Advertisements

ಕೊನೆಗೂ ಸಿಹಿ ಸುದ್ದಿ ಕೊಟ್ಟ ಅಭಿಷೇಕ್ ಅಂಬರೀಷ್, ಖುಷಿಯಲ್ಲಿ ತೇಲಾಡಿದ ಸುಮಲತಾ.. ಸದ್ಯದಲ್ಲೇ ಒಂದಾಗಲಿದೆ ಈ ಜೋಡಿ! ವಾವ್ ಸೂಪರ್ ಜೋಡಿ ನೋಡಿ!!

Kannada News

ನಮಸ್ಕಾರ ಪ್ರಿಯ ಗೆಳೆಯರೆ ನಿಮಗೆಲ್ಲ ಗೊತ್ತಿರುವ ಹಾಗೆ ಕೊರೊನಾ ಮಹಾಮಾರಿಯ ನಂತರ ಮತ್ತೆ ಚಿತ್ರೋದ್ಯಮ ಹೆಚ್ಚು ಬೆಳವಣಿಗೆಯತ್ತ ಮುಖ ಮಾಡಿದೆ. ಹಲವು ಸ್ಟಾರ್ ನಟರು ಅನೇಕ ಚಿತ್ರಗಳನ್ನು ಈಗಾಗಲೇ ಚಂದನವನಕ್ಕೆ ನೀಡಿದ್ದಾರೆ. ಅದಷ್ಟೆ ಅಲ್ಲದೆ ನವ ಕಲಾವಿದರಿಗೂ ಸಹ ಒಳ್ಳೆಯ ಅವಕಾಸಗಳನ್ನು ನಮ್ಮ ಕನ್ನಡ ಇಂಡಸ್ಟ್ರಿ ನೀಡಿದೆ ಎಂಬುವುದು ನಮಗೆಲ್ಲ ಹೆಮ್ಮೆಯ ವಿಷಯ.

ಕನ್ನಡ ಸಿನಿ ‌ಜಗತ್ತನ್ನು ಬಹುಕಾಲ ಉಳಿಸಿ ಬೆಳೆಸಿ ಹೋದ ಹಿರಿಯ ನಾಯಕರಲ್ಲಿ ಅಂಬರೀಶ್ ಸಹ ಒಬ್ಬರು. ಕುತ್ತೆ ಕನ್ವರ್ ನಹಿ ಕನ್ವರ್ ಲಾಲ ಬೊಲೊ ಎಂಬ ಈ ಡೈಲಾಗ್ ಮೂಲಕ ಕನ್ನಡಭಿಮಾನಿಗಳ‌ ಮನೆಮನದಲ್ಲಿ ಅಚ್ಚಳಿಯದೆ ನಿಂತವರು ಅಂಬರೀಶ್. ಸದ್ಯ ಅವರು ನಮ್ಮೊಂದೊಗಿಲ್ಲ. ಅವರ ಮಗನಾದ ಅಭಿಷೇಕ ಅಂಬರೀಶ್ ಸಹ ತಂದೆಯ ಹಾಗೆ ಉತ್ತಮ ನಾಯಕ. ಅಮರ ಚಿತ್ರದ ಮೂಲಕ ಸಿನಿ ಜಗತ್ತಿಗೆ ಕಾಲಿಟ್ಟ ಅಭಿಷೇಕ ಆ ಸನಿಮಾದ ಮೂಲಕ ತಮ್ಮನ್ನು ತಾವು ಸಿನಿಮಾ ರಂಗದಲ್ಲಿ ಕಾಣಿಸಿಕೊಂಡಿದ್ದಾರೆ.

ಸದ್ಯ ಕೆಲವು ದಿನಗಳ ವರೆಗೆ ಗ್ಯಾಪ‌ ನೀಡಿದ್ದ ಅಭಿಷೇಕ ಸದ್ಯ ಮತ್ತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಹೌದು ಪೈಲ್ವಾನ್ ಹಿಟ್ ಚಿತ್ರವನ್ನು ಕನ್ನಡಕ್ಕೆ ನೀಡಿದ ಕೃಷ್ಣ ಅವರ ನಿರ್ದೇಶನದಲ್ಲಿ ಮೂಡಿಬರಲಿರುವ ಕಾಳಿ ಸಿನಿಮಾಗೆ ಅಭಿಷೇಕ ನಾಯಕನಾಗಿ ಅವಕಾಶ ಪಡೆದುಕೊಂಡಿದ್ದಾರೆ.

ಒಂದು ಸಿನಿಮಾ ನಾಯಕನಿಂದ ಎಷ್ಟು ಹಿಟ್ ಪಡೆಯುತ್ತದೆಯೊ ಅಷ್ಟೆ ಖ್ಯಾತಿಯನ್ನು ನಟಿಯಿಂದ ಸಹ ಪಡೆಯುತ್ತದೆ ಎನ್ನುವುದಕ್ಕೆ ಹಲವು ಸಿನಿಮಾಗಳು ಸಾಕ್ಷಿಯಾಗಿವೆ. ಇನ್ನು ಕಾಳಿ ಸಿನಿಮಾಗೆ ನಾಯಕಿಯಾಗಿ ಯಾರು ಅಭಿಷೇಕ ಅವರೊಂದಿಗೆ ನಟಿಸಲಿದ್ದಾರೆ ಎಂಬ ಗೊಂದಲಕ್ಕೆ ತೆರೆ ಬಿದ್ದಿದೆ‌.

ನಿಮಗೆಲ್ಲ ಗೊತ್ತಿದೆ ಕಾಂತಾರ ಸಿನಿಮಾ ಇಡೀ ಭಾರತದ ತುಂಬೆಲ್ಲ ಸದ್ದು ಮಾಡಿದೆ ಅಂತ.‌ಅದರ ಕಥೆ ಹಾಡು ಹಾಗೂ ನಟನೆಗೆ ಸಂದಿರುವ ಗೌರವ ನಮಗೆಲ್ಲ‌ಎದ್ದು ಕಾಣುತ್ತಿದೆ. ಇನ್ನು ಈ ಸಿನಿಮಾದ ನಾಯಕಿ ಸಪ್ತಮಿ ಗೌಡ ಅವರ ಕುರಿತು ಮಾತನಾಡಲೇಬೇಕು.

ಸಪ್ತಮಿ ಗೌಡ ಈ ಹಿಂದೆ ಕನ್ನಡ ಸಿನಿಮಾದಲ್ಲಿ ನಟಿಸಿದರು ಸಹ ಅವರನ್ನ ಗುರುತಿಸುವಂತೆ ಮಾಡಿದ್ದು ಈ ಕಾಂತಾರ ಸಿನಿಮಾ.ಸಪ್ತಮಿ ಮಾತ್ರವಲ್ಲದೆ ಆ ಸಿನಿಮಾದಲ್ಲಿ ನಟಿಸಿರುವ ಎಲ್ಲ ತಾರಾಬಳಗಕ್ಕೂ ಉತ್ತಮವಾದ ರೆಸ್ಪಾನ್ಸ್ ಬರುವಂತಾಗಿದೆ.

ಮೂಗುತಿ ಸುಂದರಿ ಅಂತ ಕಾಂತಾರ ಚಿತ್ರದ ಮೂಲಕ ಫೇಮಸ್ ಆದ ನಟಿ ಸಪ್ತಮಿ ಗೌಡ ಈಗಾಗಲೇ ಬಹಳ ಖ್ಯಾತಿಯಾಗಿದ್ದಾರೆ. ಯಾವುದೇ ಸಾಮಾಜಿಕ ಜಾಲತಾಣವನ್ನು ನೋಡಿದರು ಸಹ ಅವರದ್ದೆ ಮಾತು, ಅವರದ್ದೆ ಹಾಡು. ಅದಷ್ಟೆ ಅಲ್ಲದೆ ಹಲವು ಸಂದರ್ಶನಗಳಲ್ಲಿ ಹಾಗೂ ಕಾರ್ಯಕ್ರಮಗಳಲ್ಲಿ ಸಹ ಭಾಗಿಯಾಗಿದ್ದಾರೆ.

ಇನ್ನು ಕಾಂತಾರ ಸಿನಿಮಾ ಎಂದರೆ ಸುಮ್ಮನೆ ಅಲ್ಲ. ಅದೊಂದು ದಂತಕಥೆ. ಅದಕ್ಕಾಗಿ ತರೆ ಹಿಂದೆ ಕೆಲಸ ಮಾಡಿದ ಕೈಗಳು ಹಲವು. ಇನ್ನು ಸಪ್ತಮಿ ಗೌಡ ಸಹ ಲೀಲಾ ಪಾತ್ರಕ್ಕಾಗಿ ಹಲವು ಕಸರತ್ತುಗಳನ್ನು ಮಾಡಿದ್ದರು.‌ಅದೆಲ್ಲದಕ್ಕಿಂತ ಹೆಚ್ಚಾಗಿ ಅವರು ಆಸಕ್ತಿಯಿಂದ ಸಿನಿಮಾಗೆ ಬೇಕಾದ ಕರಾವಳಿ ಭಾಷೆಯನ್ನು ಕಲಿತುಕೊಂಡಿದ್ದು,ಅವರಿಗೆ ನಟನೆ ಕುರಿತು ಇರುವ ಆಸಕ್ತಿಯನ್ನು ತೋರ್ಪಡಿಸುತ್ತದೆ.

ಇನ್ನು ಅವರದ್ದೆ ಎಲ್ಲೆಲ್ಲೂ ಸುದ್ದಿಯಾದ ಕಾರಣ ಈಗ ನಿರ್ದೇಶಕರ ಕಣ್ಣು ಇವರ ಮೇಲೆ ಬಿದ್ದಿದೆ.‌ನೋಡಲು ಸುಂದರಿಯಾದ ಸಪ್ತಮಿಗೆ ಈಗಾಗಲೇ ಹಲವಾರು ಆಫರಗಳು ಬರುತ್ತೀವೆ. ‌ಅವರು ಕಾಂತಾರ ಸಿನಿಮಾದ ಯಶಸ್ವಿಯಲ್ಲಿ ಬ್ಯುಸಿಯಾಗಿದ್ದಾರೆ.ಅವರನ್ನು ಹಾಕಿಕೊಂಡು ಸಿನಿಮಾ ಮಾಡಿದರೆ ಹಿಟ್ ಆಗುತ್ತದೆ ಎನ್ನುವ ನಿರೀಕ್ಷೆಯಲ್ಲಿ ಅವರು ಸಪ್ತಮಿ ಗೌಡ ಅವರಿಗೆ ಕಾಲ್ ಶಿಟ್ ಸಹ ಕೇಳುತ್ತಿದ್ದಾರೆ.

ಇನ್ನು ನಿರ್ದೇಶಕ ಕೃಷ್ಣ ಅವರು ನಿರ್ಮಾಣ ಮಾಡುತ್ತಿರುವ ಕಾಳಿ ಸಿನಿಮಾಗೆ ಅಭಿಷೇಕ ಅಂಬರೀಶ್ ಅವರೊಂದಿಗೆ ಕಾಳಿ ಸಿನಿಮಾದಲ್ಲಿ ನಟಿಸಲು ಸಪ್ತಮಿ ಗೌಡ ಅವರಿಗೆ ಆಫರ್ ನೀಡಲಾಗಿದೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಇನ್ನು ಕೃಷ್ಣ ಅವರು ಖುದ್ದಾಗಿ ಸಪ್ತಮಿ ಗೌಡ ಅವರನ್ನು ಭೇಟಿಯಾಗಿ ಚಿತ್ರದ ಕಥೆ ಹೇಳಿದ್ದು ಇದಕ್ಕೆ ಸಪ್ತಮಿ ಗೌಡ ಒಪ್ಪಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತೀವೆ.

ಕಾಳಿ ಸಿನಿಮಾ ಕಾವೇರಿ ನದಿ ವಿವಾದದಲ್ಲಿ ನಡೆದ ಸಮಯದಲ್ಲಿ ನಡೆದ ಪ್ರೇಮ ಕಥೆಯೊಂದ ಚಿತ್ರವಾಗಿದೆ. ಹಾಗೂ ಇದು ನೈಜ್ಯ ಪ್ರೇಮ ಕಥೆಯಾಗಿದೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ಅಭಿಷೇಕ ಅವರು ಬ್ಯಾಡ್ ಮ್ಯಾನರ್ಸ್ ಎಂಬ ಚಿತ್ರದಲ್ಲಿ ನಟಿಸಿ ಅದ ರ ಕೊನೆಹಂತದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಕಾಳಿ ಸಿನಿಮಾಗು ಸಹ ತಯಾರಿಯನ್ನು ನಡೆಸಿದ್ದಾರೆ.

ಇನ್ನು ಕಾಳಿ ಸಿನಿಮಾದಲ್ಲಿ ಅಭಿಷೇಕ ಹಾಗೂ ಸಪ್ತಮಿ ಗೌಡ ಹೇಗೆ ಕಾಣುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.