Advertisements

67 ಲಕ್ಷದ ವಾಚ್ ಕಳ್ಳತನ ಮಾಡಿದ 6 ವರ್ಷದ ಬಾಲಕ..! ಇದಕ್ಕೆ ಟ್ರೈನಿಂಗ್ ಕೊಟ್ಟವರು ಯಾರು ಅಂತ ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ…

Kannada News

ನಮಸ್ತೆ ಸ್ನೇಹಿತರೆ, ಕಳ್ಳತನದ ಪ್ರಕರಣಗಳನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಕಳ್ಳ ಎಂದರೆ ನಮಗೆ ಅನಿಸುವುದು ವಯಸ್ಸಿಗೆ ಬಂದ ಹುಡುಗರು ಅಂತ.. ಆದರೆ ಇಲ್ಲಿ ಕಳ್ಳತನ ಮಾಡಿದ ಕಳ್ಳನ ವಯಸ್ಸು ಕೇವಲ 6 ವರ್ಷ. ಈ ಬಾಲಕ ಸುಮಾರು 67 ಲಕ್ಷ ಮೌಲ್ಯದ ಕೈಗಡಿಯಾರ ಕದ್ದಿದ್ದಾನೆ. ಇದನ್ನು ಕೇಳಿದ ತಕ್ಷಣ ನಿಮಗೆ ಶಾ’ಕ್ ಆಗಿರಬಹುದು.. ಹೌದು ಹುಡುಗ ಸುಮಾರು 67 ಲಕ್ಷ ಬೆಲೆಬಾಳುವ ವಾಚ್ ಅಂದನು ಕದ್ದಿದ್ದಾನೆ. ಅದು ಹೇಗೆ ಮತ್ತು ಈತನಿಗೆ ಟ್ರೈನಿಂಗ್ ಕೊಟ್ಟವರು ಯಾರು ಅಂತ ನೋಡೋಣ ಬನ್ನಿ…

Advertisements
Advertisements

ಹೌದು ಈ ಬಾಲಕನಿಗೆ ಅವರನ್ನು ಕದಿಯುವುದಕ್ಕೆ ಟ್ರೈನಿಂಗ್ ಕೊಟ್ಟವರು ಬೇರೆ ಯಾರು ಅಲ್ಲ, ಇವನ ಪೋಷಕರು. ಹೌದು, ಈ ಕಳ್ಳತನಕ್ಕೆ ಅವನ ಹೆತ್ತವರು ಅವನಿಗೆ ತರಬೇತಿ ನೀಡಿದ್ದರು. ಪೋಷಕರು ನೀಡಿದ ಮಾರ್ಗವನ್ನು ಅನುಸರಿಸಿ, ಬಾಲಕ ಅಂಗಡಿಯಿಂದ 18 ಕ್ಯಾರೆಟ್ ಚಿನ್ನದ ಕೈಗಡಿಯಾರವನ್ನು ಕದ್ದಿದ್ದು, ಇದರ ಮೌಲ್ಯ 67 ಲಕ್ಷ ರೂಪಾಯಿಯಾಗಿದೆ. ಈ ಘಟನೆ ನಡೆದಿರುವುದು ಬ್ರಿಟನ್’ನಲ್ಲಿ. ಬಾಲಕನ ಪೋಷಕರು, ಬಾಲಕ ಕಳ್ಳತನ ಮಾಡುವ ಮುನ್ನ ಆ ಶಾಪ್’ಗೆ ಹೋಗಿದ್ದರು. ಆಗ ಅವರು ಈ ಗಡಿಯಾರದ ಚಿತ್ರವನ್ನು ಫೋಟೋ ತೆಗೆದುಕೊಂಡು, 5 ದಿನಗಳ ನಂತರ ಇಬ್ಬರೂ ತಮ್ಮ ಆರು ವರ್ಷದ ಮಗನೊಂದಿಗೆ ಶಾಪ್’ಗೆ ಹೋದರು.

ಶಾಪ್ ಸಿಬ್ಬಂದಿಗೆ ಯಾಮಾರಿಸಲು ಈ ದಂಪತಿಗಳು ವಿಶೇಷ ಸಿದ್ಧತೆಗಳನ್ನು ಸಹ ಮಾಡಿದ್ದರು. ಅವರು ತಮ್ಮ ಮಗನಿಗೆ ನಕಲಿ ಕೈಗಡಿಯಾರವನ್ನು ಕೈಗೆ ಕೊಟ್ಟು ಅದನ್ನು ಕದ್ದ ಕೈಗಡಿಯಾರದ ಸ್ಥಳದಲ್ಲಿ ಇಡು ಅಂತ ಹೇಳಿದರು. ಅದೇ ರೀತಿ ಅವನು ಕದ್ದ ಕೈಗಡಿಯಾರದ ಸ್ಥಳದಲ್ಲಿ ನಕಲಿ ಕೈಗಡಿಯಾರವನ್ನು ಇರಿಸಿದನು. ನಿಜ ಹೇಳಬೇಕೆಂದರೆ ಶಾಪ್ ಸಿಬ್ಬಂದಿಗೆ ಕೈಗಡಿಯಾರ ಕಳ್ಳತನವಾದ ಬಗ್ಗೆ ತಕ್ಷಣ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಮರುದಿನ ಸಿಬ್ಬಂದಿಗೆ ನಕಲಿ ಗಡಿಯಾರದ ಬಗ್ಗೆ ವಿಷಯ ತಿಳಿದಾಗ, ಅವರು ತಕ್ಷಣ ಅದನ್ನು ಪೊಲೀಸರಿಗೆ ತಿಳಿಸಿದರು. ಆದರೆ ಕದ್ದವರು ಮಾತ್ರ ಯಾರ ಕೈಗೂ ಸಿಗದೆ ಪರಾರಿಯಾಗಿದ್ದಾರೆ..