Advertisements

ನಟಿ ಮಂಜುಳಾ ಅವರ ಮನೆ ಹಾಗೂ ಅವರ ಸಮಾ’ಧಿ ಈಗ ಹೇಗಿದೆ ಗೊತ್ತಾ? ನೋಡಿ..

Cinema

ನಮಸ್ತೆ ಸ್ನೇಹಿತರೆ, ನಟಿ ಮಂಜುಳಾ ಯಾರಿಗೆ ಗೊತ್ತಿಲ್ಲ ಹೇಳಿ.. ಕನ್ನಡ ಸಿನಿ ಲೋಕದಲ್ಲಿ ಈಕೆಯ ಸಾಧನೆ ಅನನ್ಯ. ಗಂಡುಭೀರಿ ರೀತಿ ಸಿನಿಮಾದಲ್ಲಿ ಅಭಿನಯಿಸಿ ಪಡ್ಡೆ ಹುಡುಗರ ಹೃದಯದ ಜೊತೆಗೆ ಹೆಂಗಸರ ಹೃದಯದಲ್ಲೂ ಸಹ ಮಂಜುಳಾ ಅವಿತು ಕೂತಿದ್ರು. ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದ ಪ್ರಸಿದ್ಧ ನಟಿ ಮಂಜುಳಾ ಹುಟ್ಟಿದ್ದು ಬೆಳೆದಿದ್ದು ಎಲ್ಲ ಬೆಂಗಳೂರಿನಲ್ಲಿಯೇ. ಇವರು ಕನ್ನಡ ಚಿತ್ರರಂಗದ ಅಪರೂಪದ ಸ್ಫುರದ್ರೂಪಿ ನಟಿ. ಎರಡು ಕನಸು ಸಿನಿಮಾದಲ್ಲಿ ಮುದ್ದು ಮನಸ್ಸಿನ ಸಾವಿರ ಕನಸುಗಳನ್ನು ಹೊತ್ತ ಪ್ರೇಮಿಯಾಗಿ, ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಗಂಡುಬೀರಿ ಹೆಣ್ಣಾಗಿ ಹಲವರು ನೆನಪಿಸಿಕೊಳ್ಳುವ ನಟಿಯಾಗಿ ಶಾಶ್ವತವಾಗಿ ಉಳಿದು ಹೋದವರು ನಟಿ ಮಂಜುಳಾ.

Advertisements
Advertisements

ಈಕೆ ಅಭಿನಯದ ಮೂಲಕವೇ ಸಿನಿಪ್ರಿಯರ ಮನಸ್ಸಲ್ಲಿ ಶಾಶ್ವತವಾಗಿ ಉಳಿದಿದ್ದಾರೆ. ಮಂಜುಳಾ ಅವರು ಬಾಲ್ಯದಿಂದಲೇ ಬಣ್ಣ ಹಚ್ಚಬೇಕು ತಾನೊಬ್ಬ ನಟಿಯಾಗಬೇಕು ಅಂತ ದೊಡ್ಡ ಆಸೆಯನ್ನು ಇಟ್ಟುಕೊಂಡಿದ್ದರು. ಈ ಆಸೆಯಿಂದ ಚಿಕ್ಕವಯಸ್ಸಿಂದನೇ ನಾಟಕದಲ್ಲಿ ಅಭಿನಯಿಸಲಿಕ್ಕೆ ಸಹ ಶುರು ಮಾಡಿದ್ರು. ಬೆಂಗಳೂರಿನ ಪ್ರಬಾತ್ ಕಲಾವಿದರ ತಂಡದೊಂದಿಗೆ ಹಲವು ನಾಟಕಗಳಲ್ಲಿ ಅಭಿನಯಿಸಿ, ಮನೆಕಟ್ಟು ಸಿನಿಮಾದಲ್ಲಿ ಮೊದಲು ಬಾಲನಟಿಯಾಗಿ ಕನ್ನಡ ಸಿನಿ ಜಗತ್ತಿಗೆ ಪ್ರವೇಶಿಸಿದ್ರು. ನಂತರ 1972ರಲ್ಲಿ ಯಾರ ಸಾಕ್ಷಿ ಸಿನಿಮಾದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟಿಯಾಗಿ ಸಿನಿ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು.

ಈ ಸಿನಿಮಾದಲ್ಲಿ ಮಂಜುಳಾ ಅವರ ಅಮೋಘ ಅಭಿನಯ ಎಲ್ಲರ ಮನಸ್ಸಲ್ಲಿ ನಿಂತುಹೋಗಿತ್ತು. ಇದಾದ ಬಳಿಕ ಮೂರುವರೆ ವಜ್ರಗಳು ಸಿನಿಮಾದಲ್ಲಿ ಡಾ. ರಾಜಕುಮಾರ್ ರವರ ಜೊತೆ ನಟಿಸುವ ಅವಕಾಶ ಲಭಿಸಿತು. ನಂತರ ವರನಟನ ಜೊತೆಗೆ ಸತತವಾಗಿ ಎರಡು ಕನಸು, ಸಂಪತ್ತಿಗೆ ಸವಾಲ್, ಭಕ್ತ ಕುಂಬಾರ ಚಿತ್ರಗಳಲ್ಲಿ ಅಭಿನಯಿಸಿ ಚಿತ್ರಪ್ರೇಮಿಗಳ ಹೃದಯಕ್ಕೆ ನೆಲೆಸಿದರು. ಬಳಿಕ ಸಾಹಸಸಿಂಹ ವಿಷ್ಣುವರ್ಧನ್, ಶಂಕರ್​​ನಾಗ್, ಪ್ರಣಯ ರಾಜ ಶ್ರೀನಾಥ್ ಅವರ ಜೊತೆ ಅಭಿನಯಿಸಿ ತಮ್ಮ ಅಭಿನಯ ಪ್ರೌಢಿಮೆಯನ್ನು ಪ್ರದರ್ಶಿಸಿದ್ದಾರೆ. ಹೀಗೆ ಸಿನಿಮಾಗಳಲ್ಲಿ ಸಾಕಷ್ಟು ಹೆಸರು ಮಾಡಿ ಉತ್ತುಂಗದಲ್ಲಿದ್ದ ಮಂಜುಳಾ ಅವರು ವೈವಾಹಿಕ ಬದುಕನ್ನು ಆರಂಭಿಸುತ್ತಾರೆ..

ಸಾಮಾನ್ಯವಾಗಿ ಎಲ್ಲರಂತೆ ನೂರೊಂದು ಕನಸು ಹೊತ್ತು ಸಾಕಷ್ಟು ಭಾವನೆಗಳನ್ನು ತುಂಬಿಕೊಂಡು ಮದುವೆಗೆ ಸಿದ್ಧರಾಗುತ್ತಾರೆ. ಪ್ರಖ್ಯಾತ ನಿರ್ದೆಶಕ ಅಮೃತಂ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡ್ತಾರೆ. ಆದರೆ ಬದುಕಿನಲ್ಲಿ ಇವರು ಹೊತ್ತ ಆ ನೂರಾರು ಕನಸುಗಳು ನೆರವೇರಲೇಯಿಲ್ಲ, ತಾನಾಯ್ತು ತನ್ನ ಗಂಡ, ಮಕ್ಕಳಾಯ್ತು ಅಂತ ಸಂಸಾರ ಸುಖವನ್ನು ಅನುಭವಿಸ್ಬೇಕು ಅಂತ ಅಂದುಕೊಂಡಿದ್ದ ನಟಿಯ ಬದುಕಲ್ಲಿ ಆ ದಿನ ಆ ದು’ರಂತ ನಡೆದೇ ಹೋಯ್ತು, ಯಾರು ಊಹಿಸಿಕೊಳ್ಳಲು ಸಾಧ್ಯವಾಗದ ಘ’ಟನೆ ಅವರ ಬದುಕಿನಲ್ಲಿ ನಡೆದೆ ಹೋಯ್ತು.
ಹೌದು ಆ ದಿನ ಮಂಜುಳಾ ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋ’ಟ’ವಾಗಿ ಮಂಜುಳಾ ಅವರು ಇಹಲೋಕ ತ್ಯ’ಜಿ’ಸುತ್ತಾರೆ. ಕನ್ನಡ ಸಿನಿಲೋಕಕ್ಕೆ ಅತೀವವಾದ ನ’ಷ್ಟ ಅವತ್ತು ಸಂಭವಿಸ್ತು.. ಮಂಜುಳಾ ಅವರ ಬಗ್ಗೆ ನೀವೇನಂತೀರಿ.