Advertisements

ಒಂದೇ ಒಂದು ಐಡಿಯಾದಿಂದ 6 ತಿಂಗಳಿನಲ್ಲಿ ಇನ್ಸ್ಟಾಗ್ರಾಮ್ ಮೂಲಕ 80 ಲಕ್ಷ ದುಡಿದ 19 ವರ್ಷದ ಯುವಕ ! ಹೇಗೆ ನೋಡಿ.

Kannada News

ಸ್ನೇಹಿಗರೇ ಮುಂದುವರಿದ ತಂತ್ರಜ್ನ್ಯಾದ ಈ ಯುಗದಲ್ಲಿ ಬುದ್ಧಿಯೊಂದಿದ್ದರೆ ಬೆವರು ಸುರಿಸದಯೇ ಲಕ್ಷಾಂತರ ಹಣ ಗಳಿಸಬಹುದು. ಈಗಂತೂ ಫೋಟೋಗಳನ್ನ ವಿಡಿಯೊಗಳನ್ನ ಹಂಚಿಕೊಳ್ಳಲು ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಿವೆ. ಕೇವಲ ಮನರಂಜನೆಗಾಗಿ ಅಥ್ವಾ ಟೈಮ್ ಪಾಸ್ ಗಾಗಿಯೋ ಸೋಷಿಯಲ್ ಮಿಡಿಯಾಗಳಲ್ಲಿ ಖಾತೆ ತೆರೆಯುವ ಅನೇಕರು ಮುಂದೊಂದು ದಿನ ಅದೇ ಜಾಲತಾಣಗಳಿಂದ ಲಕ್ಷಾಂತರ ಹಣ ಗಳಿಸುವಷ್ಟು ಯಶಸ್ವಿಯಾಗುತ್ತಾರೆ.

ಇಲ್ಲೊಬ್ಬ ಯುವಕ ಮಾಡಿದ್ದು ಅದೇ.. ಹೌದು ಸೋಷಿಯಲ್ ಮೀಡಿಯಾಗಳು ಕೇವಲ ಮನರಂಜನೆಗೆ ಮಾತ್ರವಲ್ಲ ತಲೆ ಉಪಯೋಗಿಸಿದ್ರೆ ಲಕ್ಷಾಂತರ ಹಣ ಗಳಿಸಬಹುದು ಎಂದು ಆಂಧ್ರ ಪ್ರದೇಶದ ಕೇವಲ ೧೯ ವರ್ಷದ ಯುವಕ ಅವಿನಾಶ್ ತೋರಿಸಿಕೊಟ್ಟಿದ್ದಾನೆ. ಇನ್ನು ಇಂಜಿನಿಯರಿಂಗ್ ಓದುತ್ತಿರುವ ಈ ಯುವಕ ಇನ್ಸ್ಟಾಗ್ರಾಮ್ ಖಾತೆಯನ್ನ ತೆರೆದಿದ್ದು ಹೆಚ್ಚು ಹೆಚ್ಚು ಫಾಲ್ಲೋರ್ಸ್ ಗಳು ಬರಲೆಂದು ಐಡಿಯಾವೊಂದನ್ನ ಮಾಡಿದ. ಫೋಟೋಗಳಿಗೆ ಮೀಮ್ಸ್ ಮಾಡಲು ಶುರು ಮಾಡಿದ ಬಳಿಕ ಆತನ ಇನ್ಸ್ಟಾಗ್ರಾಮ್ ಖಾತೆಯ ಫಾಲ್ಲೋರ್ಸ್ ಹೆಚ್ಚಾಗುತ್ತಾ ಹೋದರು.

ಇನ್ನು ಫಾಲ್ಲೋರ್ಸ್ ಹೆಚ್ಚಾಗುತ್ತಿದ್ದಂತೆ ಅವಿನಾಶ್ ಅವರನ್ನ ಕಾಂಟಾಕ್ಟ್ ಮಾಡಿದ ಹಲವಾರು ಕಂಪನಿಗಳು ತಮ್ಮ ಬ್ರಾಂಡ್ ಪ್ರಾಡೆಕ್ಟ್ ಗಳನ್ನ ಪ್ರಮೋಟ್ ಮಾಡುವಂತೆ ಹೇಳಿ ಅದಕ್ಕಾಗಿ ಹಣವನ್ನ ಕೊಟ್ಟರು. ಇನ್ನು ದಿನಪ್ರತಿ ಸಾಮಾಜಿಕ ಜಾಲತಾಣಗಳಲ್ಲಿ ೪ ರಿಂದ ೫ ಗಂಟೆ ಸಮಯ ಕೊಟ್ಟ ಅವಿನಾಶ್ ಗೆ ಫಾಲ್ಲೋರ್ಸ್ ಗಳನ್ನ ಹೇಗೆ ಹೆಚ್ಚು ಮಾಡುವುದು ಎಂಬ ಉಪಾಯ ಹೊಳೆಯಿತು. ಇನ್ನು ಇದನ್ನೇ ಬಂಡವಾಳ ಮಾಡಿಕೊಂಡ ಅವಿನಾಶ್ ತನಗೆ ಕೊಟ್ಟಿರುವ ಐಡಿಯಾಗಳನ್ನ ವ್ಯಕ್ತಿಗಳ ಜೊತೆ ಹಂಚಿಕೊಂಡಿದ್ದು ಅದಕ್ಕೆ ತಕ್ಕನಾದ ಹಣ ಕೂಡ ಡಾಲರ್ ರೂಪದಲ್ಲಿ ಪಡೆಯುತ್ತಿದ್ದಾರೆ.

ಇನ್ನು ಈಗ ೪೦ ಕ್ಕೂ ಹೆಚ್ಚು ಕಂಪನಿಗಳಿಗೆ ತಮ್ಮ ಐಡಿಯಾಗಳನ್ನ ಹೇಳಿಕೊಡುತ್ತಿದ್ದಾರಂತೆ ಅವಿನಾಶ್. ಹೀಗೆ ತಮ್ಮ ಬುದ್ದಿವಂತಿಕೆಯಿಂದ ಕೇವಲ ಆರು ತಿಂಗಳಿನಲ್ಲಿ ೮೦ ಲಕ್ಷಕ್ಕಿಂತ ಹೆಚ್ಚು ಹಣ ಸಂಪಾದನೆ ಮಾಡಿದ್ದಾರೆ 19 ವರ್ಷದ ಯುವಕ ಅವಿನಾಶ್. ಇದೇ ಅಲ್ಲದೆ ತನ್ನದೇ ಆದ ತಂಡವನ್ನ ಕಟ್ಟಿಕೊಂಡಿರುವ ಈ ಯುವಕ ಆನ್ಲೈನ್ ಮೂಲಕವೂ ತಮ್ಮ ಐಡಿಯಾಗಳನ್ನ ಕೊಡುತ್ತಿದ್ದು ಒಂದು ಸಾವಿರದವರೆಗೆ ಚಾರ್ಜ್ ಮಾಡುತ್ತಿದ್ದಾರೆ ಎಂದು ಹೇಳಲಾಗಿದೆ.