Advertisements

ಹಳೇ ಬಟ್ಟೆ ಹಾಕಿ ಊಟ ಮಾಡುತ್ತಿದ್ದ ವ್ಯಕ್ತಿನಾ ಆಚೆ ಓಡಿಸಿದರು ಆಮೇಲೆ ಏನಾಯ್ತು ನೋಡಿದ್ರೆ ಮೈ ಜುಮ್ ಅನ್ನುತ್ತೆ.!

Kannada News

ನಮಸ್ಕಾರ ವೀಕ್ಷಕರೇ ಆಂಧ್ರಪ್ರದೇಶದ ಗುಂಟೂರಿನಲ್ಲಿ ವಾಸ ಮಾಡುತ್ತಿರುವ ಸುಂದರ್ ರೆಡ್ಡಿ ಎಂಬ ವ್ಯಕ್ತಿ ಯೊಬ್ಬರ ಜೀವನದಲ್ಲಿ ನಡೆದಂತಹ ಒಂದು ನಿಜ ಘಟನೆಯ ಬಗ್ಗೆ ಸಂಪೂರ್ಣವಾಗಿ ಮಾಹಿತಿ ಓದಿ ನೋಡಿ, ಸ್ನೇಹಿತರೊಬ್ಬರು ಒಂದು ದಿನ ಸುಂದರ್ ರೆಡ್ಡಿ ಅವರ ಮನೆಗೆ ಬಂದು ನನ್ನ ಮಗನ ಮದುವೆ ಭಾನುವಾರದಂದು ನಡೆಯಲಿದೆ ನೀವು ನಿಮ್ಮ ಕುಟುಂಬ ಸಮೇತರಾಗಿ ತಪ್ಪದೇ ಮದುವೆಗೆ ಬರಬೇಕು ಎಂಧು ಹೇಳಿದರು ಆಗ ಸುಂದರ್ ರೆಡ್ಡಿ ಸರಿ ಬರ್ತೀನಿ ಎಂದು ಸ್ನೇಹಿತರಿಗೆ ಹೇಳಿ ಕಳುಹಿಸಿದರು ಭಾನುವಾರ ಬಂತು ಸ್ನೇಹಿತ ಹೇಳಿದಂತೆ ಆತನ ಮಗನ ಮದುವೆಗೆ ಹೋದ ಸುಂದರ್ ರೆಡ್ಡಿ ವಧು-ವರರಿಗೆ ಆಶೀರ್ವಾದ ಮಾಡಿದರು ಸ್ವಲ್ಪ ಸಮಯ ಕಲ್ಯಾಣ ಮಂಟಪದಲ್ಲೆ ಕೂತ ಸುಂದರ್ ರೆಡ್ಡಿಗೆ ಯಾಕೋ ಹೊಟ್ಟೆ ಹಸಿಯಲು ಶುರುವಾಯಿತು ತಡಿ ಹೇಗಿದ್ದರೂ ಕಲ್ಯಾಣ ಮಂಟಪದಲ್ಲೆ ಇದ್ದೀನಿ ಇಲ್ಲೇ ಊಟ ಮಾಡಿ ಹೋಗೋಣ ಎಂದು ಊಟದ ಮನೆಗೆ ಹೋಗಿ ಪಂಕ್ತಿಯಲ್ಲಿ ಸುಂದರ್ ರೆಡ್ಡಿ ಕುಳಿತಿದ್ದಾರೆ..

Advertisements
Advertisements

ಸುಂದರ್ ರೆಡ್ಡಿ ಚೇರಿನ ಮೇಲೆ ಊಟಕ್ಕೆ ಕೂತಿದ್ದೆ ತಡ ಅಲ್ಲೆ ಇದ್ದ ಅಪರಿಚಿತ ವ್ಯಕ್ತಿಯೊಬ್ಬರು ಓಡಿಬಂದು ಏಯ್ ಎದ್ದೇಳು ಮೇಲೆ ಯಾರು ನಿಮ್ಮನ್ನೆಲ್ಲ ಒಳಗೆ ಬಿಟ್ಟಿದ್ದು ಛತ್ರಗಳಲ್ಲಿ ಮದುವೆ ನಡೆಯುತ್ತಿದ್ದರೆ ಸಾಕು ಓಸಿ ಊಟಕ್ಕೆ ಓಡಿ ಬಂದು ಬಿಡ್ತೀರಾ ನಿಮಗೆ ನಾಚಿಕೆ ಮಾನ ಮರ್ಯಾದೆ ಏನು ಇಲ್ವಾ ಎಂದು ಹೇಳಿ ಸುಂದರ್ ರೆಡ್ಡಿಗೆ ಊಟ ಹಾಕಲು ಇಟ್ಟಿದ್ದ ಬಾಳೆ ಎಲೆಯನ್ನು ಎತ್ತಿಕೊಂಡು ಸುಂದರ್ ರೆಡ್ಡಿಯ ಕೈಯನ್ನು ಹಿಡಿದುಕೊಂಡು ಎಳೆದು ಆಚೆಗೆ ಕರೆದುಕೊಂಡು ಬಿಟ್ಟರು ಆದರೆ ಸುಂದರ್ ರೆಡ್ಡಿ ಪಕ್ಕದಲ್ಲೆ ಕುಳಿತಿದ್ದ ಬೇರೆ ಜನಗಳಿಗೆ ಮಾತ್ರ ತುಂಬಾ ಚೆನ್ನಾಗಿ ಊಟವನ್ನು ಬಡಿಸಲಾಗುತ್ತಿತ್ತು ಸುಂದರ್ ರೆಡ್ಡಿಗೆ ತನಗೆ ಏಕೆ ಈ ವ್ಯಕ್ತಿ ಈ ರೀತಿ ಅವಮಾನ ಮಾಡಿ ಮಂಟಪದಿಂದ ಹೊರಗೆ ಓಡಿಸಿದ ಎಂದು ಲೇಟಾಗಿ ಅರ್ಥವಾಯಿತು ಹೌದು ಮದುವೆಗೆ ಹೋದಾಗ ಸುಂದರ್ ರೆಡ್ಡಿ ಇಸ್ತ್ರಿ ಮಾಡಿರದ ಹಳೆಯ ಬಟ್ಟೆಯನ್ನು ಹಾಕಿಕೊಂಡು ಹೋಗಿದ್ದರು ಇದೇ ಹಳೆಯ ಬಟ್ಟೆಯೆ ಆ ಅಪರಿಚಿತ ವ್ಯಕ್ತಿ ಸುಂದರ್ ರೆಡ್ಡಿಯನ್ನು ಊಟದ ಪಂಕ್ತಿಯಿಂದ ಎದ್ದು ಹೊರಗಡೆ ಹೋಗುವಂತೆ ಮಾಡಿಸಿತ್ತು

ಇದನ್ನು ಅರ್ಥಮಾಡಿಕೊಂಡ ಸುಂದರ್ ರೆಡ್ಡಿ ಮದುವೆ ಮಂಟಪದಿಂದ ವಾಪಸ್ ತನ್ನ ಮನೆಗೆ ಹೋಗಿ ಒಂದು ಹೊಸ ಬಟ್ಟೆ ಮತ್ತು ಒಡವೆಗಳನ್ನು ಹಾಕಿಕೊಂಡು ಪುನಹ ಕಲ್ಯಾಣಮಂಟಪಕ್ಕೆ ಬಂದು ತಾನು ಈ ಹಿಂದೆ ಕೂತಿದ್ದ ಅದೇ ಪಂಕ್ತಿಯಲ್ಲಿ ಸುಂದರ್ ರೆಡ್ಡಿ ಊಟಕ್ಕೆ ಕೂತರು..ಈ ಬಾರಿ ಸುಂದರ್ ರೆಡ್ಡಿಯನ್ನು ಮೇಲೆ ಎದ್ದೇಳು ವಂತೆ ಯಾರು ಕೂಡ ಹೇಳಲಿಲ್ಲ ಮದುವೆಯಲ್ಲಿ ಮಾಡಿಸಿದ ತರತರಹದ ತಿಂಡಿ ತಿನಿಸುಗಳನ್ನು ಸುಂದರ್ ರೆಡ್ಡಿ ಮುಂದೆ ಇದ್ದ ಬಾಳೆ ಎಲೆಯ ಮೇಲೆ ಭಟ್ಟರು ತಂದು ಬಡಿಸಿದರು ಎಷ್ಟು ಹೊತ್ತು ಕಳೆದರು ಸುಂದರ್ ರೆಡ್ಡಿ ಎಲೆಯ ಮೇಲೆ ಇದ್ದ ಯಾವೊಂದು ತಿಂಡಿಯನ್ನು ಸಹ ತಿನ್ನಲಿಲ್ಲ ಇದನ್ನು ಗಮನಿಸಿದ ಆವಾಗಲೇ ಸುಂದರ್ ರೆಡ್ಡಿಯನ್ನು ಆಚೆ ಹೋಗುವಂತೆ ಹೇಳಿದ್ದ ಅದೇ ವ್ಯಕ್ತಿ ಸುಂದರ್ ರೆಡ್ಡಿಯ ಹತ್ತಿರ ಬಂದು ಯಾಕೆ ಸರ್ ಊಟ ಮಾಡುತ್ತಿಲ್ಲ ದಯವಿಟ್ಟು ಊಟ ತಿನ್ನಿ ಸರ್ ನಿಮಗೆ ಬೇರೆ ಏನಾದರೂ ಬೇಕಾ ಸರ್ ಎಂದು ಕೇಳಿದ ಹಳೆಯ ಬಟ್ಟೆಯನ್ನು ಹಾಕಿಕೊಂಡು ಬಂದಾಗ ತನ್ನನ್ನು ಊಟ ಮಾಡಬೇಡ ಎದ್ದು ಹೋಗು ಎಂದೂ ರೇಗಾಡಿದ್ದ

ಅದೇ ವ್ಯಕ್ತಿ ಪುನಹ ಹೊಸ ಬಟ್ಟೆ ಮತ್ತು ಒಡವೆಗಳನ್ನು ಹಾಕಿಕೊಂಡು ಬಂದಾಗ ಇಷ್ಟು ಚೆನ್ನಾಗಿ ಸತ್ಕರಿಸುತ್ತಿರುವುದನ್ನು ನೋಡಿದ ಸುಂದರ್ ರೆಡ್ಡಿ ನಗುತ್ತಾ ಪಂಕ್ತಿಯಿಂದ ಮೇಲೆ ಎದ್ದು ಆ ವ್ಯಕ್ತಿಗೆ ಮುಖಕ್ಕೆ ಹೊಡೆಯುವ ಹಾಗೆ ಈ ರೀತಿ ಹೇಳಿದರು ಒಬ್ಬ ಮನುಷ್ಯನಿಗೆ ತುಂಬಾ ಅವಶ್ಯಕತೆ ಇರುವುದು ಅನ್ನ ಆದರೆ ನೀವು ಒಬ್ಬ ವ್ಯಕ್ತಿ ಹಾಕಿರೋ ಬಟ್ಟೆ ಮತ್ತು ಆತನ ಸ್ಟೇಟಸ್ ನೋಡಿ ಅವನಿಗೆ ಊಟ ಹಾಕಬೇಕೋ ಬೇಡವೋ ಎಂದು ತೀರ್ಮಾನ ಮಾಡಿದ್ರಿ ನಾನು ಹಳೇ ಬಟ್ಟೆ ಹಾಕಿ ಊಟಕ್ಕೆ ಕುಳಿತಿದ್ದಾಗ ನನ್ನನ್ನು ಪಂಕ್ತಿಯಿಂದ ಎದ್ದೇಳಿಸಿ ಹೊರಗಡೆ ಕಳುಹಿಸಿದ್ರಿ ಆದರೆ ನಾನು ಪುನಹ ಹೊಸ ಬಟ್ಟೆ ಮತ್ತು ಒಡವೆ ಹಾಕಿ ಬಂದಾಗ ಈ ರೀತಿ ರಾಜಮರ್ಯಾದೆ ನೀಡಿ ಸತ್ಕರಿಸುತ್ತಿದ್ದೀರಾ ಇದು ತಪ್ಪು ಇನ್ನು ಮುಂದೆ ಯಾರಿಗೂ ಈ ತರ ಮಾಡಬೇಡಿ ಹೊಟ್ಟೆ ಹಸಿವು ಎಂದು ಬಂದು ಕುಳಿತವರನ್ನು ಈ ರೀತಿ ಹೊರಗಡೆ ಕಳಿಸಿದರೆ ಆ ಭಗವಂತ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳಿ ಸುಂದರ್ ರೆಡ್ಡಿ ಅಲ್ಲಿಂದ ಊಟ ಮಾಡದೇನೆ ಮನೆಗೆ ಹೋದರು ಸ್ನೇಹಿತರೆ ತನ್ನನ್ನು ಅವಮಾನ ಮಾಡಿದ ವ್ಯಕ್ತಿಗೆ ಸುಂದರ್ ರೆಡ್ಡಿ ಮಾಡಿದ ಕೆಲಸ ಸರಿ ಎಂದು ನಿಮ್ಮ ಅಭಿಪ್ರಾಯವಾಗಿದ್ದರೆ ಈ ನಿಜವಾದ ಘಟನೆ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ..