Advertisements

ಖ್ಯಾತ ನಟಿ ಸಿತಾರಾ ಮದುವೆಯಾಗದೆ ಉಳಿದಿದ್ದೇಕೆ ಗೊತ್ತಾ.? ಅಸಲಿ ಸತ್ಯ ತಿಳಿದರೆ ಕ’ಣ್ಣೀರು ಬರುತ್ತದೆ.!

Cinema Entertainment

ನಮಸ್ತೆ ಸ್ನೇಹಿತರೆ, ಕನ್ನಡ ಸಿನಿಮಾರಂಗದಲ್ಲಿ ಅಣ್ಣಾ ರಾಜಕುಮಾರ್ ಅವರ ಜೊತೆ ನಟಿಸುವುದು ಅದೃಷ್ಟ ಎಂದು ಹೇಗೆ ಎಲ್ಲಾ ನಟ-ನಟಿಯರು ಭಾವಿಸುತ್ತಿದ್ದರೋ, ಅದೇ ರೀತಿ ವಿಷ್ಣುವರ್ಧನ್ ಅವರ ಜೊತೆ ಸಹ ನಟಿಸುವ ಅವಕಾಶ ಬರಲಿ ಎಂದು ಹಲವು ನಟಿಯರು ಕಾದಿದ್ದು ಕೂಡ ಸತ್ಯ. ಅಂತಹ ಅವಕಾಶವನ್ನು ಗಿಟ್ಟಿಸಿಕೊಂಡವರಲ್ಲಿ ನಟಿ ಸಿತಾರಾ ಅವರು ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಲುಂಡತವರು ನೋಡಲು ಬಂದ ಮಗಳನ್ನು ಕನ್ನಡದ ಮನೆಮಗಳಂತೆ ಆಧರಿಸಿ ಹಾರೈಸಿ ಆಕೆಯ ಭವಿಷ್ಯವೇ ಉಜ್ವಲಗೊಳ್ಳುವಂತೆ ಮಾಡಿದ್ದು ಇತಿಹಾಸ.

Advertisements
Advertisements

ನಟಿ ಸಿತಾರಾ ಅವರು ವಿಷ್ಣುವರ್ಧನ್, ಅಂಬರೀಶ್, ರಾಮ್ ಕುಮಾರ್, ಅನಂತನಾಗ್, ರಾಮರಾಜ್, ದರ್ಶನ್, ಮನೋರಂಜನ್ ರವಿಚಂದ್ರನ್ ಹಾಗೂ ಚಿರಂಜೀವಿ ಸರ್ಜಾ ಹೀಗೆ ಹಲವು ಖ್ಯಾತನಟರೊಂದಿಗೆ ನಟಿಸಿ ಕನ್ನಡ ಪ್ರೇಕ್ಷಕರ ಹೃದಯ ಕ’ದ್ದವರು. ವಿಷ್ಣುವರ್ಧನ್ ಅವರೊಂದಿಗೆ ನಟಿಸುವ ಮೂಲಕ ಸಾಕಷ್ಟು ಅಭಿಮಾನಿಗಳ ಹೃದಯವನ್ನು ಗೆದ್ದಂತಹ ನಟಿ ಸಿತಾರಾ ಯಾಕೆ ಮದುವೆಯಾಗಲಿಲ್ಲ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಈ ಮಾಹಿತಿಯನ್ನು ಸಂಪೂರ್ಣವಾಗಿ ಓದಿ. ಇವರು ಹುಟ್ಟಿದ್ದು ಕೇರಳದಲ್ಲಿ. ಇವರ ಮೂಲ ಹೆಸರು ಸೀತಾರ ನಾಯಕ್.

ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಚತುರ್ಭಾಷಾ ತಾರೆಯಾದ ಸಿತಾರಾ ತಮ್ಮ ನಟನಾ ವೃತ್ತಿ ಆರಂಭಿಸಿದ್ದು ಪುದು ಪುದು ಅರ್ಥಂಗಲ್ ಎಂಬ ತಮಿಳು ಸಿನಿಮಾದ ಮೂಲಕ. ನಟಿ ಸಿತಾರ ಸಿನಿಮಾ ರಂಗಕ್ಕೆ ಪ್ರವೇಶ ಮಾಡಿದ್ದೇ ವಿಶೇಷ ಎನ್ನಬಹುದು. ತಂದೆ ರಾಮೇಶ್ವರ ನಾಯಕ್ ಅವರೊಟ್ಟಿಗೆ ಪ್ರತಿದಿನ ಚಿತ್ರೀಕರಣಕ್ಕೆ ಹೋಗಿ ಬರುತ್ತಲೇ ಚಿತ್ರರಂಗದ ಸೆಳೆತಕ್ಕೆ ಆಕರ್ಷಿತರಾದರು. ಚಿತ್ರರಂಗಕ್ಕೆ ಬರಬೇಕು ಎನ್ನುವ ಕನಸು ಮೊಳಕೆ ಒಡೆದದ್ದು ಕೂಡಾ ಅಲ್ಲೇ, ತಂದೆಯ ಆಸೆಯಂತೆ ದೊಡ್ಡ ನಟಿಯು ಕೂಡ ಆಗುತ್ತಾರೆ. ಹೀಗೆ ಚಿತ್ರರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಬ್ಯುಸಿಯಾದ ಸಿತಾರಾ ತಮಗೂ ಒಂದು ವೈಯಕ್ತಿಕ ಬದುಕಿದೆ ಎಂಬುದನ್ನು ಮರೆತುಬಿಟ್ಟಿದ್ದರು.

ತಮಗೂ ಒಂದು ವೈಯಕ್ತಿಕ ಬದುಕು ಕಾಯುತ್ತಿದೆ ಎಂದು ಯೋಚನೆ ಮಾಡುವಷ್ಟರಲ್ಲಿ ನಟಿ ಸಿತಾರ ಜೀವನದ ದೋಣಿ ನಿಲ್ಲದೆ ಮುಂದೆ ಸಾಗಿಬಿಟ್ಟಿತ್ತು. ಒಂದು ಹೆಣ್ಣಿನ ಬದುಕಲ್ಲಿ ಮದುವೆ ಎನ್ನುವುದು ಒಂದು ಹೊಸ ಅಧ್ಯಾಯ ತಾವು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ಗಂಡನಾಗಿ ಮಾತ್ರವಲ್ಲದೆ, ಒಳ್ಳೆಯ ಗೆಳೆಯನಾಗಿ ಕೈಹಿಡಿದು ನಡೆಸಬೇಕು ಎಂಬ ಕನಸನ್ನು ಪ್ರತಿಯೊಬ್ಬ ಹೆಣ್ಣು ಮಗಳು ಕಂಡಿರುತ್ತಾಳೆ. ಆದರೆ ಅಂತಹ ವ್ಯಕ್ತಿಯ ಆಗಮನ ಸಿತಾರಾ ಅವರ ಬದುಕಲ್ಲಿ ಆಗದೆ ಇದ್ದ ಕಾರಣ ತಾನು ಮದುವೆಯಾಗಲಿಲ್ಲ ಎಂದು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಸೀತಾರಾಮರ ಬಗ್ಗೆ ನಿಮ್ಮ ಅಭಿಪ್ರಾಯವೇನು ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.