ನಮಸ್ತೆ ಸ್ನೇಹಿತರೆ, ಭಾರತದ ಪ್ರಮುಖ ಉದ್ಯಮಿಗಳಲ್ಲಿ ಒಬ್ಬರು. ಪೆಟ್ರೋಲ್ ರಾಜಕುಮಾರನೆಂದು ಪ್ರಸಿದ್ಧವಾದ ಇವರು, ಧೀರುಭಾಯಿ ಅಂಬಾನಿ ಅವರ ಸುಪುತ್ರ. ರಿಲಾಯನ್ಸ್ ಇಂಡಸ್ಟ್ರೀಸಿನಲ್ಲಿ ಅಧ್ಯಕ್ಷ, ವ್ಯವಸ್ಥಾಪಕ ನಿರ್ದೇಶಕ ಮತ್ತು ಅತಿದೊಡ್ಡ ಷೇರುದಾರ. ಪ್ರತಿಷ್ಠಿತ ಫಾರ್ಚೂನ್ ಗ್ಲೋಬಲ್ ೫೦೦ ಕಂಪನಿಗಳ ಪಟ್ಟಿಯಲ್ಲಿ ರಿಲಾಯನ್ಸ್ ಹತ್ತನೆಯ ಸ್ಥಾನದಲ್ಲಿದೆ.

ಮುಂಬಯಿಯಲ್ಲಿ ಸ್ಥಾಪಿತವಾದ ವಿಶ್ವದಲ್ಲೆ ಅತಿ ಹೆಚ್ಚು ಬೆಲೆ ಬಾಳುವಂತಹ ಬಂಗಲೆ ಅಂಟಿಲಿಯಾ ಎಂಬ 27 ಅಂತಸ್ತಿನ ಖಾಸಗಿ ಕಟ್ಟಡದಲ್ಲಿ ಮುಕೇಶ್ ಅವರು ಪತ್ನಿಯಾದ ನೀತಾ ಅಂಬಾನಿ ಮಕ್ಕಳಾದ ಅನಂತ್, ಆಕಾಶ್ ಮತ್ತು ಇಶಾ ಜೊತೆಯಲ್ಲಿ ವಾಸಿಸುತ್ತಾರೆ. ಈ ಬಂಗಲೆಯು $ 1 ಬಿಲಿಯನ್ ಮೌಲ್ಯವನ್ನು ಹೊಂದಿದೆ. ಇತಿಹಾಸದಲ್ಲೆ ಅತ್ಯಂತ ದುಬಾರಿ ಮನೆಯೆಂದು ಹೇಳಲಾಗಿದೆ. ಅಂಬಾನಿಯವರ 27 ಅಂತಸ್ತಿನ, 400,000 ಚದರ ಅಡಿ ಮನೆ ಅಂಟಿಲಿಯಾ ಅಟ್ಲಾನ್ಟಿಕ್ ಪ್ರದೇಶದ ಒಂದು ಪೌರಾಣಿಕ ದ್ವೀಪದ ಮೇರೆಗೆ ಹೆಸರಿಸಲಾಗಿದೆ. ಅಂಟಿಲಿಯಾ ಶಿಕಾಗೊ ಮೂಲದ ವಾಸ್ತುಶಿಲ್ಪಿಗಳಾದ ಪರ್ಕಿನ್ಸ್ ಮತ್ತು ವಿಲ್ ಅವರಿಂದ ವಿನ್ಯಾಸಗೊಳಿಸಲಾಗಿದೆ. ಆಸ್ಟ್ರೇಲಿಯಾ ಮೂಲದ ನಿರ್ಮಾಣ ಕಂಪನಿ ಲೇಯ್ಟನ್ ಹೋಲ್ಡಿಂಗ್ಸ್ ನಿರ್ಮಾಣ ಆರಂಭಿಸಿತು. 8 ರಿಕ್ಟರ್ ಪ್ರಮಾಣದ ಭೂಕಂಪನವನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ.

ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ಅವರು ವಾಸಿಸುವ ಮನೆ ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿಯವರ ಮನೆಯಲ್ಲಿನ ಒಂದು ತಿಂಗಳ ವಿದ್ಯುತ್ ವೆಚ್ಚವು 7000 ಕುಟುಂಬಗಳ ವಿದ್ಯುತ್ ಬಿಲ್ಗೆ ಸಮನಾಗಿದೆ. ಈ ಹಣದಿಂದ 1000 ಕುಟುಂಬಗಳು ವಾಸಿಸಬಹುದಾಗಿದೆ.

ಅಂಬಾನಿಯವರ ಮನೆಯಾದ ಆಂಟಿಲಿಯಾದಲ್ಲಿ 6,37,240 ಯುನಿಟ್ ವಿದ್ಯುತ್ ಬಳಸಲಾಗಿದ್ದು, ಅದರ ಬಿಲ್ 70 ಲಕ್ಷ ರೂ. ಬಂದಿದ್ದು, ಮುಖೇಶ್ ಅಂಬಾನಿ ಅವರು ನಿಯಮಗಳ ಪ್ರಕಾರ ಬಿಲ್ ಮೇಲೆ, 48,354 ರಿಯಾಯಿತಿ ಪಡೆದಿದ್ದಾರೆ. ಮುಖೇಶ್ ಅಂಬಾನಿಯ ಬಂಗಲೆಗೆ ಆಂಟಿಲಿಯಾ ಎಂಬ ದ್ವೀಪವೊಂದರ ಹೆಸರಿಡಲಾಗಿದೆ, ಗಾರ್ಡಿಯನ್ ಮಾಧ್ಯಮ ವರದಿಯ ಪ್ರಕಾರ, ಆಂಟಿಲಿಯಾ ಮೌಲ್ಯ 4567 ಕೋಟಿ ರೂಪಾಯಿಯ ಬಂಗಲೆಯಾಗಿದೆ. ಇದು ವಿಶ್ವದ ಅತ್ಯಂತ ದುಬಾರಿ ಮನೆಗಳಲ್ಲಿ ಒಂದಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಆಂಟಿಲಿಯಾದಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತಿಂಗಳಿಗೆ 2 ಲಕ್ಷ ರೂ. ಸಂಬಳ ಸಿಗುತ್ತದೆ, ಇದು ಮಾತ್ರವಲ್ಲದೆ, ಸಿಬ್ಬಂದಿಗಳಿಗೆ ವೈದ್ಯಕೀಯ ಭತ್ಯೆ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಖರ್ಚು ಮಾಡಲಾಗುತ್ತದೆ.