Advertisements

ಇಷ್ಟು ಮುದ್ದಾಗಿರುವ ಹೆಣ್ಣು ಮಗಳು.. ಮದುವೆಯಾದ ಒಂದೇ ವರ್ಷಕ್ಕೆ ಏನಾಗಿ ಹೋದಳು ಗೊತ್ತಾ.. ಈಕೆಯ ಗಂಡ ಮಾಡಿರುವ ನೀಚ ಕೆಲಸ ನೋಡಿ.. ಮನಕಲಕುತ್ತದೆ..

Kannada News

ಸಮಾಜ ಎಷ್ಟೇ ಮುಂದುವರೆದರು.. ಜನರು ಎಷ್ಟೇ ತಿಳುವಳಿಕೆ ಪಡೆದರೂ ಶತಮಾನಗಳು ಬದಲಾಗುತ್ತಾ ಹೋದರು ಕೆಳ ನೀಚ ಮನಸ್ಸಿನ ವ್ಯಕ್ತಿಗಳು ಮಾತ್ರ ಬದಲಾಗುವುದಿಲ್ಲ ಎಂದೆನಿಸುತ್ತದೆ.. ಹೌದು ಅಂತಹ ಕೆಲ ನೀಚ ಮನಸ್ಸುಗಳ ಕೆಲಸಕ್ಕೆ ಏನೂ ಅರಿಯದ ಮುಗ್ಧ ಹೆಣ್ಣು ಮಕ್ಕಳು ಬಲಿಯಾಗಬೇಕಿದೆ.. ಹೌದು ಫೋಟೋದಲ್ಲಿರುವ ಹೆಣ್ಣು ಮಗಳನ್ನು ನೋಡಿದರೆ ಎಂತಹವರಿಗೂ ಒಂದು ರೀತಿ ಮನಸ್ಸಿನಲ್ಲಿ ಒಳ್ಳೆಯ ಭಾವನೆ ಮೂಡುತ್ತದೆ.. ಮುಗ್ಧ ಮುಖದ ಆ ಹುಡುಗಿ ನೋಡಲು ಸಹ ಅಷ್ಟೇ ಸುಂದರವಾಗಿದ್ದು ಕೈ ತೊಳೆದು ಮುಟ್ಟುವಂತೆ ಇದ್ದಳು..

ಆದರೆ ಇಂತಹ ಹೆಂಡತಿಯನ್ನು ಪಡೆದರೂ ಸಹ ಆಕೆಯ ಗಂಡ ಮಾಡಿರುವ ಕೆಲಸ ಮಾತ್ರ ಅಸಹ್ಯವನ್ನುಂಟು ಮಾಡುತ್ತಿದೆ… ಹೌದು ಇಂತಹ ಜನರನ್ನು ನಿಜಕ್ಕೂ ಎಂದೂ ಸಹ ಆ ಭಗವಂತ ಕ್ಷಮಿಸಲಾರ.. ಮುಂದೆ ಮಾಡಿದ ಪಾಪಕ್ಕೆ ಸರಿಯಾದ ಶಿಕ್ಷೆ ಅನುಭವಿಸಿಯೇ ತೀರಬೇಕು.. ಹೌದು ಈಕೆಯ ಹೆಸರು ಐಶ್ವರ್ಯಾ.. ವಯಸ್ಸಿನ್ನು ಕೇವಲ ಹತ್ತೊಂಬತ್ತು.. ಇನ್ನೂ ಸಹ ಪ್ರಪಂಚವನ್ನು ಸರಿಯಾಗಿ ನೋಡದ ವಯಸ್ಸಿನಲ್ಲಿಯೇ ಈಕೆಗೆ ಬಂದ ಸ್ಥಿತಿ ನಿಜಕ್ಕೂ ಯಾವ ಹೆಣ್ಣಿಗೂ ಬಾರದಿರಲಿ.. ಈಕೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬೆಳಗೊಂಡ್ಲು ಗ್ರಾಮದ ಉದಯ್ ಹಾಗೂ ಅನಿತಾ ದಂಪತಿಗಳ ಮಗಳು.. ಮಗಳಿಗೆ ಹದಿನೆಂಟು ತುಂಬುತ್ತಿದ್ದಂತೆ ಮಗಳ ಮದುವೆ ಮಾಡುವ ನಿರ್ಧಾರ ಮಾಡಿದ ತಂದೆ ತಾಯಿ ಒಂದೇ ವರ್ಷಕ್ಕೆ ಈ ರೀತಿ ನೋವು ಅನುಭವಿಸಬೇಕಾಗುತ್ತದೆ ಎಂದು ಕನಸಿನಲ್ಲಿಯೂ ಊಹಿಸಿರಲಿಲ್ಲ..

ಹೌದು ಐಶ್ವರ್ಯಾಗೆ ಹದಿನೆಂಟು ವರ್ಷ ತುಂಬುತ್ತಿದ್ದಂತೆ ಮದುವೆ ಮಾಡುವ ನಿರ್ಧಾರ ಮಾಡಿದರು.. ನೋಡಲು ಬಹಳ ಸುಂದರವಾಗಿದ್ದ ಐಶ್ವರ್ಯಾಳನ್ನು ಕುಣಿಗಲ್ ತಾಲೂಕಿನ ಕಾವೇರಿಪುರದ ನಿವಾಸಿ ನಾಗರಾಜು ಎಂಬಾತ ನೋಡಿದ ತಕ್ಷಣ ಐಶ್ವರ್ಯಾಳನ್ನು ಮದುವೆಯಾಗಲು ಒಪ್ಪಿದ್ದ.. ನಾಗರಾಜು ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದನು.. ಕಳೆದ ವರ್ಷ ಅದ್ಧೂರಿಯಾಗಿ ಮದುವೆಯೂ ನೆರವೇರಿತು.. ನಂತರ ಐಶ್ವರ್ಯಾ ಹಾಗೂ ನಾಗರಾಜು ತುಮಕೂರು ನಗರದ ಸರಸ್ವತಿ ಪುರಂ ನಲ್ಲಿ ವಾಸ ಮಾಡುತ್ತಿದ್ದರು.. ಮೊದಮೊದಲು ಎಲ್ಲವೂ ಚೆನ್ನಾಗಿತ್ತು.. ಆದರೆ ಮದುವೆಯಾದ ಒಂದೇ ವರ್ಷಕ್ಕೆ ಐಶ್ವರ್ಯಾ ಗಂಡನ ಮನೆಯಲ್ಲಿಯೇ ತನ್ನ ಜೀವವನ್ನೇ ಕಳೆದುಕೊಂಡಿದ್ದಾಳೆ..

ಹೌದು ಕೇವಲ ಹತ್ತೊಂಬತ್ತು ವರ್ಷ ವಯಸ್ಸಿಗೆ ತನ್ನ ಬದುಕಿನ ಪಯಣವನ್ನು ಅಂತ್ಯವಾಗಿಸಿಕೊಳ್ಳುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದು ಹೊಸದಾಗಿ ಮದುವೆಯಾಗಿದ್ದ ಆ ಜೀವ ಅದೆಷ್ಟು ನೋವು ಅನುಭವಿಸಿತ್ತೋ ಆಕೆಗೆ ತಿಳಿದಿತ್ತಷ್ಟೇ.. ಹೌದು ನೂರಾರು ಕನಸು ಕಂಡು ಮದುವೆಯಾದ ಹೆಣ್ಣು ಮಗಳು ಹತ್ತಾರು ವರ್ಷ ಗಂಡನ ಜೊತೆ ಸುಖವಾಗಿ ಬಾಳಬೇಕೆಂದು ಕನಸು ಕಟ್ಟಿಕೊಂಡು ತೆರಳಿದಳು.. ಆದರೆ ಮರಳಿ ಬಾರದ ಲೋಕಕ್ಕೇ ಹೊರಟುಹೋದಳು.. ಹೌದು ಗಂಡನ ಮನೆಯಲ್ಲಿಯೇ ಐಶ್ವರ್ಯಾ ಜೀವ ಕಳೆದುಕೊಂಡ ಸ್ಥಿತಿಯಲ್ಲಿ ದೊರಕಿದ್ದು ಆಕೆಯ ಗಂಡ ನಾಗರಾಜು ತಲೆ ಮರೆಸಿಕೊಂಡಿದ್ದಾನೆ..

ಇತ್ತ ಮಗಳ ಈ ಸ್ಥಿತಿಗೆ ಅಳಿಯ ನಾಗರಾಜುನೆ ಕಾರಣ ಎಂದು ಐಶ್ವರ್ಯಾಳ ಅಪ್ಪ ಅಮ್ಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ತವರು ಮನೆಯಿಂದ ಹಣ ತರುವಂತೆ ಆಗಾಗ ನಾಗರಾಜ್ ಹೆಂಡತಿಗೆ ಒತ್ತಾಯ ಮಾಡುತ್ತಿದ್ದ ಎಂದೂ ಸಹ ತಿಳಿಸಿದ್ದಾರೆ.. ಅಷ್ಟೇ ಅಲ್ಲದೇ ಮಾನಸಿಕವಾಗಿಯೂ ಮಗಳಿಗೆ ಸಾಕಷ್ಟು ನೋವು ನೀಡಿದ್ದಾನೆಂದು ತಿಳಿಸಿದ್ದಾರೆ..

ಅಲ್ರಯ್ಯಾ ನಿಮ್ ಬಾಳಿಗ್ ಇಷ್ಟು.. ನಿಮ್ಮಂತವರು ಅದ್ಯಾಕ್ರಯ್ಯಾ ಮದುವೆ ಆಗ್ತೀರಾ.. ಮದುವೆಯಾಗಿ ಹೆಣ್ಣು ಮಕ್ಕಳ ಬಾಳನ್ನ ಅದ್ಯಾಕ್ ಹೀಗ್ ಹಾಳು ಮಾಡ್ತೀರಾ.. ಒಳ್ಳೆ ಹುಡುಗಿ ಸಿಕ್ಕರೆ ಸಾಕು ಜೀವನ ನೆಮ್ಮದಿಯಾಗಿ ಸಾಗಿಸಿಕೊಂಡು ಹೋಗಬಹುದು ಎಂದು ಒಳ್ಳೆ ಹುಡುಗಿ ಸಿಗಲಿ ಅಂತ ದೇವರ ಬಳಿ ಪ್ರಾರ್ಥನೆ ಮಾಡೋ ಅದೆಷ್ಟೋ ಗಂಡಸರ ನಡುವೆ ಒಳ್ಳೆ ಹುಡುಗಿ ಸಿಕ್ಕರೂ ಸಹ ಈ ರೀತಿ ನೋವು ಕೊಟ್ಟು ಕೊನೆಗೆ ಜೀವವನ್ನೇ ಕಳೆದುಕೊಳ್ಳುವ ಸ್ಥಿತಿಗೆ ತರುವ ನಿಮ್ಮಂತ ಗಂಡಸರು ಕಳಂಕವೇ ಸರಿ.. ಈ ನಾಗರಾಜುಗೆ ಸರಿಯಾದ ಶಿಕ್ಷೆಯಾಗಿ ಆ ಹೆಣ್ಣು ಮಗಳಿಗೆ ಶಾಂತಿ ಸಿಗುವಂತಾಗಲಿ.. ಮುಂದೆ ಇಂತಹ ನೀಚ ಮನಸ್ಸಿನ ವ್ಯಕ್ತಿಗಳಿಗೆ ಪಾಠವಾಗಲಿ..