Advertisements

ಡೈಲಾಗ್ ಕಿಂಗ್ ಸಾಯಿಕುಮಾರ್ ಅವರ ತಾಯಿ ಯಾರು ಗೊತ್ತಾ ? ಅವರು ಕೂಡ ಒಬ್ಬ ನಟಿ..!

Cinema

ನಮಸ್ತೆ ಸ್ನೇಹಿತರೆ, ಡೈಲಾಗ್ ಕಿಂಗ್ ಸಾಯಿಕುಮಾರ್ ಅಂದರೆ ಯಾರಿಗೆ ಗೊತ್ತಿಲ್ಲ ಹೇಳಿ. ಇವರು ತಮ್ಮ ಖಡಕ್ ಲುಕ್ ಮತ್ತು ಮಾಸ್ ಪಂ’ಚ್ ಡೈಲಾಗ್ ಗಳಿಂದ ಎಲ್ಲರನ್ನೂ ಆಕರ್ಷಿಸಿದ್ದಾರೆ. ಕನ್ನಡದಲ್ಲಿ ಬಹುತೇಕ ಸಿನಿಮಾಗಳಲ್ಲಿ ಅವರು ಹೇಳಿದ ಖಡಕ್ ಡೈಲಾಗ್ ಗಳಿಂದ ಪ್ರಖ್ಯಾತರಾದವರು. ಇವರ ನಾಲ್ಕು ಸಿಂಹಗಳ ಡೈಲಾಗ್ ಮಾತ್ರ ಕರ್ನಾಟಕವಲ್ಲದೆ ಬೇರೆ ರಾಜ್ಯಗಳಲ್ಲೂ ಸಂಚಲನ ಮೂಡಿಸಿತ್ತು. ಸಾಯಿಕುಮಾರ್ ಅವರು ಜುಲೈ 27 1960 ರಂದು ಜನಿಸಿದ್ದಾರೆ. ಇವರು 1992 ರಲ್ಲಿ ಮೊದಲನೆಯ ಬಾರಿ ಕನ್ನಡ ಸಿನಿಮಾ ರಂಗದಲ್ಲಿ ನಟಿಸಿದ ಸಿನಿಮಾ ‘ಪ್ರೇಮ ಸಂಗಮ’.

Advertisements
Advertisements

ನಂತರ ಹಲವಾರು ಕನ್ನಡ ಚಿತ್ರಗಳಲ್ಲಿ ನಟಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 1996 ರಲ್ಲಿ ಇವರು ನಟಿಸಿದ್ದ ‘ಪೊಲೀಸ್ ಸ್ಟೋರಿ’ ಚಿತ್ರದ ತಮ್ಮ ಖದರ್ ಡೈಲಾಗ್ನಿಂದ ಎಲ್ಲಾ ಕನ್ನಡಿಗರನ್ನು ತನ್ನ ಕಡೆ ತಿರುಗಿ ನೋಡುವಂತೆ ಮಾಡಿದರು. ಇದರಿಂದ ಕನ್ನಡ ಚಿತ್ರರಂಗದಲ್ಲಿ ಒಬ್ಬ ಮಾ’ಸ್ ಹೀರೋ ಸಿಕ್ಕರು ಎಂದು ಎಲ್ಲಾ ಅಭಿಮಾನಿಗಳು ಖುಷಿಪಟ್ಟರು. ಸಾಯಿಕುಮಾರ್ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗಿನಲ್ಲಿಲೂ ಸಹ ಸುಮಾರು ಚಿತ್ರಗಳಲ್ಲಿ ನಟಿಸಿದ್ದಾರೆ..

ಇವರು ಮೊದಲು ತೆಲುಗು ಸಿನಿಮಾರಂಗದಲ್ಲಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಕೆಲಸ ಮಾಡುತ್ತಿದ್ದರು. ಸುಮನ್, ಅರ್ಜುನ್ ಸರ್ಜಾ, ರಾಜಶೇಖರ್ ಅವರಿಗೆ ಡಬ್ಬಿಂಗ್ ಕೊಟ್ಟಿದ್ದಾರೆ. ಹಾಗೆಯೇ ತಮಿಳಿನಲ್ಲಿ ರಜನಿಕಾಂತ್ ಮತ್ತು ಬಾಲಿವುಡ್ ನ ಅಮಿತಾಬ್ ಬಚ್ಚನ್ ಅವರಿಗೆ ಡಬ್ಬಿಂಗ್ ಮಾಡಿದ್ದಾರೆ. ಇದಾದ ನಂತರ ಸಾಯಿಕುಮಾರ್ ಅವರು ಕನ್ನಡ, ತೆಲುಗು, ತಮಿಳು ಸೇರಿದಂತೆ ನಾಯಕ ನಟರಾಗಿ 100 ಗಿಂತ ಹೆಚ್ಚು ಸಿನಿಮಾಗಳನ್ನು ಅಭಿನಯಿಸಿದ್ದಾರೆ..

ಇನ್ನೂ ಕನ್ನಡದ ಸಿನಿಮಾ ಕಲ್ಪನಾ ಮತ್ತು ರಂಗಿತರಂಗ ಚಿತ್ರಗಳಲ್ಲಿ ತಮ್ಮ ಅಭಿನಯದಿಂದ ಎಲ್ಲರಿಗೂ ಅ’ಚ್ಚರಿ ಮೂಡಿಸಿದ್ದರು. ಇವರ ಸಹೋದರರಾದ ಅಯ್ಯಪ್ಪ ಮತ್ತು ರವಿಶಂಕರ್ ಅವರು ಕೂಡ ಸಿನಿಮಾ ರಂಗದಲ್ಲಿ ಬಹು ಪ್ರಖ್ಯಾತ ನಟರಾಗಿದ್ದಾರೆ. ಇನ್ನೂ ಸಾಯಿಕುಮಾರ್ ಅವರ ತಾಯಿಯ ಹೆಸರು ಕೃಷ್ಣಾಜ್ಯೋತಿ. ಕೃಷ್ಣಾಜ್ಯೋತಿ ಹಳೆ ಸಿನಿಮಾಗಳಲ್ಲಿ ನಟಿಸಿರುವ ನಟಿಯಾಗಿದ್ದು ಇವರು ಕೂಡ ಕನ್ನಡ,ತೆಲುಗು, ತಮಿಳು ಸೇರಿದಂತೆ ಹಲವಾರು ಸಿನಿಮಾಗಳನ್ನು ನಟಿಸಿದ್ದಾರೆ.. ಹಾಗೆ ತಮ್ಮ ಕಂಠವನ್ನು ಸಹ ನಟಿಯರಿಗೆ ದಾನ ಮಾಡಿದ್ದಾರೆ. ಸಾಯಿಕುಮಾರ್ ಅವರ ತಂದೆ ಹೆಸರು ಪಿ.ಜೆ.ಶರ್ಮ. ಸಾಯಿಕುಮಾರ್ ಅವರ ತಾಯಿ 2006 ರಲ್ಲಿ ತಮ್ಮ 66ನೇ ವರ್ಷಗಳು ಇದ್ದಾಗ ನಿ’ಧನರಾದರು… ಸಾಯಿಕುಮಾರ್ ಅವರ ನಟನೆಯ ಬಗ್ಗೆ ನೀವೇನಂತೀರಿ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.