Advertisements

ಪೊದೆಯೊಳಗಿದ್ದ ಪ್ರೇಮಿಗಳ ಮೇಲೆ ಹುಲಿ ಅಟ್ಯಾಕ್..ಓಡಿಹೋದ ಯುವತಿ ಆದರೆ ಅವನ ಗತಿ ಏನಾಗಿದೆ ನೋಡಿ‌‌.. ಬೇಕಿತ್ತಾ ಇದು..

Kannada News

ಪ್ರೀತಿ ಪ್ರೇಮ ಎಂದುಕೊಂಡು ಕಾಲೇಜಿನ ಅದರಲ್ಲೂ ಇತ್ತೀಚಿನ ದಿನಗಳಲ್ಲಿ ಶಾಲೆಯ ಹೈಕಳು ಸಹ ಪಾರ್ಕ್ ಗಳಲ್ಲಿ, ಸಿನಿಮಾ ಥಿಯೇಟರ್ ಗಳಲ್ಲಿ ಹಾಗೂ ನಿರ್ಜನ ಪ್ರದೇಶದಲ್ಲಿ ಕಾಣಿಸಿಕೊಳ್ಳೋದು ಸಾಮಾನ್ಯವಾಗಿ ಹೋಗಿದೆ.. ಅದೇ ರೀತಿ ಪೊದೆಯೊಂದರಲ್ಲಿ ಕೂತು ಏಕಾಂತದ ಸಮಯ ಕಳೆಯುತ್ತಿದ್ದ ಪ್ರೇಮಿಗಳ ನಡುವೆ ಹುಲಿ ಎಂಟ್ರಿಯಾಗಿದ್ದು ಈಗ ಇವರಿಬ್ಬರ ಗತಿ ನೋಡಿದರೆ ನಿಜಕ್ಕೂ ಪ್ರೇಮಿಗಳು ಪೊದೆಯೊಳಗೆ ಹೋಗಲು ಬೆಚ್ಚಿಬೀಳುವಂತಿದೆ..

ಹೌದು ವಯಸ್ಸಿನ ಆಕರ್ಷಣೆಗೆ ಪ್ರೀತಿಸುವರು.. ಆ ಪ್ರೀತಿಗೆ ನಿಜವಾದ ಅರ್ಥ ಕೊಟ್ಟು ಮದುವೆಯಾಗಿ ಸುಂದರ ಸಂಸಾರ ನಡೆಸಿದರೇನೋ ಸರಿ.. ಆದರೆ ಸಿಕ್ಕ ಸಿಕ್ಕ ಕಡೆ ತಮ್ಮ ವಯಸ್ಸಿನ ಆಸೆಗಳನ್ನು ತೀರಿಸಿಕೊಳ್ಳಲು ಪ್ರೀತಿ ಎಂಬ ಹೆಸರು ಹೇಳಿ ಸಿಕ್ಕ ಸಿಕ್ಕ ಕಡೆ ಹೋಗಿ ಈ ರೀತಿ ಜೀವನವನ್ನೇ ಅಂತ್ಯ ಮಾಡಿಕೊಂಡರೆ ಅವರುಗಳನ್ನು ಹೆತ್ತವರು ಏನು ಮಾಡಬೇಕು.. ಮನಸ್ಸನ್ನು ಇಂತಹ ಆಸೆಗಳಿಗೆ ಹರಿಬಿಡುವ ಮುನ್ನ ಹೆತ್ತವರ ಬಗ್ಗೆ ಸರಿ ತಪ್ಪುಗಳ ಬಗ್ಗೆ ಆಲೋಚಿಸಿದರೆ ಬಹುಶಃ ಇಂತಹ ಅಪಾಯಗಲೇ ಆಗುವುದಿಲ್ಲವೇನೋ.. ಆದರೆ ಇಲ್ಲಿ ಸದಾ ಜೊತೆಯಿರುವೆ ಎಂದು ಪೊದೆಯೊಳಗೆ ಹೋದ ಜೋಡಿ ಹುಲಿಯ ಎಂಟ್ರಿಯಾದ ತಕ್ಷಣ ಹುಡುಗಿ ಓಡಿ ಹೋದರೆ ಹುಡುಗ ಸ್ಥಳದಲ್ಲಿಯೇ ಜೀವ ಕಳೆದುಕೊಂಡಿದ್ದಾನೆ..

ಹೌದು ಇಬ್ಬರು ಪ್ರೇಮಿಗಳು ಏಕಾಂತದಲ್ಲಿ ಪೊದೆಯೊಳಗೆ ಸಮಯ ಕಳೆಯುತ್ತಿರುವಾಗ ಇದ್ದಕಿದ್ದ ಹಾಗೆ ಹುಲಿಯ ಎಂಟ್ರಿಯಾಗಿ ಹುಡುಗ ಸ್ಥಳದಲ್ಲಿಯೇ ಜೀವ ಕಳೆದುಕೊಂಡಿದ್ದಾನೆ.. ಆದರೆ ಹುಡುಗಿ ಬಚಾವ್ ಆಗಿದ್ದು ನಿಟ್ಟುಸಿರು ಬಿಟ್ಟಿದ್ದಾಳೆ.. ಹೌದು ಇಂತಹದೊಂದು ಘಟನೆ ಮಹಾರಾಷ್ಟ್ರದ ನಾಗುರದ ವಾತ್ಸಾದಲ್ಲಿ ನಡೆದಿದೆ.. ಈತನ ಹೆಸರು ಅಜಿತ್ ಸೋಮೇಶ್ವರ ನಾಕಾಡೆ ವಯಸ್ಸು ಕೇವಲ ಇಪ್ಪತ್ತೊಂದು.. ಈತ ಕೊರೆಗಾಂವ್ ನ ನಿವಾಸಿ.. ಈತ ಮಂಗಳವಾರ ಸಂಜೆ ತನ್ನ ಪ್ರಿಯತಮೆಯನ್ನು ಕಾಡಿಗೆ ಕರೆದುಕೊಂಡು ಹೋಗಿದ್ದಾನೆ..

ಈ ಜಾಗದಲ್ಲಿ ಹುಲಿ ಇರುವ ವಿಚಾರ ಗ್ರಾಮಸ್ಥರಿಗೆ ಮೊದಲೇ ತಿಳಿದಿದ್ದು ಈ ಬಗ್ಗೆ ಅಲ್ಲಲ್ಲಿ ಬೋರ್ಡ್ ಗಳನ್ನೂ ಸಹ ಹಾಕಿದ್ದಾರೆ.. ಆದರೆ ಅಜಿತ್ ಮಾತ್ರ ಅದ್ಯಾವುದಕ್ಕೂ ಅಂಜದೇ ತನ್ನ ಪ್ರಿಯತಮೆಯನ್ನು ಅದೇ ಕಾಡಿಗೆ ಕರೆದುಕೊಂಡು ಹೋಗಿ ಪೊದೆಯೊಳಗೆ ಏಕಾಂತದಿಂದ ಸಮಯ ಕಳೆಯುತ್ತಿದ್ದ.. ಅದೇ ಸಮಯಕ್ಕೆ ಹುಲಿ‌ ಹಿಂದಿನಿಂದ ಬಂದಿದ್ದು ಅಜಿತ್ ನ ಬೆನ್ನಿನ ಭಾಗವನ್ನು ಸಂಪೂರ್ಣವಾಗಿ ತಿಂದಿದೆ.. ಅತ್ತ ಆ ಹುಡುಗಿ ಹೇಗೋ ಅಲ್ಲಿಂದ ಓಡಿ ಹೋಗಿ ಜೀವ ಉಳಿಸಿಕೊಂಡಿದ್ದು ಗಂಭೀರ ಗಾಯಗಳಾಗಿವೆ..

ಇನ್ನು ಈ ವಿಚಾರ ಗ್ರಾಮಸ್ಥರಿಗೆ ತಿಳಿಯುತ್ತಿದ್ದಂತೆ ತಕ್ಷಣ ಅರಣ್ಯಾಧಿಕಾರಿಗಳಿಗೆ ಮಾಹಿತಿ‌ ನೀಡಲಾಗಿದೆ.. ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಅಜಿತ್ ನ ಪಾರ್ಥೀವವನ್ನು ಪತ್ತೆ ಹಚ್ಚಿದ್ದಾರೆ.. ಆದರೆ ಅದಾಗಲೇ ಆತನ ಬೆನ್ನಿನ ಭಾಗವನ್ನು ಸಂಪೂರ್ಣವಾಗಿ ಹುಲಿ ತಿಂದು ಹೋಗಿದ್ದು ಪಾರ್ಥೀವವನ್ನು ಆಸ್ಪತ್ರೆಗೆ ರವಾನಿಸಿದ್ದಾರೆ..

ಗಂಭೀರ ಗಾಯಗಳಾಗಿರುವ ಆ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.. ಒಟ್ಟಿನಲ್ಲಿ ಜೀವನ ಪೂರ್ತಿ ಜೊತೆಯಿರುವೆ ಎಂದು ಪ್ರೀತಿಸಿದ ಜೋಡಿ ಹುಲಿಯಿಂದಾಗಿ ದೂರಾಗುವಂತಾಗಿದೆ.. ಯಾರೇ ಆಗಲಿ ಯಾವುದೇ ಕಾರಣಕ್ಕಾಗಲಿ ಇಂತಹ ಅಪಾಯದ ಜಾಗಗಳಿಗೆ ಹೋಗುವ ಮುನ್ನ ಎಚ್ಚರ ವಹಿಸಿ.. ಅವರು ಏಕಾಂತ ಬಯಸಿ ಹೋಗಿ ಇಂದು ಜೀವವನ್ನೇ ಕಳೆದುಕೊಂಡ.. ಆದರೆ ಸೆಲ್ಫಿ ಅದು ಇದು ಅಂತಲೂ ಸಾಕಷ್ಟು ಮಂದಿ ಈ ರೀತಿ ಬೇಡದ ಕೆಲಸಗಳಿಗೆ ಕೈಹಾಕಿ ಅಪಾಯ ತಂದುಕೊಳ್ಳೋದುಂಟು ಅಂತವರು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು..