Advertisements

ಸರಳವಾಗಿ ಎಂಗೇಜ್ಮೆಂಟ್ ಮಾಡಿಕೊಂಡ ನಟಿ ಅದಿತಿ ಪ್ರಭುದೇವ್! ಹುಡುಗ ಯಾರು ಗೊತ್ತಾ?

Cinema

ನಟಿ ಅದಿತಿ ಪ್ರಭುದೇವ ಅವರು ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರ ಮದುವೆ ಫಿಕ್ಸ್ ಆಯ್ತಾ ಎಂಬ ಪ್ರಶ್ನೆ ಸ್ಯಾಂಡಲ್ವುಡ್ ಅಂಗಳದಲ್ಲಿ ಎದ್ದಿದೆ. ಅದಿತಿ ಅವರು ಹುಡುಗನ ಜೊತೆ ಕೈ ಹಿಡಿದು ನಿಂತಿರುವ ಫೋಟೋ ಒಂದನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿ ಕೊಂಡಿದ್ದಾರೆ. ಅಲ್ಲದೆ ಅದಕ್ಕೆ ಕ್ಯಾಪ್ಷನ್ ಕೂಡ ನೀಡಿದ್ದು ಇದೀಗ ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಒಂದು ಕನಸಿನಂತೆ ಈ ಕನಸು ನನಸಾಯಿತು ಎಂದು ಅದಿತಿ ಪ್ರಭುದೇವ ತಮ್ಮ ಫೋಟೋ ದೊಂದಿಗೆ ಬರೆದು ಕೊಂಡಿದ್ದಾರೆ.
ಅದೇ ಈ ರೀತಿ ಫೋಟೋ ಕ್ಯಾಪ್ಷನ್ ಹಾಕುತ್ತಿದ್ದಂತೆಯೇ ಅಭಿಮಾನಿಗಳು.. ಲವ್ ಸಿಂಬಲ್ ಶುಭಾಶಯಗಳು, ಸೂಪರ್ ಜೋಡಿ ನಿಮ್ಮನ್ನು ಮದುವೆಯಾಗುವ ಹುಡುಗನ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.

[widget id=”custom_html-5″]

Advertisements
Advertisements

ಫೋಟೋದಲ್ಲಿ ಅದಿತಿ ಕೈಯಲ್ಲಿರುವ ಉಂಗುರ ಹೈಲೆಟ್ ಆಗಿದೆ. ಆದರೆ ಈ ವಿಚಾರದ ಬಗ್ಗೆ ಅದಿತಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನಕ್ಕೆ ಶರಣಾಗಿದ್ದಾರೆ. ಈ ಮೂಲಕ ಅದಿತಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ಎಂಬ ಗುಸುಗುಸು ಆರಂಭವಾಗಿದೆ. ಸದ್ಯ ಆದಿತಿ ಅವರು ಓಲ್ಡ್ ಮಂಕ್ ಚಿತ್ರದಲ್ಲಿ ನಟಿಸಿದ್ದು ಈ ಚಿತ್ರ 2022 ರ ಫೆಬ್ರವರಿಯಲ್ಲಿ ತೆರೆಕಾಣಲಿದೆ. ತನ್ನ ಸಿನಿಮಾ ಟೈಟಲ್ ಹಾಗೂ ಕಂಟೆಂಟ್ ಮೂಲಕ ಸಿನಿಪ್ರಿಯರ ಗಮನಸೆಳೆದಿದೆ ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟ್ರೈಲರ್ ಹಾಡು ಎರಡಕ್ಕೂ ಸೋಶಿಯಲ್ ಮೀಡಿಯಾಗಳಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು ಚಿತ್ರಕ್ಕೆ ಬೇಡಿಕೆ ಹೆಚ್ಚಾಗಿದೆ. ಇಷ್ಟೊಂದು ಬಿಸಿಯಾಗಿರುವಾಗಲೇ ಮದುವೆ ನಿರ್ಧಾರಕ್ಕೆ ಕೈ ಹಾಕಿದ್ದಾರೆ ಎಂದು ಅಭಿಮಾನಿಗಳು ವ್ಯಕ್ತಪಡಿಸಿದ್ದಾರೆ

[widget id=”custom_html-5″]