Advertisements

ಅಪ್ಪಿ ತಪ್ಪಿಯೂ ದೇವರ ಮನೆಯಲ್ಲಿ ಈ ತಪ್ಪುಗಳನ್ನ ಮಾಡಲೇಬೇಡಿ ?

Adhyatma

ಹಿಂದೂಗಳ ಮನೆಯಲ್ಲೂ ದೇವರ ಮನೆ ಇರುತ್ತದೆ. ಇನ್ನು ಕೆಲವರು ಮನೆಯ ಯಾವುದಾದರೂ ಒಂದು ಭಾಗದಲ್ಲಿ ದೇವರ ಫೋಟೋಗಳನ್ನಿಟ್ಟುಕೊಂಡು ಪೂಜೆ ಮಾಡುತ್ತಿದ್ದರೆ, ಬಹುತೇಕರು ಮನೆಯಲ್ಲಿಯೇ ಪ್ರತ್ಯೇಕವಾದ ಕೋಣೆಯಲ್ಲಿ ದೇವರ ವಿಗ್ರಹಗಳು ಫೋಟೋಗಳನ್ನಿಟ್ಟು ಪೂಜೆ ಮಾಡುತ್ತಿರುತ್ತಾರೆ. ಇನ್ನು ಪ್ರತೀ ದಿವಸ ಸ್ನಾನ ಮಾಡಿ ಪೂಜೆ ಮಾಡುವುದು ಸಾಮಾನ್ಯವಾಗಿರುತ್ತದೆ. ಆದರೆ ನಾವು ಭಗವಂತನನ್ನ ಆರಾಧಿಸುವುದು ಪೂಜೆ ಮಾಡುವುದು ನಮಗೆ ಸಂಪತ್ತು, ಹಣ, ಆರೋಗ್ಯ ನೆಮ್ಮದಿ ಕೊಡಲೆಂದು..

Advertisements
Advertisements

ಆದರೆ ದೇವರನ್ನ ಎಷ್ಟೇ ಆರಾಧನೆ ಮಾಡಿದರೂ ಆರ್ಥಿಕ ಸಮಸ್ಯೆಗಳು, ಅನಾರೋಗ್ಯದ ಸಮಸ್ಯೆಗಳಿಂದ ಅನೇಕರು ಜೀವನ ಪರ್ಯಂತ ಕಷ್ಟ ಪಡುತ್ತಲೇ ಇರುತ್ತಾರೆ. ಇದಕ್ಕೆ ನಾವು ಮಾಡುವ ತಪ್ಪುಗಳು ಕೂಡ ಕಾರಣ. ಹೌದು, ಮನೆಯಲ್ಲಿರುವ ದೇವರ ಮನೆ ಹಾಗೂ ದೇವರಿಟ್ಟಿರುವ ದಿಕ್ಕುಗಳು ಕೂಡ ಮನುಷ್ಯನ ಏಳಿಗೆಯಲ್ಲಿ ಮಹತ್ವದ ಪಾತ್ರವಹಿಸುತ್ತವೆ ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ. ವಾಸ್ತು ಪ್ರಕಾರ ದೇವರು ಸಂತುಷ್ಟನಾಗಬೇಕಾದರೆ, ನಾವು ಮಾಡುವ ಪೂಜಾ ವಿಧಿ ವಿಧಾನಗಳು ಹಾಗೂ ದೇವರ ಮನೆಗೆ ಸಂಬಂಧಪಟ್ಟ ವಿಷಯಗಳಲ್ಲಿ ಕೆಲ ನಿಯಮಗಳನ್ನ ಪಾಲಿಸಬೇಕಾಗುತ್ತದೆ. ಹಾಗಾದ್ರೆ ಆ ನಿಯಮಗಳು ಏನೆಂದು ನೋಡೋಣ ಬನ್ನಿ..

ಶಾಸ್ತ್ರಗಳಲ್ಲಿ ಹೇಳಿರುವಂತೆ ದೇವರ ಮನೆ ಮತ್ತು ಅಡುಗೆ ಮನೆ ಒಟ್ಟಿಗೆ ಇರಬಾರದಂತೆ. ಇನ್ನು ಮಲಗುವ ಕೋಣೆಯಲ್ಲಿ ಕೂಡ ದೇವರ ಮನೆ ಇರಬಾರದು ಎಂದು ಹೇಳಲಾಗಿದೆ. ಇನ್ನು ದೇವರ ಮನೆಯಲ್ಲಿ ದೇವರ ಫೋಟೋಗಳನ್ನಾಗಲಿ, ವಿಗ್ರಗಳನ್ನಾಗಲಿ ನಾವು ಪೂಜೆ ಮಾಡುವಾಗ ನಮ್ಮ ಮುಖ ಉತ್ತರ ಅಥವಾ ಪೂರ್ವಕ್ಕೆ ಬರುವಂತೆ ಇಡಬೇಕು. ಇನ್ನು ಕೆಲವರು ಮಹಡಿಯ ಹೋಗುವ ಮೆಟ್ಟಲಿನ ಕೆಳಗಡೆ ನಿರ್ಮಾಣ ಮಾಡಿರುತ್ತಾರೆ. ಆದರೆ ಇದರಿಂದ ಶುಭಫಲಗಳು ದೊರೆಯುವುದಿಲ್ಲ ಎಂದು ಹೇಳಲಾಗಿದೆ. ಇನ್ನು ದೇವಾ ಮನೆಯ ಜೊತೆ ಸ್ನಾನದ ಮನೆ ಕೂಡ ಇರಬಾರದು ಎಂದು ಶಾಸ್ತ್ರಗಳಲ್ಲಿ ಉಲ್ಲೇಖ ಮಾಡಲಾಗಿದೆ.