Advertisements

ಬರೋಬ್ಬರಿ 5 ಜನರ ಪ್ರಾಣ ಉಳಿಸಿದ ಈ ಪುಟ್ಟ ಕಂದಮ್ಮ.! ಈ ಪುಟ್ಟ ಕಂದಮ್ಮ ಮಾಡಿದ್ದೇನು ಗೊತ್ತಾ.?

Inspiration Kannada News

ನಮಸ್ತೆ ಸ್ನೇಹಿತರೆ, ಕೇವಲ ಒಂದುವರೆ ವರ್ಷದ ಪುಟ್ಟ ಕಂದಮ್ಮ ಬ್ರೈನ್ ಫೈ’ಲುರ್ ನಿಂದ ಈ ಲೋಕವನ್ನು ತ್ಯಜಿಸಿದ್ದಾಳೆ. ಆ ಪುಟ್ಟ ಕಂದಮ್ಮನ ತೀರಿಕೊಂಡಿದ್ದಾಳೆ ಎಂದು ಖಚಿತಪಡಿಸಿಕೊಂಡ ತಂದೆ-ತಾಯಿ ಒಂದು ಮಹತ್ತರ ಕೆಲಸ ಮಾಡಿದ್ದಾರೆ. ಹೌದು ಆ ಕಂದಮ್ಮನ ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದಿದ್ದಾರೆ. ಇದರಿಂದಾಗಿ ಆ ಕಂದಮ್ಮ ಭಾರತದ ಕಿರಿಯ ಅಂಗ ದಾನಿ ಅಂತ ದಾಖಲೆ ಸೃಷ್ಟಿಸಿದ್ದಾಳೆ. ಸ್ಥಳಿಯ ನ್ಯೂಸ್ ವರದಿಯ ಪ್ರಕಾರ, ನವದೆಹಲಿಯ ರೋಹಿಣಿ ಎಂಬ ಈ ಹುಡುಗಿಯು ಐದು ಜನರ ಪ್ರಾಣ ಉಳಿಸಿದ್ದಾಳೆ. ಮನೆಯ ಬಾಲ್ಕನಿಯಿಂದ ಬಿದ್ದ ಈ ಕಂದಮ್ಮನನ್ನು ಜನವರಿ 8 ರಂದು ಗಂಗಾ ರಾಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಜನವರಿ 11 ರಂದು ಆಕೆಯ ಮೆದುಳು ಕೆಲಸ ಮಾಡದ ಕಾರಣ ಸಾ’ವನ್ನಪ್ಪಿದ್ದಾಳೆ.

Advertisements
Advertisements

ಈ ದುಃ’ಖದ ಸುದ್ದಿ ಕೇಳಿದ ನಂತರ ಆಕೆಯ ಪೋಷಕರಾದ ಆಶಿಶ್ ಕುಮಾರ್ ಮತ್ತು ಬಬಿತಾ ಬಾಲಕಿಯ ಅಂಗಾಂಗಳನ್ನು ದಾನ ಮಾಡುವ ನಿರ್ಧರ ಮಾಡಿದರು. ಶೀಘ್ರದಲ್ಲೇ, ಆಸ್ಪತ್ರೆಯು ಅವಳ ಹೃದಯ, ಯಕೃತ್, ಮೂತ್ರಪಿಂಡ ಮತ್ತು ಕಾರ್ನಿಯಾವನ್ನು ಪಡೆದುಕೊಂಡಿತು. ಈ ಅಂಗಗಳನ್ನು ಐದು ರೋಗಿಗಳಿಗೆ ದಾನ ಮಾಡಿ ಅವರ ಜೀವ ಉಳಿಸಿದರು.

ಆ ಪುಟ್ಟ ಕಂದಮ್ಮನ ತಂದೆ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದು, ಆಸ್ಪತ್ರೆಯಲ್ಲಿ ಅನೇಕ ರೋಗಿಗಳಿಗೆ ಅಗತ್ಯವಿರುವುದರಿಂದ ನನ್ನ ಮಗಳ ಅಂಗಾಂಗಗಳನ್ನು ದಾನ ಮಾಡಲು ನಿರ್ಧರಿಸಿದ್ದೇನೆ ಎಂದು ಹೇಳಿದ್ದಾರೆ. ಅಂಗಾಂಗ ದಾನದಿಂದಾಗಿ ನನ್ನ ಮಗಳು ಸಾವಿನ ನಂತರವೂ ಬೇರೆಯವರ ಶರೀರದಲ್ಲಿ ಬದುಕುತ್ತಾಳೆ ಅಂತ ಹೇಳಿದ್ದಾರೆ. ಆಸ್ಪತ್ರೆಯ ಅಧ್ಯಕ್ಷ ಡಿ.ಎಸ್.ರಾಣಾ ಉದಾತ್ತ ಈ ಕೆಲಸವನ್ನು ಶ್ಲಾಘಿಸಿದರು ಮತ್ತು ಅದು ಇತರರಿಗೆ ಸ್ಫೂರ್ತಿ ನೀಡಬೇಕು ಎಂದು ಹೇಳಿದರು. ಭಾರತದಲ್ಲಿ ಪ್ರಸ್ತುತ ಅಂಗಾಂಗ ದಾನದ ಪ್ರಮಾಣವನ್ನು ಎತ್ತಿ ತೋರಿಸಿದ ಅವರಿಗೆ ಇಡೀ ದೇಶವೇ ಅವರಿಗೆ ಅಭಿನಂದನೆ ಸಲ್ಲಿಸಿದೆ. ಇವರ ಈ ಕಾರ್ಯಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.