Advertisements

ಇಂಜಿನಿಯರ್ ಆಗಿದ್ದ ಯುವಕ ಈಗ ಕೆಲಸ ಬಿಟ್ಟು ತಿಂಗಳಿಗೆ ಲಕ್ಷಲಕ್ಷ ದುಡಿಯುತ್ತಿದ್ದಾನೆ..! ಈ ಸಂಪಾದನೆಗೆ ಕಾರಣ ಏನು ಅಂತ ತಿಳಿದರೆ.. ನೀವು ಶುರು ಮಾಡುತ್ತೀರಾ..

Inspiration

ನಮಸ್ತೆ ಸ್ನೇಹಿತರೆ, ಇತ್ತೀಚಿನ ದಿನಗಳಲ್ಲಿ ನಾವು ಎಲ್ಲಾ ಕಡೆ ನೋಡಿರುತ್ತೇವೆ, ಬಹುತೇಕ ಜನರು ದೊಡ್ಡ ದೊಡ್ಡ ಉದ್ಯೋಗಳನ್ನು ಬಿಟ್ಟು, ತಮ್ಮ ಸ್ವಂತ ಉದ್ಯಮ ಶುರು ಮಾಡಲು ಇಷ್ಟಪಡುತ್ತಿದ್ದಾರೆ. ಯಾಕೆಂದರೆ ನಮ ಸ್ವಂತ ಉದ್ಯಮದಲ್ಲಿ ಯಾರೇ ಬಾಸ್ ಇರುವುದಿಲ್ಲ, ನಮಗೆ ನಾವೇ ಬಾಸಾಗಿ ದುಡ್ಡನ್ನು ಸಂಪಾದನೆ ಮಾಡಬಹುದು. ಅದರ ಜೊತೆಗೆ ನಮ್ಮ ಮೇಲೆ ಬೇರೆಯವರ ಒತ್ತಡ ಇರುವುದಿಲ್ಲ. ಇದೇ ರೀತಿ ಒಬ್ಬ ಯುವಕ ತನ್ನ ಇಂಜಿನಿಯರಿಂಗ್ ಕೆಲಸ ಬಿಟ್ಟು ಈಗ ಕೃಷಿ ಮಾಡಲ ಬಂದಿದ್ದಾನೆ. ತಾನು ತಿಂಗಳಿಗೆ ಲಕ್ಷ ಲಕ್ಷ ದುಡಿಯುತ್ತಿದ್ದಾನೆ.! ಅದು ಹೇಗೆ ಅಂತ ನೋಡೋಣ ಬನ್ನಿ.

Advertisements
Advertisements

ಈ ಯುವಕನ ಹೆಸರು ಅನುಜ್ ಶರ್ಮ. ಈತ ತನ್ನ ಇಂಜಿನೀರಿಂಗ್ ಕೆಲಸವನ್ನು ಬಿಟ್ಟು, ಕೃಷಿ ಕ್ಷೇತ್ರಕ್ಕೆ ಕಾಲಿಟ್ಟು ಮಶರೂಮ್ (ಅಣಬೆ) ಕೃಷಿ ಮಾಡಲು ನಿರ್ಧರಿಸಿದನು, ಕಾರಣ ಮಶರೂಮ್‌ನ ಬೆಲೆ ಮಾರುಕಟ್ಟೆಯಲ್ಲಿ ಬೇರೆ ಬೆಳೆಗಳಿಗಿಂತ ಹೆಚ್ಚಾಗಿದೆ. ಅನುಜ್ ಶರ್ಮ ಒಂದು ಇಂಟರ್‌ವ್ಯೂನಲ್ಲಿ ಮಾತನಾಡುತ್ತಾ, ನಾನು 9 ಹಟ್ ಗಳಲ್ಲಿ ಹಣಬೆಯ ಕೃಷಿ ಮಾಡುತ್ತಿದ್ದೇನೆ ಅಂತ ತಿಳಿಸಿದ್ದಾರೆ. ನಮಗೆ ತಿಳಿಯದ ವಿಷಯವೇನೆಂದರೆ ಹಣಬೆ ಕೃಷಿ ಮಾಡೋದು ಅಷ್ಟು ಸುಲಭದ ಮಾತೇನಲ್ಲ. ಯಾಕಂದ್ರೆ ನಾವು ಹಣಬೇ ಬೆಳೆಯಲು ಅದಕ್ಕೆ ನಿರ್ದಿಷ್ಟವಾದ ತಾಪಮಾನವನ್ನು ಸಿದ್ದ ಮಾಡಿರಬೇಕು. ಅದರ ಜೊತೆಗೆ ಹಲವಾರು ಸೇಫ್ಟಿಗಳನ್ನು ತೆಗೆದುಕೊಳ್ಳಬೇಕು.

ಈಗ ಅನುಜ್ ಮಶ್ರೂಮ್ ಕೃಷಿ ಮಾಡಲು ಹಿಮಾಚಲ ಪ್ರದೇಶದ ತನ್ನ ಗ್ರಾಮದಲ್ಲಿ 9 ಹಟ್ ಗಳನ್ನ ಹಾಕಿದ್ದಾರೆ.‌ ಅನುಜ್ ತಮ್ಮ ಕೈಯಾರೆ ಬೆಳೆದ ಮಶ್ರೂಮ್ ಗಳನ್ನ ಸಗಟು ದರದಲ್ಲಿ ಮಾರಾಟ ಮಾಡುತ್ತಾರೆ. ಈಗ ಅನುಜ್‌ನ ಗ್ರಾಹಕರು ಕೂಡ ನಿಯಮಿತವಾಗಿ ಆತನಿಂದಲೇ ಮಶ್ರೂಮ್ ಖರೀದಿಸುತ್ತಾರೆ. ದಿನದಿಂದ ದಿನಕ್ಕೆ ಅನುಜ್ ಅವರ ಈ ವ್ಯಾಪಾರ ಬೆಳೆಯುತ್ತಿದೆ. ಅನುಜ್ ಶರ್ಮ ಕಲ್ಪನೆಯಿಂದ ಅವರ ಹಳ್ಳಿಯ ಅನೇಕ ನಿರುದ್ಯೋಗಿ ಯುವಕರು ಉದ್ಯೋಗವನ್ನೂ ಪಡೆದಿದ್ದಾರೆ. ಅನುಜ್ ಈಗ ತನ್ನ ಕೆಲಸದ ಜೊತೆಗೆ ಅಣಬೆ ಕೃಷಿಯನ್ನು ಸಹ ಮಾಡುತ್ತಿದ್ದಾರೆ. ತನ್ನ ಹಣಬೆ ಕೃಷಿಯಿಂದ ಅನುಜ್ ಶರ್ಮ ತಿಂಗಳಿಗೆ ಬರೋಬ್ಬರಿ ಒಂದರಿಂದ ಎರಡು ಲಕ್ಷ ದುಡಿಯುತ್ತಿದ್ದಾರೆ.