Advertisements

ನೆನಪಿರಲಿ ಪ್ರೇಮ್ ಅವರ ಅತಿ ದೊಡ್ಡ ಮನೆ ಹೇಗಿದೆ ಗೊತ್ತಾ? ಕೋಟಿಗಳು ಬೆಲೆ ಬಾಳುವ ಮನೆ ಅಬ್ಬಬ್ಬಾ ನೋಡೊದಕ್ಕೆ ಎರಡು ಕಣ್ಣು ಸಾಲದು! ನೋಡಿ..

Cinema

ತಮ್ಮ ಕ್ಲಾಸಿಕ್ ಅಭಿನಯದ ಮೂಲಕವೇ ಅದೆಷ್ಟೋ ಹುಡುಗಿಯರ ಮನಸ್ಸನ್ನು ಗೆದ್ದು ಸಾಕಷ್ಟು ಲವ್ ರಿಲೇಟೆಡ್ ಸಿನಿಮಾಗಳ ಮೂಲಕವೇ ಕನ್ನಡ ಸಿನಿಮಾರಂಗದಲ್ಲಿ ಸಕ್ರಿಯರಾಗಿರುವ ನಟ ನೆನಪಿರಲಿ ಪ್ರೇಮ್ ಯಾರಿಗೆ ತಾನೆ ನೆನಪಿರಲಿ ಸಾಧ್ಯವಿಲ್ಲ ಹೇಳಿ?? ಇಂತಹ ಸುಂದರ ನಟ ಇತ್ತೀಚಿನ ಖರೀದಿಸಿರುವ ಭವ್ಯ ಬಂಗಲೆ ಹೇಗಿದೆ? ಮನೆಯ ಇಂಟೀರಿಯರ್ ಡಿಸೈನ್ ಗಳನ್ನೆಲ್ಲ ಹೇಗೆ ಮಾಡಿಸಿದ್ದಾರೆ? ಹಾಗೂ ಮನೆ ಎಷ್ಟು ಕೋಟಿ ಬೆಲೆಬಾಳುತ್ತದೆ ಎಂಬ ಎಲ್ಲ ಮಾಹಿತಿಯನ್ನು ತಿಳಿಸುವ ಸಲುವಾಗಿ ನಾವಿವತ್ತು ಈ ಪುಟವನ್ನು ಬರೆದಿದ್ದೇವೆ. ಆದ್ದರಿಂದ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹೌದು ಫ್ರೆಂಡ್ಸ್ ಕಳೆದ ಪುಟದಲ್ಲಿ ನಾವು ನಟ ಪ್ರೇಮ್ ಅವರು ಆಂಬುಲೆನ್ಸ್ನಲ್ಲಿ ಹೋಗಿ ಪ್ರೇಮನಿವೇದನೆ ಮಾಡಿ ತನ್ನ ಪ್ರೀತಿಯನ್ನು ಗೆಲವಾಗಿಸಿಕೊಂಡ ಪ್ರೇಮ್ ಕಹಾನಿಯನ್ನು ತಿಳಿಸಿದ್ದೇವೂ. ಇದೀಗ ಲವ್ಲಿ ಸ್ಟಾರ್ ಪ್ರೇಮ್ ಅವರ ಮನೆಯ ಕುರಿತು ತಿಳಿಯುವ ಸಮಯ.

Advertisements
Advertisements

ಹೌದು ಸ್ನೇಹಿತರೆ ನೆನಪಿರಲಿ ಸಿನಿಮಾದ ಮೂಲಕ ಹೆಚ್ಚಾಗಿ ಗುರುತಿಸಿಕೊಂಡ ನಟ ಪ್ರೇಮ್ ಅವರ ಹೆಸರು ನೆನಪಿರಲಿ ಪ್ರೇಮ್ ಎಂದು ಬದಲಾಗಿಹೋಯಿತು. ಕನ್ನಡ ಸಿನಿಮಾರಂಗದಲ್ಲಿ ಬರೋಬ್ಬರಿ 26 ಅಧಿಕ ಸಿನಿಮಾಗಳಿಗೆ ಬಣ್ಣ ಹಚ್ಚಿರುವ ಪ್ರೇಮ್ ಚಾರ್ಮಿನಾರ್, ಚಂದ್ರ, ಪಲ್ಲಕ್ಕಿ, ಮಳೆ ಹಾಗೂ ಇತ್ತೀಚಿಗಿನ ಪ್ರೇಮಂ ಪೂಜ್ಯಂ ಸೇರಿದಂತೆ ಹಲವಾರು ಹಿಟ್ ಸಿನಿಮಾಗಳ ಮೂಲಕ ಇಂದಿಗೂ ಕೂಡ ಚಾಕ್ಲೇಟ್ ಹೀರೋ ತರ ಹೊಸ ಹೊಸ ಸಿನಿಮಾಗಳ ಮೂಲಕ ತೆರೆಮೇಲೆ ಮಿಂಚುತ್ತಿರುತ್ತಾರೆ. ಇನ್ನೂ ಕಳೆದ ಕೆಲವು ದಿನಗಳ ಹಿಂದಷ್ಟೇ ನಟ ಗಣೇಶ್ ನಡೆಸಿ ಕೊಡುವಂತಹ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮಕ್ಕೆ ತಮ್ಮ ಹೆಂಡತಿ ಮಕ್ಕಳೊಂದಿಗೆ ಬಂದಂತಹ ಪ್ರೇಮ್ ಅವರ ಸುಂದರ ಕುಟುಂಬಕ್ಕೆ ಇಡೀ ಕರ್ನಾಟಕವೇ ಫೀದಾ ಆಗಿ ಹೋಗಿತ್ತು.

ಹೌದು ಸ್ನೇಹಿತರೆ 2001ರಲ್ಲಿ ನಟ ಪ್ರೇಮ್ ಜ್ಯೋತಿ ಎಂಬುವರೊಂದಿಗೆ ಪ್ರೀತಿಸಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು ಇವರಿಬ್ಬರ ಪ್ರೀತಿಗೆ ಸಾಕ್ಷಿ ಎಂಬಂತೆ ಒಂದು ಗಂಡು ಮತ್ತು ಒಂದು ಮುದ್ದಾದ ಹೆಣ್ಣುಮಗಳಿದ್ದಾರೆ. ಹೀಗೆ ಸಿನಿಮಾ ಕ್ಷೇತ್ರದ ಜೊತೆಗೆ ವೈಯಕ್ತಿಕ ಬದುಕಿನಲ್ಲಿಯೂ ಸುಖ ಜೀವನವನ್ನು ಅನುಭವಿಸುತ್ತಿರುವ ನಟ ಪ್ರೇಮ್ ಅವರು ಇತ್ತೀಚಿಗಷ್ಟೇ ಭವ್ಯ ಬಂಗಲೆಯೊಂದನ್ನು ಖರೀದಿಸಿ ಅದರ ಗೃಹಪ್ರವೇಶ ಕಾರ್ಯಕ್ರಮವನ್ನು ಅದ್ಧೂರಿಯಾಗಿ ನೆರವೇರಿಸಿದರು. ಅಲ್ಲದೆ ಒಂದು ಮೂಲಗಳ ಪ್ರಕಾರ ಪ್ರೇಮ್ ಖರೀದಿ ಮಾಡಿರುವಂತಹ ಮನೆ ಬರೋಬ್ಬರಿ ಎರಡೂವರೆ ಕೋಟಿ ಬೆಲೆಬಾಳುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಈ ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೇ ನಮಗೆ ಕಾಮೆಂಟ್ ಮೂಲಕ ತಿಳಿಸಿ.