Advertisements

ಕನ್ನಡದ ಖ್ಯಾತ ನಟ ಕಿಶೋರ್ ಅವರ ಹೆಂಡತಿ ಮತ್ತು ಮಕ್ಕಳು ಹೇಗಿದ್ದಾರೆ ಗೊತ್ತಾ .? ಮೊದಲ ಬಾರಿಗೆ ನೋಡಿ..

Cinema Entertainment Inspiration

ನಮಸ್ತೆ ಸ್ನೇಹಿತರೆ, ಖ್ಯಾತ ನಟ ಕಿಶೋರ್ ಅವರು ಆಗಸ್ಟ್ 14 1974 ರಂದು ಜನಿಸಿದರು. ಇವರ ಹುಟ್ಟೂರು ಚನ್ನಪಟ್ಟಣ. ಇನ್ನು ಕಿಶೋರ್ ಅವರು ಕನ್ನಡ, ತಮಿಳು ಹಾಗೂ ತೆಲುಗಿನ ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲಿ ಇವರು ಸಹಾಯಕ ನಟನಿಗಿಂತ ಪ್ರಮುಖವಾಗಿ ಖಳನಟನಾಗಿ ತುಂಬಾ ಫೇಮಸ್ ಆಗಿದ್ದಾರೆ. ಇವರ ಪಾತ್ರ ಸಿನಿಮಾರಂಗದಲ್ಲಿ ನೆಗೆಟಿವ್ ಇದ್ದರೂ, ನಿಜಜೀವನದಲ್ಲಿ ಮಾತ್ರ ಇವರು ಶಾಂತ ಹಾಗೂ ಮೃದು ಸ್ವಭಾವದ ವ್ಯಕ್ತಿಯ ರೀತಿ ಬದುಕುತ್ತಿದ್ದಾರೆ. ಇವರು ಸಿನಿಮಾಗಳಲ್ಲಿ ನಟಿಸುವ ಮುನ್ನ ಎರಡು ವರ್ಷಗಳ ಕಾಲ ಬೆಂಗಳೂರಿನಲ್ಲಿ ಒಂದು ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸದಲ್ಲಿ ಮಾಡುತ್ತಿದ್ದರು.

Advertisements
Advertisements

2004ರಲ್ಲಿ ಕಿಶೋರ್ ಅವರು ಕನ್ನಡದ ‘ಕಂಠಿ’ ಎನ್ನುವ ಸಿನಿಮಾದ ಮೂಲಕ ಕನ್ನಡ ಸಿನಿಮಾ ಲೋಕಕ್ಕೆ ಪಾದರ್ಪಣೆ ಮಾಡುತ್ತಾರೆ. ನಂತರ ಇವರಿಗೆ ಕಂಠಿ ಚಿತ್ರದ ನಟನೆಗೆ ಕರ್ನಾಟಕ ರಾಜ್ಯದ ಪ್ರಶಸ್ತಿ ಕೂಡ ದೊರಕಿದೆ. ಇನ್ನು ಕಂಠಿ ಸಿನಿಮಾದ ಯಶಸ್ಸಿನ ಬಳಿಕ ಆಕಾಶ್, ಡೆಡ್ಲಿ ಸೋಮ, ರಾಕ್ಷಸ, ಕನ್ನಡದ ಕಂದ, ಗೆಳೆಯ, ಕ್ಷಣಕ್ಷಣ, ದುನಿಯಾ,, ಇಂತಿ ನಿನ್ನ ಪ್ರೀತಿಯ ಅಕ್ಕ ತಂಗಿ, ಬಿರುಗಾಳಿ, ಪಿಸ್ತೂಲ್, ಕಬಡ್ಡಿ, ಹುಲಿ, ಕಳ್ಳರ ಸಂತೆ, ಬಿರುಗಾಳಿ, ಅಟ್ಟಹಾಸ, ಉಳಿದವರು ಕಂಡಂತೆ, ವಾಸ್ಕೋಡಿಗಾಮ, ಕಿರಗೂರಿನ ಗಯ್ಯಾಳಿಗಳು, ಕಥಾಸಂಗಮ, ಶಿವಾರ್ಜುನ ಹೀಗೆ ಸಾಕಷ್ಟು ಸಕ್ಸಸ್ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಇದು ಅಲ್ಲದೆ ಇವರ ರಾಕ್ಷಸ ಎನ್ನುವ ಕನ್ನಡ ಸಿನಿಮಾಗೂ ಕೂಡ ಕರ್ನಾಟಕ ರಾಜ್ಯದ ಅವಾರ್ಡ್ ದೊರಕಿದೆ. ಉಳಿದವರು ಕಂಡಂತೆ ಚಿತ್ರದ ಮೂಲಕ ಇವರು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡರು. ಹಾಗೆಯೇ ಇವರು ನಟಿಸಿದ ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 8 ಎನ್ನುವ ವೆಬ್ ಸಿರೀಸ್ ನಲ್ಲೂ ಕೂಡ ಕಮಾಂಡರ್ ಪಾತ್ರದಲ್ಲಿ ಅದ್ಭುತವಾಗಿ ನಟನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇವರು ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲೂ ಸಹ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿಶೋರ್ ಅವರು ಸಿನಿಮಾ ಜೊತೆಗೆ ವ್ಯವಸಾಯವನ್ನು ಕೂಡ ಮಾಡುತ್ತಿದ್ದಾರೆ. ಇನ್ನು ಕಿಶೋರ್ ಕುಮಾರ್ ಅವರ ಹೆಂಡತಿಯ ಹೆಸರು ವಿಶಾಲಾಕ್ಷಿ, ಈ ದಂಪತಿಗಳಿಗೆ ಇಬ್ಬರು ಮಕ್ಕಳು ಕೂಡ ಇದ್ದಾರೆ. ಕಿಶೋರ್ ಅವರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.