Advertisements

ವಿಭಿನ್ನವಾಗಿ ನಿಶ್ಚಿತಾರ್ಥ ಮಾಡಿಕೊಂಡ ಬಿಗ್ ಬಾಸ್ ಸ್ಪರ್ಧಿ ವೈಜಯಂತಿ..! ಹುಡುಗ ಎಲ್ಲರಿಗೂ ಚಿರಪರಿಚಿತ.! ಯಾರು ಗೊತ್ತಾ..?

Kannada News

ನಮಸ್ತೆ ಸ್ನೇಹಿತರೆ, ನಟಿ ವೈಜಯಂತಿ ಅವರನ್ನು ಎಲ್ಲರೂ ನೋಡಿರುತ್ತೀರ. ಬಿಗ್ ಬಾಸ್ ಸೀಸನ್ 8ರ ಮೊದಲ ಇನ್ನಿಂಗ್ಸ್‌ನಲ್ಲಿ ವೈಜಯಂತಿ ಅಡಿಗ ಅವರು ವೈಲ್ಡ್ ಕಾರ್ಡ್ ಇಂದ ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದರು. ಆದರೆ, ‘ಬಿಗ್ ಬಾಸ್’ ಮನೆಯಲ್ಲಿ ವೈಜಯಂತಿ ಅಡಿಗ ಅವರ ಹೆಚ್ಚು ದಿನ ಉಳಿದುಕೊಳ್ಳಲಿಲ್ಲ. ಬಿಗ್ ಮನೆಯೊಳಗೆ ಕಾಲಿಟ್ಟ ಮೂರೇ ದಿನದಲ್ಲಿ ವೈಜಯಂತಿ ಅಡಿಗ ಬಿಗ್ ಬಾಸ್ ಮನೆಯಿಂದ ಹೊರಗೆ ಬಂದರು. ಈಗ ವೈಜಯಂತಿ ಅಡಿಗ ಅವರ ಮನೆಯಲ್ಲಿ ಸಡಗರ ಮುಗಿಲು ಮುಟ್ಟಿದೆ. ಯಾಕೆಂದರೆ ವೈಜಯಂತಿ ಅಡಿಗ ಫಾರಿನ್ ಹುಡುಗನ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಆ ಹುಡುಗ ಯಾರು ಗೊತ್ತಾ..

Advertisements
Advertisements

ವೈಜಯಂತಿ ಅಡಿಗ ಅವರು ಮದುವೆಯಾಗುವ ಹುಡುಗನ ಹೆಸರು ಸೂರಜ್ ಸಂಜಯ್ ಅಂತ. ಸೂರಜ್ ಸಂಜಯ ಅವರು ವಿದೇಶದಲ್ಲಿ ದೊಡ್ಡ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಸೂರಜ್ ಸಂಜಯ್ ವಿದೇಶದಲ್ಲಿರುವ ಕಾರಣ ಇವರಿಬ್ಬರ ನಿಶ್ಚಿತಾರ್ಥದ ಶಾಸ್ತ್ರಗಳು ಲ್ಯಾಪ್ಟಾಪ್ನಲ್ಲಿ ವಿಡಿಯೋ ಕಾಲ್ ಮುಖಾಂತರ ನೆರವೇರಿದೆ. ಸೂರಜ್ ಎಲ್ಲರಿಗೂ ಚಿರಪರಿಚಿತ ಯಾಕೆಂದರೆ, ಇದಕ್ಕೂ ಮೊದಲೇ ವೈಜಯಂತಿ ಅವರು ಸೂರಜ್ ಅವರ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದರು. ಅದೇ ರೀತಿ ನಿಶ್ಚಿತಾರ್ಥ ಆನಂದ ಕ್ಷಣಗಳ ಫೋಟೋ ಹಾಗೂ ವಿಡಿಯೋಗಳನ್ನು ವೈಜಯಂತಿ ಅಡಿಗ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಇದರ ಜೊತೆ ವೈಜಯಂತಿ ಅಡಿಗ ಮತ್ತು ಸೂರಜ್ ಸಂಜಯ್ ಇಬ್ಬರು ಸೇರಿ ಹಾಡುತ್ತಿರುವ ವಿಡಿಯೋವನ್ನೂ ಸಹ ವೈಜಯಂತಿ ಅಡಿಗ ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವೈಜಯಂತಿ ಅವರಿಗೆ ಅನೇಕರಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನಿರಾಸೆ ಹೊಂದಿದರೂ, ತಮ್ಮ ಜೀವನದಲ್ಲಿ ಮಾತ್ರ ಸುಖ ಸಂತೋಷಗಳೊಂದಿಗೆ ಇರಲಿ ಅಂತ ಆಶಿಸೋಣ..