ನಮಸ್ತೆ ಸ್ನೇಹಿತರೆ, ಹತ್ತು ವರ್ಷದ ಹುಡುಗರು ಎಂದರೆ ಆಟ ಆಡಿಕೊಂಡು ಖುಷಿಯಿಂದ ಇರುತ್ತಾರೆ. ಆದರೆ ನಾವು ಈಗ ಹೇಳುವ ಹುಡುಗಿ ಒಂದು ಸಾಧನೆ ಮಾಡಿದ್ದಾಳೆ. ಈ ಹುಡುಗಿ ಮಾಡಿದ ಸಾಧನೆ ಅಂತಿಂಥದಲ್ಲ. ಎಲ್ಲರಿಗೂ ಕೂಡ ನೆನಪಿಟ್ಟುಕೊಳ್ಳುವ ಸಾಮರ್ಥ್ಯ ಇರುತ್ತದೆ. ಆದರೆ ಈ ಹುಡುಗಿಗೆ ದೇವರು ಯಾವ ರೀತಿಯಾದಂತಹ ನೆನಪಿನ ಶಕ್ತಿ ಕೊಟ್ಟಿದ್ದಾನೆ ಅಂದರೆ, ದೇವರು ಕೊಟ್ಟ ವರದಂತಿದೆ. ಈ ಹುಡುಗಿ ಮಾಡಿದ ಸಾಧನೆಯಾದರೂ ಏನು? ಯಾವ ರೀತಿಯ ಸಾಧನೆ ಎಂದು ನೋಡೋಣ ಬನ್ನಿ.

ಮೂಲತ ರಾಜಸ್ಥಾನದ ಬಿಲ್ವಾರದ ಈ ಹತ್ತು ವರ್ಷದ ಬಾಲಕಿಯ ಹೆಸರು ಸಾರ. ಈ ಹುಡುಗಿ ಮೇ 2 ರಂದು ವಿಶ್ವದಾದ್ಯಂತ 195 ದೇಶಗಳಲ್ಲಿ ಇರುವಂತಹ ರಾಜ್ಯಗಳು ಹಾಗೂ ರಾಜ್ಯಗಳಲ್ಲಿ ಇರುವಂತಹ ನೋಟುಗಳ ಬಗ್ಗೆ ಕಂಠ ಪಾಠವನ್ನು ಮಾಡುವ ಮೂಲಕ ವಿಶ್ವದಾಖಲೆಯನ್ನು ನಿರ್ಮಿಸಿದ್ದಾಳೆ. ಅದು ಹೇಗೆ ಅಂತೀರಾ, ನಿಮಗೆ ತಿಳಿದಿರಬಹುದು ಒಂದೊಂದು ದೇಶಗಳಲ್ಲಿ ಅವರದ್ದೇ ಆದ ಕರೆನ್ಸಿಗಳು ಇರುತ್ತವೆ. ಹಾಗೂ ಎಲ್ಲಾ ದೇಶಗಳಲ್ಲೂ ರಾಜಧಾನಿಗಳು ಇರುತ್ತದೆ. ಎಲ್ಲಾ ದೇಶದ ರಾಜಧಾನಿ ಗಳನ್ನು ಹಾಗೂ ಎಲ್ಲಾ ದೇಶದ ಕರೆನ್ಸಿಗಳನ್ನು ನೆನಪಿನಲ್ಲಿಟ್ಟುಕೊಳ್ಳುವುದು ತುಂಬಾ ಕಷ್ಟ. ಇವೆಲ್ಲವನ್ನೂ ನೆನಪಿಟ್ಟುಕೊಳ್ಳುವ ಮೂಲಕ ಈ ಹುಡುಗಿ ಸಾಧನೆಯನ್ನು ಮಾಡಿದ್ದಾಳೆ.

ಈ ದಾಖಲೆಯನ್ನು ವರ್ಚುವಲ್ ಲೈವ್ ಇವೆಂಟ್ ಮುಖಾಂತರ ಇದನ್ನು ಫೇಸ್ಬುಕ್ ಹಾಗೂ ಯೂಟ್ಯೂಬ್ ನಲ್ಲಿ ಸ್ಟ್ರೀಮ್ ಕೂಡ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹುಡುಗಿ 195 ದೇಶಗಳ ರಾಜಧಾನಿಗಳನ್ನು ಹೇಳುವ ಮುಖಾಂತರ ಹಾಗೂ ಆ ದೇಶಗಳ ಕರೆನ್ಸಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಹೇಳುವುದರ ಮುಖಾಂತರ ವಿಶ್ವದಾಖಲೆಯನ್ನು ರಚಿಸಿದ್ದಾಳೆ ಈ ಹುಡುಗಿ. ಈ ರೀತಿಯಾದ ಇಂತಹ ವಿಭಾಗದಲ್ಲಿ ಈ ಹುಡುಗಿ ಮೊದಲ ವ್ಯಕ್ತಿ ಅನ್ನುವುದು ಕೂಡ ಒಂದು ವಿಶೇಷವಾದ ವಿಚಾರ. ನೋಡಿದ್ರಲ್ಲ ಸ್ನೇಹಿತರೆ ಚಲದಿಂದ ಏನನ್ನು ಬೇಕಾದರೂ ನಾವು ಸಾಧಿಸಬಹುದು. ನೀವೇನಂತೀರಾ ಸ್ನೇಹಿತರೆ.