Advertisements

ಕನ್ನಡದ ನಟಿ ಯಮುನಾ ಅವರ ಬಗ್ಗೆ ನಿಮಗೆ ಎಷ್ಟು ಗೊತ್ತು.? ಅವರ ಮಗಳು ಯಾರು ಗೊತ್ತಾ ಮೊದಲ ಬಾರಿಗೆ ನೋಡಿ.!!

Cinema Entertainment

ನಮಸ್ತೆ ಸ್ನೇಹಿತರೆ, ನಟಿ ಯಮುನಾ ಅವರು ತೆಲುಗು ಭಾಷೆಯ ಮೂಲಕ 1992 ರಲ್ಲಿ ಬೆಳ್ಳಿತೆರೆಗೆ ಕಾಲಿಟ್ಟರು. ಆಂಧ್ರಪ್ರದೇಶದ ಯಮುನಾ ಅವರು 1990 ರ ಸಮಯದಲ್ಲಿ ದಕ್ಷಿಣ ಭಾರತದ ಸೊಗಸಾದ ನಟಿಯಾಗಿ ತುಂಬಾ ಅಭಿಮಾನಿಗಳ ಹೃದಯವನ್ನು ಕ’ದ್ದಿದ್ದರು. ಯಮುನಾ ಅವರ ಮೊದಲಿನ ಹೆಸರು ಪ್ರೇಮ ಅಂತ. ಖ್ಯಾತ ನಿರ್ದೇಶಕರಾದ ಬಾಲಚಂದರ್ ಅವರು ಪ್ರೇಮಾ ಎಂಬ ಹೆಸರನ್ನು ಯಮುನಾ ಎಂದು ಕರೆಯುವುದರ ಮೂಲಕ ಹೆಸರನ್ನು ಬದಲಾಯಿಸಿದರು. ಯಮುನಾ ಅವರು ತೆಲುಗು,ಮಲಯಾಳಂ, ಕನ್ನಡ ಮತ್ತು ತಮಿಳಿನ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ತೆಲುಗಿನಲ್ಲಿ ಮಾತ್ರ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿದ್ದಾರೆ.

Advertisements
Advertisements

1989 ರಲ್ಲಿ ಶಿವರಾಜ್ ಕುಮಾರ್ ಅವರ ಅಭಿನಯದ ಮೋಡದ ಮರೆಯಲಿ ಎನ್ನುವ ಚಿತ್ರದ ಮೂಲಕ ಯಮುನಾ ಅವರು ಕನ್ನಡ ಸಿನಿ ರಂಗಕ್ಕೆ ಪ್ರವೇಶಿಸಿದರು. ಇದಾದ ನಂತರ ಮಾವನಿಗೆ ತಕ್ಕ ಅಳಿಯ, ಹೆಂಡತೀರೆ ಹುಷಾರು, ಕೆರಳಿದ ಸರ್ಪ, ಚಿನ್ನ, ಪ್ರೇಮಗೀತೆ, ಹಲೋ ಯಮ, ಶ್ರೀಮಂಜುನಾಥ, ಹಾಗೇ ಸುಮ್ಮನೆ, ನಾರಿಯ ಸೀರೆ ಕದ್ದ, ಕಂಠೀರವ, ಶಂಭೋ ಶಂಕರ, ದಿಲ್ ರಂಗೀಲ, ರಾಜ ಹಂಸ ಮುಂತಾದ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಯಮುನಾ ಅವರು ಶಿವರಾಜ್ ಕುಮಾರ್, ವಿಷ್ಣುವರ್ಧನ್ ಇನ್ನೂ ಖ್ಯಾತ ನಟರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದಾರೆ.

ಯಮುನಾ ಅವರು ಸಿನಿಮಾ ಮಾತ್ರವಲ್ಲದೆ ತಮಿಳು, ತೆಲುಗು ಮತ್ತು ಕನ್ನಡದ ಹಲವಾರು ಸೀರಿಯಲ್ ಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಕನ್ನಡದ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದೇವಿ ಎಂಬ ಸೀರಿಯಲ್ ನಲ್ಲಿ ಯಮುನಾ ಅವರು ನಟಿಸಿದ್ದಾರೆ. ಪ್ರಸ್ತುತ ನಟಿ ಯಮುನಾ ಅವರು ಸಿನಿಮಾಗಳಲ್ಲಿ ನಟಿಸುತ್ತಾ ಜೊತೆಗೆ ಹೆಚ್ಚು ಧಾರಾವಾಹಿಗಳಲ್ಲಿ ಕೂಡ ನಟಿಸುತ್ತಿದ್ದಾರೆ. ಯಮುನಾ ಅವರ ಮಗಳನ್ನು ನೀವು ನೋಡಿಲ್ಲ ಎಂದರೆ ಈಗಲೇ ಕೆಳಗೆ ಫೋಟೋನಲ್ಲಿ ನೋಡಿ. ಈ ಮಾಹಿತಿ ನಿಮಗೆ ಇಷ್ಟವಾದರೆ ಶೇರ್ ಮಾಡಿ.