ನಮಸ್ಕಾರ ವೀಕ್ಷಕರೇ ಕಿರುತೆರೆ ಲೋಕದಲ್ಲಿ ಮದುವೆಯದ್ದೆ ಸುದ್ದಿಯಾಗಿದೆ ಇತ್ತೀಚಿಗಿನ ಕೆಲವು ತಿಂಗಳುಗಳಿಂದ ಕಿರುತೆರೆಯಲ್ಲಿ ಮದುವೆಗಳು ಸಾಲು, ಸಾಲಾಗಿ ನಡಿತಿದೆ ಇದೀಗ ಅಗ್ನಿಸಾಕ್ಷಿ ಖ್ಯಾತಿಯ ನಟಿ ಐಶ್ವರ್ಯಾ ಅವರು ಬಹುಕಾಲದ ಗೆಳೆಯ ವಿನಯ್ ಅವರ ಜೊತೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ವಿನಯ್ ಅವರು ಕೂಡ ಕಿರುತೆರೆ ಲೋಕದಲ್ಲಿ ಸಕ್ರಿಯರಾಗಿದ್ದಾರೆ ಉತ್ತರ ಕರ್ನಾಟಕದವರಾದ ವಿನಯ್ ಅವರು ಧಾರವಾಡದಾಗ ಒಂದು ಲವ್ ಸ್ಟೋರಿ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ ಅದಕ್ಕೂ ಮೊದಲು ಜೀವನದಿ, ಮಹಾದೇವಿ, ಲಕ್ಷ್ಮಿ ಸ್ಟೋರ್ಸ್, ಮುಂತಾದ ಧಾರಾವಾಹಿಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ನಟನ ಬದುಕಿಗೆ ಎಂಟ್ರಿ ಕೊಡುವ ಮೊದಲು ವಿನಯ್ ಅವರು ಬೆಂಗಳೂರಿನ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು
ಆದರೆ ಹುಬ್ಬಳ್ಳಿವರಾದ ವಿನಯ್ ಅವರಿಗೆ ನಟನೆಯಲ್ಲಿ ಬಹಳ ಆಸಕ್ತಿ ಇತ್ತು ಹೀಗಾಗಿ ಕಿರುತೆರೆಗೆ ಎಂಟ್ರಿಕೊಟ್ಟು ನಟನಾಗಿ ಗುರುತಿಸಿ ಕೊಂಡಿದ್ದಾರೆ

ಮಹಾಸತಿ ಧಾರಾವಾಹಿಯಲ್ಲಿ ಐಶ್ವರ್ಯ ಹಾಗೂ ವಿನಯ್ ಒಟ್ಟಾಗಿ ನಟಿಸಿದ್ದರು ನಟ ವಿನಯ್ ಹಾಗೂ ಐಶ್ವರ್ಯ ಅವರು ಬಹುಕಾಲದ ಸ್ನೇಹಿತರಾಗಿದ್ದರು ಹೌದು ಮಹಾಸತಿ ನಂತರ ಕೂಡ ವಿನಯ್ ಐಶ್ವರ್ಯ ಅವರು ಉತ್ತಮ ಸ್ನೇಹಿತರಾಗಿದ್ದರು ಅದಾದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಚಿಗುರೊಡೆದಿತ್ತು ಇನ್ನು ಕಳೆದ ಲಾಕ್ಡೌನ್ ಟೈಮ್ ನಲ್ಲಿ ನಾಗರಾಜ್ ಪಾಟೀಲ್ ಅವರ ನಿರ್ದೇಶನದಲ್ಲಿ ಒಂದು ಕಿರುಚಿತ್ರದಲ್ಲಿ ಐಶ್ವರ್ಯ ಹಾಗೂ ವಿನಯ್ ಅವರು ನಟಿಸಿದ್ದಾರೆ ಇನ್ನೂ ಈ ಕಿರು ಚಿತ್ರದಲ್ಲಿ ನಟ ವಿನಯ್ ಅವರು ಹೀರೋ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದರು ಅಗ್ನಿಸಾಕ್ಷಿ ಖ್ಯಾತಿಯ ನಟಿ ಐಶ್ವರ್ಯ ಸಾಲಿಮಠ ಅವರು ಪ್ರೇಮಿಗಳ ದಿನ ಅವರ ರಿಯಲ್ ಲೈಫ್ ನ ವ್ಯಾಲೆಂಟೈನ್ ಪರಿಚಯ ಮಾಡಿಕೊಟ್ಟಿದ್ದರು ನಾನು ಹಾಗೂ ನೀನು ನನ್ನ ಗೆಳೆಯನ ಜೊತೆ ಎಂಗೇಜ್ ಆಗಿರೋದಕ್ಕೆ ತುಂಬಾ ಖುಷಿಯಾಗುತ್ತಿದೆ..
ಅಂತ ನಟಿ ಐಶ್ವರ್ಯ ಸಾಲಿಮಠ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಈ ಪೋಸ್ಟ್ ಗೆ
ಕಿರುತೆರೆ ಲೋಕದ ಕಲಾವಿದರಾದ ರಶ್ಮಿ ಪ್ರಭಾಕರ್ , ಸುಕೃತಾ ನಾಗರಾಜ್, ದೀಪ ಜಗದೀಶ್ ಸೇರಿ ಇನ್ನೂ ಅನೇಕರು ಶುಭಾಶಯ ಕೋರಿದರು ನಟಿ ಐಶ್ವರ್ಯ ನಟ ವಿನಯ್ ಅವರನ್ನ ಮದುವೆಯಾಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಉತ್ತರ ಕರ್ನಾಟಕದ ಶೈಲಿಯಲ್ಲಿ ನಟಿ ಐಶ್ವರ್ಯ ಸಾಲಿಮಠ ಹಾಗೂ ನಟ ವಿನಯ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ ಸೋಶಿಯಲ್ ಮೀಡಿಯಾದಲ್ಲಿ ಮದುವೆ ಫೋಟೋಗಳು ವೈರಲ್ ಆಗಿದ್ದು ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ ನೀವು ಕೂಡ ಈ ಜೋಡಿಗೆ ಶುಭವಾಗಲಿ ಎಂದು ಹಾರೈಸಿ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..