರ್ಶನ್ ಗೆ ಇರುವ ಫ್ಯಾನ್ ಫಾಲೋವರ್ಸ್ ಮಾತ್ರ ಕಡಿಮೆಯಾಗುವುದಿಲ್ಲ ಯಾಕೆ ಗೊತ್ತ.?

Kannada News

ನಮಸ್ಕಾರ ಗೆಳೆಯರೆ ಚಾಲೆಂಜಿಂಗ್ ಸ್ಟಾರ್ ಎಂದೆ ಖ್ಯಾತಿ ಗಳಿಸಿದ ನಟ ಅಂದ್ರೆ ಡಿ ಬಾಸ್ ದರ್ಶನ್. ತೂಗುದೀಪ ಶ್ರೀನಿವಾಸ್ ಅವರ ಪುತ್ರ. ಮೇರು ನಟನಾಗಿ ದರ್ಶನ ತಂದೆ ಸಿನಿ ಇಂಡಸ್ಟ್ರಿ ಅಲ್ಲಿ ಅಪಾರ ಹೆಸರು ಗಳಿಸಿದರು ಸಹ ದರ್ಶನ ಅವರು ಈ ಮಟ್ಟಿಗೆ ಹೆಸರು ಗಳಿಸಲು ಕಾರಣ ಅವರು ಪಟ್ಟ ಕಷ್ಟ ಹಾಗೂ ಪರಿಶ್ರಮ‌. ತಾನು ಸಿನಿಮಾದಲ್ಲಿ ನಟಿಸಬೇಕು, ಹೆಸರು ಗಳಿಸಬೇಕು..

ಎಂದು ಆಸೆ ಹೊತ್ತುಕೊಂಡಿದ್ದ, ಡಿ ಬಾಸ್ ಲೈಟ್ ಮ್ಯಾನ್ ಆಗಿ ಕೆಲಸ ಪ್ರಾರಂಭಿಸುತ್ತಾರೆ. ಅದೇ ರೀತಿ ಮುಂದು ವರೆದು ಇಂದು ಕರ್ನಾಟಕ ಮಾತ್ರವಲ್ಲದೆ ಈಡೀ ಭಾರತದಾದ್ಯಂತ ಅಭಿಮಾನಿ ಬಳಗ ಕಟ್ಟಿಕೊಂಡಿದ್ದಾರೆ ನಮ್ಮ ಡಿ ಬಾಸ್. ಹಗಲಿರುಳು ದುಡಿದು, ತಮ್ಮ ಸ್ವಂತ ಪ್ರತಿಭೆಯಿಂದ ಗುರುತಿಸಿಕೊಂಡು ಅವಕಾಶ ಗಿಟ್ಟಿಸಿಕೊಂಡು ಇಷ್ಟು ಹೆಸರು ಗಳಿಸಿದ್ದಾರೆ.

ಇನ್ನು ಮೊದಲೆಲ್ಲ ದರ್ಶನ ಆರಾಮಾಗಿ ಇರುತ್ತಿದ್ದರು, ಅವರು ಹೆಚ್ಚೆಚ್ಚು ಬೆಳೆದಂತೆ ಅವರಿಗೆ ಸಂಬಂಧಿಸಿದಂತೆ ವಿವಾದಗಳು ಸಹ ಇವೆ. ಆದರು ಸಹ ಅವರಿಗಿರುವ ಫ್ಯಾನ ಫಾಲೋವರ್ಸ ಮಾತ್ರ ಕಡಿಮೆ ಆಗಿಲ್ಲ. ಹೌದು ಯಾವತ್ತು ಜನ ಸುಮ್ಮನ್ನೆ ಒಬ್ಬರನ್ನು ಈ ಪಾಟಿ ಗೌರವಿಸುವುದಿಲ್ಲ. ದರ್ಶನ ಅಭಿಮಾನಿಗಳು ಅವರನ್ನು ಲೈಕ್ ಮಾಡಲು ಹಲವು ಕಾರಣಗಳು ಇಲ್ಲಿವೆ. ಮೊಲದನೆಯದಾಗಿ ದರ್ಶನ ಕುರಿತು ಹೇಳುವುದಾದರೆ ಅವರ ಪಾಸಿಟಿವ್ ಆ್ಯಟಿಟುಡ್. ಹೌದು ಅವರು ಸದಾ ತಮ್ಮ ಪಾಡಿಗೆ ತಾವು ಇರುತ್ತಾರೆ.

ಯಾರ ಕುರಿತು ಹೆಚ್ಚಾಗಿ ತಲೆ ಕಡಿಸಿಕೊಳ್ಳುವುದಿಲ್ಲ. ಹೆಚ್ಚಾಗಿ ಲಿಮಿಟೆಡ್‌ ಜನರೊಂದಿಗೆ ಮಾತ್ರ ಬೆರೆಯುತ್ತಾರೆ. ಸ್ನೇಹ ಗೆಳೆಯರು ಅಂತಾ ಬಂದಾಗ ಇವರದ್ದು ಕೈ ಮುಂದೆ. ಸದಾ ಅವರ ಸಹಾಯಕ್ಕಾಗಿ ಮುಂದಾಗುತ್ತಾರೆ.ಆದರೆ ಅವರಿಂದ ಒಂದು ಸಾರಿ ಮನಸ್ತಾಪ, ನಂಬಿಕೆಗೆ ಅರ್ಹರಲ್ಲ ಎಂದು ತಿಳಿದರೆ ದರ್ಶನ ಮೌನವಾಗಿಯೇ ಅವರಿಂದ ದೊರ ಉಳಿದು ಬಿಡುತ್ತಾರೆ.

ಎರಡನೇಯ ಮಾತು ಎಂದರೆ ಅವರ ಬಾಡಿ ಹಾಗೂ ಫಿಟ್ ನೆಸ್. ಅವರ ಹೈಟ್, ವೆಟ್ ಅವರ ಲುಕ್ ಟೊಟಲ್ ಆಗಿ ಅವರ ಫುಲ್ ಫರ್ನ್ಸಾಲಿಟಿ ಅಂದ್ರೆ ಅಭಿಮಾನಿಗಳಿಗೆ ಒಂಥರಾ ಇಷ್ಟ. ಅವರದ್ದು ಆರು ಅಡಿ, ಮೂರು ಇಂಚು ಎತ್ತರದ ದೇಹ. ಅವರ ಡೈಲಾಗ, ಹಾಗೂ ಫೈಟಿಂಗ್ ಇಂದಲೇ ಅವರ ಸಿನಿಮಾಗಳು ಫೇಮಸ್ ಆಗುತ್ತವೆ. ಅವರಿಗೆ ಪಾತ್ರ ಯಾವುದೇ ನೀಡಲಿ ಅದನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಹೋಗುವುದರಲ್ಲಿ ದರ್ಶನ ನಿಸ್ಸಿಮರು.

ಮೂರನೆಯದು ಎಂದರೆ ಅವರ ಎಲ್ಲರೂ ಬೆಳೆಯಬೇಕು ಎಲ್ಲರಿಗೂ ಅವಕಾಶ ನೀಡಬೇಕು ಎಂಬುವುದು. ಹೌದು ಸದಾ ಡಿ ಬಾಸ್ ಸ್ನೇಹಕ್ಕಾಗಿ ತಲೆ ಬಾಗ್ತಾರೆ. ಇದೇ ಕಾರಣಕ್ಕೆ ಅವರು ಹೊಸ ಕಲಾವಿದರೆ ಅವಕಾಶ ನೀಡುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ ಸಂಗೀತ ನಿರ್ದೇಶಕ ಹರಿಕೃಷ್ಣ, ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಹೀಗೆ ಅನೇಕರ ಪ್ರತಿಭೆ ಗುರುತಿಸಿ ಅವರಿಗೆ ಅವಕಾಶ ನೀಡಿ ಇಂದು ಕನ್ನಡ ಸಿನಿಮಾ ರಂಗದಲ್ಲಿ ಸ್ಟಾರ್ ನಟರಾಗಲು ಮೊದಲು ಅವಕಾಸ ನೀಡಿದ್ದೆ ನಮ್ಮ ಡಿ ಬಾಸ್.

ಇನ್ನು ಇವರಲ್ಲಿ ಇರುವ ಮತ್ತೊಂದು ಗುಣವೆಂದರೆ ಕಷ್ಟದಲ್ಲಿ ಇರುವವರಿಗೆ ಬೆನ್ನೆಲುಬಾಗಿ ನಿಲ್ಲಿವುದು. ಅವರಿಗೆ ಸಹಾಯ ಮಾಡುವುದು.ಯಾರೇ ಕಷ್ಟ ಅಂತ ಬಂದರು ಸಹ ಅವರನ್ನು ಹಾಗೆ ವಾಪಾಸ್ ಕಳಿಸುವುದಿಲ್ಲ. ತಮ್ಮ ಕೈಲಾದಷ್ಟು ಸಹಾಯ ಮಾಡಿ ಅವರುಗೆ ನೆರವಾಗುತ್ತಾರೆ. ಈ ಕಾರಣದಿಂದಲೆ ದರ್ಶನ ಹಲವರ ಮನಗೆದ್ದಿದ್ದಾರೆ.

ಇನ್ನು ಹೆಚ್ಚಾಗಿ ದರ್ಶನ್ ಅವರನ್ನು ಕಲಿಯುಗದ ಕರ್ಣ ಅಂಬರೀಶ್ ಅವರಿಗೆ ಹೋಲಿಕೆ ಮಾಡುತ್ತಾರೆ. ಕಾರಣ ಅಂಬರೀಶ್ ರ ವ್ಯಕ್ತಿತ್ವವನ್ನು ದರ್ಶನ್ ಸಹ ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ. ನಿಮ್ಮೆಲ್ಲರಿಗೂ ತಿಳಿದಿರುವಂತೆ ಅಂಬರೀಶ್ ಮಾತು ಒರಟಾಗಿದ್ದರು, ಅವರ ಮನಸ್ಸು ಕಲ್ಮಶ. ಯಾವುದೇ ವಿಚಾರ ಇರಲಿ ನೇರವಾಗಿ ಹೇಳಿ ಬಿಡುತ್ತಾರೆ.

ದಾನ ಧರ್ಮ ಮಾಡುವುದರಲ್ಲಿ ಎತ್ತಿದ ಕೈ ಯಾರೇ ಸಹಾಯ ಕೇಳಿದರು ಕೂಡ ಅಂಬರೀಶ್ ಮಾಡುತ್ತಿದ್ದರು.ಅದೇ ರೀತಿ ದರ್ಶನ ಸಹ ಅವರ ಹಾಗೆ ಮಾಡುತ್ತಾರೆ.ಇದೇ ಕಾರಣಕ್ಕೆ ಅಂಬರೀಶ್ ಅಭಿಮಾನಿಗಳು ಸಹ ದರ್ಶನ ಅವರಿಗೆ ಹೆಚ್ಚು ಇಷ್ಟ ಪಡುತ್ತಾರೆ. ಇದೇಲ್ಲವುದಕ್ಕಿಂತ ಹೆಚ್ಚಾಗಿ ದರ್ಶನ ಪ್ರಾಣಿಗಳನ್ನು ಇಷ್ಟ ಪಡುತ್ತಾರೆ. ಅವುಗಳನ್ನು ಸಾಕುವುದರ ಮೂಲಕ ಅವುಗಳ ಸಂಪೂರ್ಣ ಜವಾಬ್ದಾರಿ ಹೊತ್ತಿದ್ದಾರೆ. ಗೋಧಾಮಗಳನ್ನು ನೋಡಿಕೊಳ್ಳುತ್ತಾರೆ. ಹೆಚ್ಚಾಗಿ ತಾವು ಸಾಕಿದ ಪ್ರಾಣಿಗಳ ಜೊತೆಗೆ ಸಮಯ ಕಳೆಯುತ್ತಾರೆ.

ಸದ್ಯ ಇದೆಲ್ಲ ಕಾರಣಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ ಕನ್ನಡ ಜನತೆಯ ಮನದಲ್ಲಿ ಮಹಾರಾಜರ ಹಾಗೆ ಸ್ಥಾನ ಪಡೆದುಕೊಂಡಿದ್ದಾರೆ. ಸದ್ಯ ಅವರ ಅಭಿನಯಿಸಿದ ಬಹು ನಿರೀಕ್ಷೆ ಚಿತ್ರ ಕ್ರಾಂತಿ ಜನವರಿ 26 ರಂದು ತೆರೆ ಕಾಣಲಿದ್ದು, ಅಭಿಮಾನಿಗಳು ಅದಕ್ಕಾಗಿ ಕಾಯುತ್ತಿದ್ದಾರೆ. ಈ ಸಿನಿಮಾದ ಪ್ರಚಾರ ಸಹ ಅಭಿಮಾನಿಗಳೆ ಖುದ್ದಾಗಿ ಮಾಡುತ್ತಿರುವುದು ಇನ್ನು ಹೆಮ್ಮೆಯ ವಿಷಯವಾಗಿದೆ.