Advertisements

ತಾಯಿ ಮಾಡಿದ ಆ ಒಂದು ಸಣ್ಣ ಕೆಲಸಕ್ಕೆ ಜೀವ ಕಳೆದುಕೊಂಡ ಎರಡು ವರ್ಷದ ಪುಟ್ಟ ಕಂದಮ್ಮ.. ನಿಜಕ್ಕೂ ಮನಕಲಕುತ್ತದೆ..

Kannada News

ಈಗಿನ ದಿನಗಳಲ್ಲಿ ಅನೇಕ ಜನರು ಮಕ್ಕಳಾಗದೇ ಆಸ್ಪತ್ರೆಗಳಲ್ಲಿ ಅಲೆದಾಡುವುದು.. ಇತ್ತ ದೇವಸ್ಥಾನಗಳಲ್ಲಿ ಹರಕೆ ಪೂಜೆ ಪುನಸ್ಕಾರಗಳನ್ನು ಮಾಡುವುದು ಎಲ್ಲವೂ ಸಹ ಸಾಮಾನ್ಯವಾಗಿಬಿಟ್ಟಿದೆ.. ಇಂತಹ ದಿನಗಳಲ್ಲಿ ಏನೂ ತೊಂದರೆ ಇಲ್ಲದೇ ಮಕ್ಕಳಾಗುವುದು ಎಂದರೆ ನಿಜಕ್ಕೂ ಅದು ಪುಣ್ಯವೇ ಸರಿ.. ಆದರೆ ಅದೇ ರೀತಿ ಪುಣ್ಯದಿಂದ ಹುಟ್ಟಿದ ಮಗುವೊಂದು ಎರಡು ವರ್ಷ ತಾಯ್ತನದ ಸುಖವನ್ನು ನೀಡಿ ಏನೂ ಅರಿಯದ ವಯಸ್ಸಿನಲ್ಲಿಯೇ ಇನ್ನೂ ಪ್ರಪಂಚವನ್ನು ಸರಿಯಾಗಿ ನೋಡದ ವಯಸ್ಸಿನಲ್ಲಿಯೇ ಮತ್ತೊಬ್ಬರ ಸಣ್ಣ ನಿರ್ಲಕ್ಷ್ಯದಿಂದ ಜೀವ ಕಳೆದುಕೊಳ್ಳುವುದು ಎಂದರೆ ನಿಜಕ್ಕೂ ಎಂತಹವರಿಗೂ ಸಂಕಟವನ್ನುಂಟು ಮಾಡುತ್ತದೆ.. ಹೌದು ಬದುಕಿ ಬಾಳಬೇಕಾದ ಮಗು ತಮ್ಮ ಕಣ್ಣಮುಂದೆಯೇ ಕಳೆದುಕೊಳ್ಳುವ ದುಃಖ ಯಾವ ತಂದೆ ತಾಯಿಗೂ ಬಾರದಿರಲಿ ಎನಿಸುತ್ತದೆ..

Advertisements
Advertisements

ಹೌದು ಮಕ್ಕಳು ಬೆಳೆದು ದೊಡ್ಡವರಾಗುವವರೆಗೂ ಎಷ್ಟು ಕಾಳಜಿ ಮಾಡಿದರೂ ಸಹ ಅದು ಕಡಿಮೆಯೇ ಎನಿಸುತ್ತದೆ.. ಹೌದು ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿಕೊಳ್ಳಬೇಕು ಎನ್ನುವ ಮಾತು ಅಕ್ಷರಶಃ ಸತ್ಯ.. ಪೋಷಕರ ಸಣ್ಣ ಸಣ್ಣ ನಿರ್ಲಕ್ಷ್ಯತನದಿಂದ ಪುಟ್ಟ ಪುಟ್ಟ ಕಂದಮ್ಮಗಳನ್ನು ಕಳೆದುಕೊಳ್ಳುತ್ತಿರುವ ಅನೇಕ ಘಟನೆಗಳು ಆಗಾಗ ಸುದ್ದಿಯಾಗುತ್ತಲೇ ಇದೆ.. ಆದರೂ ಸಹ ಇಂತಹ ಘಟನೆಗಳು ಮರುಕಳಿಸುತ್ತಲೇ ಇರುತ್ತದೆ.. ಹೌದು ಮೈಸೂರಿನಲ್ಲಿ ಇಂತಹದೊಂದು ಮನಕಲಕುವ ಘಟನೆ ನಡೆದಿದ್ದು ಈ ಎರಡು ವರ್ಷದ ಪುಟ್ಟ ಕಂದಮ್ಮ ಜೀವ ಕಳೆದುಕೊಂಡಿದೆ.. ಈ ಮಗುವಿನ ಅಗಲಿಕೆಗೆ ಕಾರಣ ಕೇಳಿದರೆ ನಿಜಕ್ಕೂ ಸಂಕಟವಾಗುತ್ತದೆ..

ಹೌದು ಮಕ್ಕಳಿಗಾಗಿ ಸಾಕಷ್ಟು ದೇವರುಗಳಲ್ಲಿ ಬೇಡಿಕೊಂಡು ಹರಕೆ ಕಟ್ಟಿಕೊಂಡು ಮಕ್ಕಳಿಗೆ ಜನ್ಮ ನೀಡುತ್ತೇವೆ.. ಮಕ್ಕಳನ್ನು ಜೋಪಾನವಾಗಿಯೂ ಪ್ರೀತಿಯಿಂದಲೂ ನೋಡಿಕೊಳ್ಳುತ್ತೇವೆ.. ಮಕ್ಕಳಿಗೆ ನಮ್ಮ ಸರ್ವಸ್ವಗಳನ್ನೂ ಸಹ ತ್ಯಾಗ ಮಾಡುತ್ತೇವೆ.. ಆದರೆ ಯಾವುದೋ ಸಮಯದಲ್ಲಿ ಹೇಗೋ ನಮ್ಮ ಅರಿವಿಗೆ ಬಾರದೆ ಆಗುವ ಸಣ್ಣ ನಿರ್ಲಕ್ಷ್ಯತನದಿಂದ ಮಕ್ಕಳನ್ನೇ ಕಳೆದುಕೊಳ್ಳುವಂತಹ ಸ್ಥಿತಿಗೆ ಬಂದುಬಿಡುತ್ತೇವೆ.. ಇಲ್ಲಿಯೂ ಸಹ ಅದೇ ರೀತಿಗ ಘಟನೆ ನಡೆದಿದೆ.. ಮಗುವಿನ ಸ್ಥಿತಿ ಕಂಡು ಆ ತಾಯಿಯ ಆಕ್ರಂದನ ನಿಜಕ್ಕೂ ಸಂಕಟ ತರುವಂತಿತ್ತು.. ಹೌದು ಮೈಸೂರಿನ ದಾಸನಕೊಪ್ಪಲು ಗ್ರಾಮದಲ್ಲಿ ಈ ಘಟನೆ ನಡೆದಿದೆ.. ಗ್ರಾಮದ ನಿವಾಸಿಗಳಾದ ರಾಮು ಹಾಗೂ ಜಯಲಕ್ಷ್ಮಿ ಎಂಬ ದಂಪತಿಗೆ ಎರಡು ವರ್ಷದ ಹಿಂದೆ ಹೆಣ್ಣು ಮಗುವೊಂದು ಜನಿಸಿತ್ತು..

ಆ ಮಗುವಿಗೆ ಆದ್ಯಾ ಎಂದು ಹೆಸರನ್ನಿಡಲಾಗಿತ್ತು.. ರಾಮು ಹಾಗೂ ಜಯಲಕ್ಷ್ಮಿ ಮಗುವಿನ ಮೇಲೆ ಜೀವವನ್ನೇ ಇರಿಸಿದ್ದರು.. ಅದೊಂದು ಸುಖೀ ಕುಟುಂಬವೂ ಆಗಿತ್ತು.. ಆದರೆ ದುರ್ಧೈವವೋ ಅಥವಾ ಮತ್ತಿನ್ನೇನೋ ಆ ಪುಟ್ಟ ಕಂದಮ್ಮ ಆದ್ಯ ಇದೀಗ ಇಹಲೋಕ ತ್ಯಜಿಸಿದ್ದಾಳೆ.. ಹೌದು ಎರಡು ಮೂರು ವರ್ಷದ ಹಿಂದೆ ಮಂಡ್ಯದಲ್ಲಿ ಮಗುವಿಗೆ ಊಟ ಮಾಡಿಸುವ ಸಮಯದಲ್ಲಿ ಮಗುವಿಗೆ ನೀರು ತರಲೆಂದು ತಾಯಿ ಮನೆಯೊಳಗೆ ಹೋದಾಗ ಮಗು ಮೊದಲನೇ ಮಹಡಿಯಿಂದ ಬಿದ್ದು ಜೀವ ಕಳೆದುಕೊಂಡ ಘಟನೆ ನಡೆದಿತ್ತು.. ನಿಜಕ್ಕೂ ಆ ಸಮಯದಲ್ಲಿ ಆ ಪುಟ್ಟ ಕಂದಮ್ಮನಿಗೆ ಈ ರೀತಿಯಾಗಿದ್ದು ನೋಡಿ ಸಾವಿರಾರು ಜನರು ಕಣ್ಣೀರಿಟ್ಟು ಮಗುವನ್ನು ನೋಡಲು ಬಂದಿದ್ದರು.. ಇದೀಗ ಅದೇ ರೀತಿ ದಾಸನಕೊಪ್ಪಲು ಗ್ರಾಮದಲ್ಲಿ ಆದ್ಯ ಸಹ ಜೀವ ಕಳೆದುಕೊಂಡಿದೆ..

ಹೌದು ಸ್ನಾನ ಮಾಡಿಸುವ ವಿಚಾರವೊಂದು ಮಗು ಜೀವ ಕಳೆದುಕೊಳ್ಳುವಂತಾಯಿತು ಎಂದರೆ ನಿಜಕ್ಕೂ ಬೇಸರವನ್ನುಂಟು ಮಾಡುತ್ತದೆ.. ಹೌದು ಆದ್ಯಾಳಿಗೆ ತಾಯಿ ಜಯಲಕ್ಷ್ಮಿ ಸ್ನಾನ ಮಾಡಿಸಲೆಂದು ಬಾತ್ ರೂಮಿಗೆ ಕರೆದುಕೊಂಡು ಹೋಗಿದ್ದಾರೆ.. ಬಾತ್ ರೂಮಿನಲ್ಲಿ ಬಿಸಿ ನೀರನ್ನು ತುಂಬಲಾಗಿತ್ತು.. ಆದರೆ ನೀರು ಬಹಳ ಬಿಸಿ ಇದ್ದ ಕಾರಣ ಮಗುವನ್ನು ಅಲ್ಲಿಯೇ ಕೂರಿಸಿ ತಣ್ಣೀರು ತರಲೆಂದು ಜಯಲಕ್ಷ್ಮಿ ಮನೆಯೊಳಕ್ಕೆ ಬಂದರು.. ಅಷ್ಟೇ.. ಆ ಮಗು ಬಾತ್ ರೂಮಿನಿಂದ ಹೊರ ಬಾರಲೇ ಇಲ್ಲ.. ಹೌದು ಸ್ನಾನಕ್ಕೆಂದು ಇಟ್ಟಿದ್ದ ಅದೇ ಬಿಸಿನೀರಿನಲ್ಲಿ‌ ಮಗು ಬಿದ್ದು ಚೀರಿಕೊಂಡಿದೆ.. ತಕ್ಷಣ ಓಡಿ ಬಂದು ಜಯಲಕ್ಷ್ಮಿ ಮಗುವನ್ನು ಎತ್ತಿಕೊಂಡರೂ ಸಹ ಅದಾಗಲೇ ಮಗುವಿಗೆ ಸಾಕಷ್ಟು ಗಾಯಗಳು ಆಗಿ ಹೋಗಿದ್ದವು..

ಮಗುವನ್ನು ತಕ್ಷಣ ಮೈಸೂರಿನ ಕೆ ಆರ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಲಾಯಿತು.. ಆದರೆ ಅದಾಗಲೇ ಕಾಲ ಮೀರಿ ಹೋಗಿತ್ತು.. ಮಗು ಉಳಿಯಲೇ ಇಲ್ಲ.. ಬೆಳಿಗ್ಗೆಯಷ್ಟೇ ಚೆಂದನೆ ಆಡಿಕೊಂಡಿದ್ದ ಮಗು ಅರ್ಧ ಗಂಟೆಯಲ್ಲಿ ಇಲ್ಲವಾಯಿತೆಂದರೆ ನಿಜಕ್ಕೂ ಆ ಕುಟುಂಬದ ನೋವು ಎಷ್ಟಿರಬಹುದು ದೇವರೇ ಬಲ್ಲ.. ಎರಡು ವರ್ಷ ಮಗುವನ್ನು ಜೋಪಾನವಾಗಿ ಸಾಕಿ ಸಲುಹಿ ಇದೀಗ ಮಗುವನ್ನು ಈ ರೀತಿ ಕಳೆದುಕೊಂಡೆನೆಂದು ಎಲ್ಲವೂ ನನ್ನಿಂದಲೇ ಆಯಿತು ಎಂದು ಆ ತಾಯಿ ಗೋಳಾಡುತ್ತಿದ್ದಳು.. ದಯವಿಟ್ಟು ಯಾರೇ ಆಗಲಿ ಮಕ್ಕಳ ವಿಚಾರದಲ್ಲಿ ಸಣ್ಣ ನಿರ್ಲಕ್ಷ್ಯವನ್ನೂ ಸಹ ಮಾಡಬೇಡಿ.. ಒಮ್ಮೊಮ್ಮೆ ಸಣ್ಣ ನಿರ್ಲಕ್ಷ್ಯವೇ ಜೀವನದುದ್ದಕ್ಕೂ ದೊಡ್ಡ ನೋವನ್ನು ನೀಡಿಬಿಡುತ್ತದೆ..