Advertisements

ಶಕ್ತಿಧಾಮ ಮಕ್ಕಳ ಜವಾಬ್ದಾರಿ ನನ್ನದು ಎಂದ ವಿಶಾಲ್ ಇದೀಗ ಏನ್ ಮಾಡಿದ್ದಾರೆ ನೋಡಿ..

Cinema

ನಮಸ್ಕಾರ ಸ್ನೇಹಿತರೆ ನಮ್ಮೆಲ್ಲಾ ಪ್ರೀತಿಯ ಅಪ್ಪು ಇಲ್ಲವಾಗಿ ತುಂಬಾ ದಿನ ಕಳೆಯುತ್ತ ಬಂದಿದೆ ಅವರು ನಡೆಸಿಕೊಂಡು ಬರುತ್ತಿದ್ದ ಸಮಾಜ ಸೇವೆಗಳು ಅವರು ಮಾಡಿದ ದಾನ ಧರ್ಮಗಳು ಅವರ ಹೆಸರನ್ನು ನಮ್ಮ ನಾಡಿನಲ್ಲಿ ಶಾಶ್ವತವಾಗಿ ಇರುವಂತೆ ಮಾಡಿದೆ. ಪುನೀತ್ ರಾಜಕುಮಾರ್ ಅವರ ನಿಧನ ಸುದ್ದಿ ತಿಳಿದು ಇಡೀ ಭಾರತೀಯ ಚಿತ್ರರಂಗ ನಿಜಕ್ಕೂ ಕೂಡ ಶಾಕ್ ಆಗಿತ್ತು.ಆ ಒಂದು ಸುದ್ದಿ ಇಡೀ ಕರುನಾಡಿನಲ್ಲಿ ಕತ್ತಲು ಆವರಿಸುವಂತೆ ಮಾಡಿತ್ತು. ಕನ್ನಡ ಚಿತ್ರರಂಗದ ಕಿರೀಟದಂತಿದ್ದ ಅಪ್ಪು ಅವರು ಇನ್ನು ಇಲ್ಲ ಎಂಬ ಕಹಿಸತ್ಯ ಅರಗಿಸಿಕೊಳ್ಳಲು ಯಾರಿಂದಲೂ ಕೂಡ ಇದುವರೆಗೂ ಸಾಧ್ಯವಾಗುತ್ತಿಲ್ಲ. ಅಂತೆಯೇ ತಮಿಳು ಮತ್ತು ತೆಲುಗು ಚಿತ್ರರಂಗದ ಬಹುತೇಕ ನಟರಿಗೆ ಇದು ನುಂಗಲಾರದ ಬಿಸಿ ತುಪ್ಪದ ವಿಷಯವಾಗಿತ್ತು.

[widget id=”custom_html-5″]

Advertisements
Advertisements

ತೆಲುಗಿನ ನಟ ಅಲ್ಲು ಅರ್ಜುನ್ ವಿಜಯ್ ದೇವರಕೊಂಡ ತಮ್ಮ ಸಿನಿಮಾಗಳ ಕಾರ್ಯಕ್ರಮದಲ್ಲಿ ಅಪ್ಪು ಅವರನ್ನು ನೆನೆದು ಮೌನಾಚರಣೆ ಮಾಡಿ ಅವರಿಗೆ ನಮನ ಸಲ್ಲಿಸಿ ಅಪ್ಪು ಅವರು ಮಾಡುತ್ತಿದ್ದಂತಹ ಸಾಮಾಜಿಕ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇತ್ತ ತಮಿಳಿನ ನಟ ವಿಶಾಲ್ ಅವರು ತಮ್ಮ ಸಿನಿಮಾದ ಕಾರ್ಯಕ್ರಮದಲ್ಲಿ ಅಪಾರ ಮನನೊಂದು ಪುನೀತ್ ರಾಜಕುಮಾರ್ ಅವರಿಗೆ ಗೌರವ ಸಲ್ಲಿಸಿ ಮೌನಾಚರಣೆ ಮಾಡಿದರು. ಪುನೀತ್ ರಾಜ್ ಕುಮಾರ್ ಅವರು ನನ್ನ ಸಹೋದರ ಇಂದು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಅವರು ಮಾಡುತ್ತಿದ್ದ ಅಂತಹ ಸಮಾಜ ಸೇವೆಗಳನ್ನು ಕೇಳಿ ನಿಜಕ್ಕೂ ನನಗೆ ಅವರ ಮೇಲೆ ಇದ್ದಂತಹ ಅಭಿಮಾನ ದುಪ್ಪಟ್ಟಾಗಿದೆ. ಅವರು ಸಾವಿರ 800 ಮಕ್ಕಳ ವಿದ್ಯಾಭ್ಯಾಸವನ್ನು ನೋಡಿಕೊಳ್ಳುತ್ತಿದ್ದರು.

[widget id=”custom_html-5″]

ಇನ್ನು ಮುಂದೆ ಆ ಜವಾಬ್ದಾರಿಯನ್ನು ಒಬ್ಬ ಸಹೋದರನಾಗಿ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಹೇಳಿದರು. ಅದೇ ಮಾತನ್ನು ರಾಜ್ಯ ಸರ್ಕಾರ ಅಪ್ಪು ನೆನಪಿನ ಅಂಗವಾಗಿ ಆಯೋಜನೆ ಮಾಡಿದಂತಹ ಅಪ್ಪು ನಮನ ಕಾರ್ಯಕ್ರಮದಲ್ಲಿ ಕೂಡ ಅದೇ ಮಾತನ್ನು ಮತ್ತೆ ಮತ್ತೆ ಹೇಳಿದರು. ಈ ವಿಚಾರವಾಗಿಯೆ ನಟ ವಿಶಾಲ್ ಅವರು ಬೆಂಗಳೂರಿನಲ್ಲಿ ಉಳಿದು ಅಪ್ಪು ಅವರ ಪತ್ನಿ ಅಶ್ವಿನಿ ಅವರ ಬಳಿ ಮಾತನಾಡಿದ್ದು ಶಕ್ತಿಧಾಮ ಕೇಂದ್ರದ ಜವಾಬ್ದಾರಿ ನೋಡಿಕೊಳ್ಳಲು ಅನುಮತಿ ಕೇಳಿದ್ದಾರಂತೆ.

[widget id=”custom_html-5″]

ಈ ಬಗ್ಗೆ ಶಿವಣ್ಣ ಅವರ ಮನೆಗೂ ಕೂಡ ಬೇಟಿಕೊಟ್ಟು ಮಾತನಾಡಿ ಚರ್ಚಿಸಿರುವ ವಿಶಾಲ್ ಅವರಿಗೆ ರಾಜ್ ಕುಟುಂಬ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿ ಕೊಂಚ ಸಮಯ ಕೊಡಿ ಈ ಬಗ್ಗೆ ಎಲ್ಲೆಲ್ಲಿ ಅಗತ್ಯವಿದೆ ಎಂಬುದನ್ನು ಪರಿಶೀಲಿಸಿ ನಿಮಗೆ ತಿಳಿಸುತ್ತೇವೆ ಎಂದಿದ್ದಾರಂತೆ ನಟ ವಿಶಾಲ್ ಅವರು ಅಂದು ವೇದಿಕೆ ಮೇಲೆ ಏನು ನುಡಿದಿದ್ದರೋ ಆ ಮಾತನ್ನು ಕಾರ್ಯರೂಪ ಕೆಲಸಕ್ಕೆ ಮುಂದಾಗಿರುವುದು ನಿಜಕ್ಕೂ ಕೂಡ ಪ್ರಶಂಸನೀಯವಾದದ್ದು. ಇದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮುಖಾಂತರ ತಿಳಿಸಿ..

[widget id=”custom_html-5″]