ನಮಸ್ತೇ ಸ್ನೇಹಿತರೇ, ನಾವು ಬದುಕಲು ದಿನ ಊಟ ತಿನ್ನಲೇಬೇಕು. ನಾವು ತಿಂದಿರುವ ಊಟ ಹೊಟ್ಟೆಯಲ್ಲಿ ಜೀರ್ಣವಾದ ಮೇಲೆ ಅದು ಆಚೆ ಹೋಗಲೇಬೇಕು. ಇದೆ ಪ್ರಕೃತಿಯ ನಿಯಮ. ಒಂದು ವೇಳೆ ಈ ರೀತಿ ಆಗದಿದ್ದಲ್ಲಿ ಅಂತಹ ಮನುಷ್ಯನ ದೇಹದ ಆರೋಗ್ಯದಲ್ಲಿ ಏರುಪೇರಾಗಿದೆ ಎಂದು ಅರ್ಥ. ಆದರೆ ವಿಚಿತ್ರ ಎಂದರೆ ಇಲ್ಲೊಬ್ಬ ಹುಡುಗ ಒಂದೂವರೆ ವರ್ಷಗಳಿಂದ ಶೌಚಕ್ಕೇ ಹೋಗಿಲ್ಲವಂತೆ. ಇದು ನಂಬಲು ಅಸಾಧ್ಯವಾದರೂ ಇದುವೇ ನಂಬಲೇಬೇಕಾದ ಸತ್ಯ. ಹಾಗಾದ್ರೆ ಇದರ ಹಿಂದಿರುವ ರಹಸ್ಯ ಏನು ಎನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..

ಈ ಹುಡುಗನ ಹೆಸರು ಅನೀಶ್ ಚಂಡಿಲ್ .ಇನ್ನು ಕೇವಲ ಹದಿನಾರು ವರ್ಷದವನಾಗಿರುವ ಈ ಬಾಲಕ ಮಧ್ಯಪ್ರದೇಶದ ಕುಗ್ರಾಮವೊಂದರಲಿ ಬಡ ಕುಟುಂಬದಲ್ಲಿ ಜನಿಸಿದವನು. ಅಚ್ಚರಿ ಏನೆಂದರೆ ಈ ಹುಡುಗ ಪ್ರತೀ ದಿನ 15 ರಿಂದ 18 ರೊಟ್ಟಿಗಳವರೆಗೆ ತಿನ್ನುತ್ತಾನೆ. ಆದರೆ ಕಳೆದ ಹದಿನೆಂಟು ತಿಂಗಳುಗಳಿಂದ ಶೌಚಕ್ಕೇ ಹೋಗಿಲ್ಲವಂತೆ. ಆಶ್ಚರ್ಯ ಏನು ಎಂದರೆ ಈ ಹುಡುಗನ ಆರೋಗ್ಯದಲ್ಲಿ ಇದುವರೆಗೂ ಏನೂ ಕೂಡ ಏರು-ಪೇರು ಆಗಿಲ್ಲ . ಈ ತೊಂದರೆ ಶುರುವಾಗುವ ಮುಂಚೆ ಹೇಗಿದ್ದನೋ ಈಗಲೂ ಕೂಡ ಹಾಗೆಯೆ ಇದ್ದಾನೆ ಅನೀಶ್.

ಇನ್ನು ಈತನಿಗಿರುವ ತೊಂದರೆಯು ವೈದ್ಯ ಲೋಕಕ್ಕೆ ಸವಾಲಾಗಿದೆ. ಹೌದು, ವೈದ್ಯರು ಹೇಳುವ ಪ್ರಕಾರ ಇದೊಂದು ವಿಚಿತ್ರ ಕಾಯಿಲೆಯಂತೆ. ಆದರೆ ಹಲವಾರು ಆಸ್ಪತ್ರೆಗಳಲ್ಲಿ ತೋರಿಸಿದ್ರೂ ಸಹ ಯಾವುದೇ ಚಿಕಿತ್ಸೆ ಪ್ರಯೋಜನವಾಗಿಲ್ಲ. ವೈದ್ಯರೂ ಕೂಡ ಇದು ಯಾವ ಕಾಯಿಲೆ, ಇದಕ್ಕಿರುವ ಚಿಕಿತ್ಸೆ ಏನು ಎಂಬುದರ ಬಗ್ಗೆ ಹೇಳಲು ಇದುವರೆಗೂ ಸಾಧ್ಯವಾಗಿಲ್ಲ. ಈ ಹುಡುಗನಿಗೆ ಇರುವ ಕಾಯಿಲೆ ವೈದ್ಯಲೋಕಕ್ಕೆ ಇನ್ನೂ ಸವಾಲಾಗಿಯೇ ಉಳಿದಿದೆ. ಆದರೆ ತಿಳಿಯದ ಒಂದು ರಹಸ್ಯ ಏನೆಂದರೆ ಆ ಹುಡುಗ ತಿಂದಿದ್ದೆಲ್ಲಾ ಆಹಾರ ಎಲ್ಲಿ ಹೋಗುತ್ತದೆ, ಏನಾಗುತ್ತದೆ ಎಂಬುದೇ ವೈದ್ಯಲೋಕಕ್ಕೂ ತಿಳಿಯಲು ಆಗದ ರಹಸ್ಯವಾಗಿದೆ.