Advertisements

20 ವರ್ಷದ ಯುವತಿಯಂತೆ ಕಾಣುವ ನಟಿ ರಮ್ಯಾ ಅವರ ನಿಜವಾದ ವಯಸ್ಸೆಷ್ಟು ಗೊತ್ತಾ? ನೀವು ನಂಬೋದಿಲ್ಲ ನೋಡಿ!

Cinema

ದಶಕಗಳ ಕಾಲ ನಮ್ಮ ಕನ್ನಡ ಚಿತ್ರರಂಗವನ್ನು ಅನಭಿಷಕ್ತ ನಾಯಕಿಯಾಗಿ ಆಳಿ ಮೋಹಕತಾರೆಯಾಗಿ ಕನ್ನಡಿಗರ ಮನಸ್ಸು ಗೆದ್ದ ಚೆಲುವೆ ರಮ್ಯಾ ರವರಾಗಿದ್ದು ರಮ್ಯಾ ಅವರು 2003ರಲ್ಲಿ ತೆರೆಕಂಡ ಅಭಿ ಸಿನಿಮಾದಲ್ಲಿ ಪುನೀತ್ ಎದುರು ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು.‌ ಹೌದು ಆ ನಂತರ ಅವರು ರಂಗ ಎಸ್ಎಸ್ಎಲ್ಸಿ ಎಕ್ಸ್ ಕ್ಯೂಸ್ ಮಿ ಕಂಠಿ ಗೌರಮ್ಮ ಅಮೃತದಾರೆ ಜೊತೆ ಜೊತೆಯಲಿ ಅರಸು ಕಿಚ್ಚ ಹುಚ್ಚ ಸಿದ್ಲಿಂಗು ಸೇರಿದಂತೆ ಹೀಗೆ ಹಲವಾರು ಕನ್ನಡ ಸಿನಿಮಾಗಳಲ್ಲಿ ನಟಿಸಿ ಕನ್ನಡಿಗರ ಮನ ಗೆದ್ದಿದ್ದಾರೆ. ಇನ್ನು ಸಿನಿಮಾ‌ ರಂಗದಲ್ಲಿ ಅವಕಾಶಗಳ ಮೇಲೆ‌ ಅವಕಾಶಗಳು ಬರುತ್ತಿರುವ ವೇಳೆಯಲ್ಲಿ ಅವರು ರಾಜಕೀಯ ಪ್ರವೇಶ ಮಾಡಿದ್ದು ಮಂಡ್ಯ ಕ್ಷೇತ್ರದಲ್ಲಿ ರಮ್ಯಾಗೆ ರಾಜಕೀಯದಿಂದ ಬುಲಾವ್​ ಬಂದಿತ್ತು. ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಂಸದೆ ಆಗಿಯೂ ಗೆದ್ದು ಬೀಗಿದರು. ರಾಜಕೀಯದಲ್ಲಿ ಕಾಂಗ್ರೆಸ್​ ಪಕ್ಷದ ಜೊತೆ ಗುರುತಿಸಿಕೊಂಡ ಬಳಿಕ ಅವರು ಚಿತ್ರರಂಗದಿಂದ ಸಂಪೂರ್ಣ ದೂರ ಉಳಿದುಕೊಂಡಿದ್ದು ಅಲ್ಲಿಂದೀಚೆಗೆ ಅವರು ಯಾವುದೇ ಹೊಸ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ.

Advertisements
Advertisements

ಹೌದು ಆದರೆ ಸಿನಿಮಾ‌ ರಂಗದಲ್ಲಿ ಕಂಡ ಯಶಸ್ಸು ಹೆಸರು ಮನ್ನಣೆ ಅವರಿಗೆ ರಾಜಕೀಯ ಕ್ಷೇತ್ರದಲ್ಲಿ ಸಿಗಲಿಲ್ಲ. ಹೌದು ಸಿನಿಮಾ ರಂಗದಲ್ಲಿ ಯಾವುದೇ ವಿವಾದ ಮಾಡಿಕೊಳ್ಳದ ಅವರು ರಾಜಕೀಯ ಕ್ಷೇತ್ರದಲ್ಲಿ ವಿವಾದ ಮೈ ಮೇಲೆ ಎಳೆದು ಕೊಂಡಿದ್ದು ಅದರಲ್ಲಿ‌ ಸೋತರೂ ಕೂಡ. ಹಾಗಾಗಿ ಅವರು ಮತ್ತೆ ಸಿನಿಮಾ ಕ್ಷೇತ್ರಕ್ಕೆ ವಾಪಾಸ್ ಬರುತ್ತಾರೆ ಎಂದು ಅಭಿಮಾನಿಗಳು ಬಹಳ ನಂಬಿದ್ದರು.‌ ಆದರೆ ರಮ್ಯಾ ಅವರು ಈ ಕಡೆ ಸಿನಿಮಾ ಅದೇ ರೀತಿ ಆ ಕಡೆ ರಾಜಕೀಯಕ್ಕೂ ಕೂಡ ಗುಡ್ ಬೈ ಹೇಳಿ ಒಂದು ವರ್ಷಗಳ ಕಾಲ ಮರೆಯಾಗಿದ್ದು ಮೀಡಿಯಾಗಳಲ್ಲಿ, ಅಭಿಮಾನಿಗಳ ಮನಸ್ಸಲ್ಲಿ ಒಂದೇ ಪ್ರಶ್ನೆ ಮೂಡಲು ಶುರುವಾಗಿತ್ತು. ರಮ್ಯಾ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಎಂಬುದೇ ಪ್ರಶ್ನೆಯಾಗಿತ್ತು. ಹೌದು ಸಾಮಾಜಿಕ ಜಾಲತಾಣದಲ್ಲೂ ರಮ್ಯಾ ಕಾಣಿಸಿಕೊಂಡಿರಲಿಲ್ಲ. ಆದರೆ ಕೆಲ‌ವರ್ಷಗಳ ಬಳಿಕ 2016 ರಲ್ಲಿ ನಾಗರಹಾವು ಸಿನಿಮಾದಲ್ಲಿ ನಾಗ‌ ಕನ್ಜಿಕೆ ರೂಪದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಜೊತೆ ಅಭಿನಯಿಸಿದ್ದರು. ಆ ನಂತರ ಯಾವುದೇ ಸಿನಿಮಾದಲ್ಲಿ ಅವರು ನಟಿಸಿರಲಿಲ್ಲ.

ಹೌದು ಹಲವು ವರ್ಷಗಳ ಗ್ಯಾಪ್ ನಂತರ ಸೋಶಿಯಲ್ ಮೀಡಿಯಾದಲ್ಲಿ ರಮ್ಯಾ ಅವರು ಕಾಣಿಸಿಕೊಂಡಿದ್ದು ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದರು. ಇನ್ನು ರಮ್ಯಾ ಅನ್ನುವುದು ಅವರ ಮೂಲ‌ ಹೆಸರೇನಲ್ಲ. ಅವರ ಹೆಸರು ದಿವ್ಯಾ ಸ್ಪಂದನ.‌ ಹೌದು ಕನ್ನಡದ ಖ್ಯಾತ ಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜಕುಮಾರ ಅವರು ದಿವ್ಯ ಸ್ಪಂದನ ಅವರಿಗೆ ಅಭಿ ಚಿತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದು ಈ ಚಿತ್ರದಲ್ಲಿ ಅವರ ಹೆಸರನ್ನು ರಮ್ಯಾ ಎಂದು ಬದಲಾಯಿಸಿದ್ದರು.‌ ಆ ನಂತರದಿಂದ ಅವರ ಹೆಸರು ರಮ್ಯಾ ಅಂತಲೇ ಆಯ್ತು. ಇಂತಹ ಮೋಹಕ‌ ತಾರೆ ರಮ್ಯಾ ಅವರಿಗೆ ಇದೀಗ ವಯಸ್ಸು 39. ಹೌದು ಆದರೆ ಅವರಿಗೆ ಇಷ್ಟು ವಯಸ್ಸಾಗಿದೆ ಎಂದು ಯಾರಿಂದಲೂ ಹೇಳಲು ಸಾಧ್ಯ ಇಲ್ಲ.‌ ಈಗಲೂ ಹದಿಹರೆಯದವರಂತೆ ಕಾಣುವ ರಮ್ಯಾ ಮುಂದಿನ ದಿನಗಳಲ್ಲಿ ಸಿನಿಮಾಕ್ಕೆ ಕಮ್ ಬ್ಯಾಕ್ ಮಾಡಲಿ ಅನ್ನೋದೇ ಅಭಿಮಾನಿಗಳ ಆಶಯ. ಈ‌ ಮಾಹಿತಿ ಬಗ್ಗೆ ನಿಮ್ಮ ಅನಿಸಿಕೆ ಏನು ಅನ್ನುವುದನ್ನು ಕಾಮೆಂಟ್ ಮೂಲಕ ತಿಳಿಸಿ.