Advertisements

ನಟಿ ಸುಮಿತ್ರಾ ಅವರ ಇಬ್ಬರ ಮಕ್ಕಳು ಯಾರು ಗೊತ್ತಾ..? ಇಬ್ಬರೂ ಕೂಡ ತುಂಬಾ ಫೇಮಸ್…! ಮೊದಲ ಬಾರಿಗೆ ನೋಡಿ..

Cinema Entertainment

ನಮಸ್ತೆ ಸ್ನೇಹಿತರೆ, ಸಿನಿಮಾಗಳಲ್ಲಿ ಹಲವಾರು ಜನ ನಟರು ಬರುತ್ತಾರೆ ಹೋಗುತ್ತಾರೆ. ಆದರೆ ಕೆಲ ನಟರ ಮಾತ್ರ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದು ಹೋಗುತ್ತಾರೆ, ಅಂತಹ ನಟಿಯರಲ್ಲಿ ಸುಮಿತ್ರಾ ಕೂಡ ಒಬ್ಬರು. ಹೌದು ಸುಮಾರು 40 ವರ್ಷಗಳಿಗಿಂತಲೂ ಹೆಚ್ಚಿನ ಕಾಲದಿಂದ ದಕ್ಷಿಣ ಭಾರತ ಸಿನಿಮಾಗಳಲ್ಲಿ ನಟಿಸುತ್ತಿರುವ ಈ ನಟಿ ಅನೇಕ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ದಕ್ಷಿಣ ಭಾರತದ ಸಿನಿಮಾಗಳಿಗೆ ಪೋಷಕ ಪಾತ್ರ ಹಾಗೂ ತಾಯಿ ಪಾತ್ರ ಬೇಕು ಎಂದರೆ ನಿರ್ದೇಶಕರಿಗೆ ನೆನಪು ಬರುವುದು ಸುಮಿತ್ರಾ ಅವರು ಮಾತ್ರ.

Advertisements
Advertisements

ನಟಿ ಸುಮಿತ್ರಾ ಅವರು 1973 ರಲ್ಲಿ ಮಲಯಾಳಂ ಭಾಷೆಯ ಚಿತ್ರದ ಮೂಲಕ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದರು, ನಂತರ ಕನ್ನಡ, ತೆಲುಗು, ತಮಿಳು ಹೀಗೆ ದಕ್ಷಿಣ ಭಾರತದ ಸಿನಿಮಾ ರಂಗಗಳಲ್ಲಿ ಕೂಡ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಕ್ಷಿಣ ಭಾರತದ ಖ್ಯಾತ ನಟರಾದ ಶಿವಾಜಿ ಗಣೇಶನ್, ಸಾಹಸ ಸಿಂಹ ವಿಷ್ಣುವರ್ಧನ್, ಸೂಪರ್ ಸ್ಟಾರ್ ರಜನಿಕಾಂತ್, ನಟಸಾರ್ವಭೌಮ ಕಮಲ್ ಹಾಸನ್ ಸೇರಿದಂತೆ ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿ ಸುಮಿತ್ರಾ ಅವರು ನಾಯಕಿಯಾಗಿ ನಟಿಸಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.

ನಂತರ ಸುಮಿತ್ರಾ ಅವರು ಹಿರಿಯ ನಿರ್ದೇಶಕ ಡಿ.ರಾಜೇಂದ್ರ ಬಾಬು ಅವರನ್ನು ವಿವಾಹವಾದರು. ಈ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೊದಲ ಮಗಳ ಹೆಸರು ಉಮಾ ಮಹೇಶ್ವರಿ, ಎರಡನೇ ಮಗಳ ಹೆಸರು ನಕ್ಷತ್ರ. ಇನ್ನು ವಿಶೇಷ ಅಂದರೆ ಇಬ್ಬರು ಮಕ್ಕಳು ಕೂಡ ಚಿತ್ರರಂಗದಲ್ಲಿ ನಾಯಕಿ ನಟಿಯಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಿರಿಯ ಮಗಳು ಉಮಾ ಮಹೇಶ್ವರಿ ಅವರು ಕನ್ನಡದಲ್ಲಿ ವಿಜಯ ರಾಘವೇಂದ್ರ ಅಭಿನಯದ ಕಲ್ಲರಳಿ ಹೂವಾಗಿ, ರಿಯಲ್ ಸ್ಟಾರ್ ಉಪೇಂದ್ರ ಅವರ ಉಪ್ಪಿದಾದ ಎಂಬಿಬಿಎಸ್ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ.