Advertisements

ಬ್ಯಾಂಕ್ ನಲ್ಲಿ ಇದ್ದವರೆಲ್ಲ ಬೆಚ್ಚಿ ಬೀಳುವಂತೆ ಅಜ್ಜಿ ಮಾಡಿದ್ದೇನು ನೋಡಿ!

Kannada News

ನಮಸ್ಕಾರ ವೀಕ್ಷಕರೆ ಸಾವಿತ್ರಮ್ಮ ಎಂಬ ಒಬ್ಬ ವಯಸ್ಸಾದ ಅಜ್ಜಿ ತನ್ನ ಅಕೌಂಟ್ ನಲ್ಲಿರುವ ದುಡ್ಡು ತೆಗೆಯಲು ಒಂದು ಬಾರಿ ಬ್ಯಾಂಕಿಗೆ ಬಂದಿದ್ದರು ಬ್ಯಾಂಕಿಗೆ ಬಂದು ಸಾವಿತ್ರಮ್ಮ ತಾನು ತಂದಿದ್ದ ಚೆಕ್ ಬುಕ್ ಅಲ್ಲಿ 500 ರೂಪಾಯಿ ಎಂದು ಬರೆದು ಬ್ಯಾಂಕ್ ಕ್ಯಾಶಿಯರ್ ಕೈಗೆ ಕೊಟ್ಟರು ಕ್ಯಾಶಿಯರ್ ಗೆ ಆ ಚೆಕ್ ಕೊಟ್ಟು 500 ರೂಪಾಯಿ ಕೊಡಿ ಎಂದು ಸಾವಿತ್ರಮ್ಮ ಹೇಳಿದರು
ಚೆಕ್ ಕೈಗೆ ತೆಗೆದುಕೊಂಡು ನೋಡಿದ ಬ್ಯಾಂಕ್ ಕ್ಯಾಶಿಯರ್ ಆ ಕ್ಯಾಶಿಯರ್ ಕೂಡ ಒಬ್ಬಳು ಮಹಿಳೆ ಅಜ್ಜಿ ಕೇವಲ 500 ರೂಪಾಯಿ ಹಣಕ್ಕಾಗಿ ಈ ರೀತಿ ಚೆಕ್ ಬರೆದಿದ್ದೀರಾ ಅಲ್ವಾ 500ರೂಪಾಯಿ ಬೇಕಾಗಿದ್ದರೆ ಹೊರಗಡೆ ಇರುವ ಎಟಿಎಂನಲ್ಲೆ
ತಗೋಬಹುದು ಅದಕ್ಕೆ ಯಾಕೆ 500 ರೂಪಾಯಿ ಚೆಕ್ ಬರೆದು ನಮ್ಮ ಕೈಗೆ ಕೊಟ್ಟು ನಮ್ಮ ಸಮಯ ವ್ಯರ್ಥ ಮಾಡುತ್ತಿದ್ದೀರಾ ನೋಡಿ ನಿಮ್ಮ ಹಿಂದೆ ಎಷ್ಟು ಜನ ಕಾಯುತ್ತಿದ್ದಾರೆ ಎಂದು ಕೋಪದಿಂದ ಆ ಕ್ಯಾಶಿಯರ್ ಮಹಿಳೆ ಎಟಿಎಂನಲ್ಲಿ ಹೋಗಿ ತೆಗೆದುಕೊಳ್ಳಿ ಎಂದು ಚೆಕ್ ನ ವಾಪಸ್ ಸಾವಿತ್ರಮ್ಮಾಗೆ ಕೊಟ್ಟುಬಿಟ್ಟಳು ಆಗ ಸಾವಿತ್ರಮ್ಮ ಯಾಕೆ ಈ ರೀತಿ ಹೇಳುತ್ತಿದ್ದೀರಾ ಎಂದು ಮರುಪ್ರಶ್ನೆ ಮಾಡಿದರು ನಮ್ಮ ಬ್ಯಾಂಕ್ ರೂಲ್ಸ್ ಪ್ರಕಾರ ಐದು ಸಾವಿರ ರೂಪಾಯಿಗಿಂತ ಕಡಿಮೆ ಹಣ ಡ್ರಾ ಮಾಡಬೇಕಾದರೆ ನೀವು ಎಟಿಎಂ ಕಾರ್ಡ್ ಬಳಸೆ ತೆಗೆದುಕೊಳ್ಳಬೇಕು

Advertisements
Advertisements

ಇಲ್ಲಿ ನಿಮಗೆ ಹಣ ಕೊಡಕ್ಕೆ ಆಗಲ್ಲ ಬೇರೆ ಏನಾದರೂ ವಿಷಯ ಇದ್ದರೆ ಇಲ್ಲಿ ನಿಂತುಕೊಳ್ಳಿ ಇಲ್ಲ ಅಂದ್ರೆ ಬ್ಯಾಂಕ್ ನಿಂದ ಜಾಗ ಖಾಲಿ ಮಾಡಿ ನನಗೆ ತುಂಬಾ ಕೆಲಸ ಇದೆ ಎಂದು ಆ ಕ್ಯಾಶಿಯರ್ ಮಹಿಳೆ ಸಾವಿತ್ರಮ್ಮ ಗೆ ಗದರಿದಳು, ಸಾವಿತ್ರಮ್ಮ ಗೆ ಕ್ಯಾಶಿಯರ್ ಹೇಳಿದ ಮಾತು ಕೇಳಿ ತುಂಬಾ ಕೋಪ ಬಂತು ಆದರೂ ತನ್ನ ಕೋಪವನ್ನು ಹೊರಗಡೆ ತೋರಿಸದೆ ಮತ್ತೊಂದು ಚೆಕ್ ಬರೆದು ಪುನಹ ಕ್ಯಾಶಿಯರ್ ಗೆ ಕೊಟ್ಟು ದಯವಿಟ್ಟು ನನ್ನ ಅಕೌಂಟ್ ನಲ್ಲಿ ಇರುವ ಸಂಪೂರ್ಣ ಹಣವನ್ನೆಲ್ಲ ನನಗೆ ವಾಪಸ್ ಕೊಟ್ಟುಬಿಡಿ ಎಂದು ಸಾವಿತ್ರಮ್ಮ ಹೇಳಿದರು ಈಗ ಆ ಕ್ಯಾಶಿಯರ್ ಮಹಿಳೆ ಅಜ್ಜಿ ಹತ್ತಿರ ಚೆಕ್ ತೆಗೆದುಕೊಂಡು ನೋಡಿದರೆ ಅದರಲ್ಲಿ ಅಜ್ಜಿ ಅಕೌಂಟ್ ಓಪನ್ ಮಾಡಿ ಬ್ಯಾಲೆನ್ಸ್ ಹಣದ ಮೊತ್ತ ನೋಡಿ ಕ್ಯಾಶಿಯರ್ ಶಾಕ್ ಆಗಿಬಿಟ್ಟಳು ಏಕೆಂದರೆ ಸಾವಿತ್ರಮ್ಮ ಅಜ್ಜಿ ಅಕೌಂಟ್ ನಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಹಣ ಇತ್ತು ಇಷ್ಟೊಂದು ಹಣ ಇರುವುದು ನೋಡಿ ಗಾಬರಿಯಿಂದ ಅಜ್ಜಿ ನಿಮ್ಮ ಅಕೌಂಟ್ ನಲ್ಲಿ 5 ಕೋಟಿ ಹಣ ಇದೆ ದಯವಿಟ್ಟು ನನ್ನನ್ನು ಕ್ಷಮಿಸಿ ನನಗೆ ಗೊತ್ತಾಗದೆ ನಿಮ್ಮ ಬಳಿ ಕೋಪದಿಂದ ಮಾತನಾಡಿಬಿಟ್ಟೆ ಇವಾಗ ನೀವು ಕೇಳುತ್ತಿರುವ 5ಕೋಟಿ ಹಣ ನಮ್ಮ ಬ್ಯಾಂಕ್ ಅಲ್ಲಿ ಇಲ್ಲ ಅದಕ್ಕಾಗಿ ನಾಳೆ ಸಂಜೆ ನೀವು ಬಂದರೆ ನೀವು ಕೇಳುತ್ತಿರುವ ಹಣವನ್ನು ತೆಗೆದುಕೊಂಡು ಹೋಗಬಹುದು ಎಂದು ಕ್ಯಾಶಿಯರ್ ಹೇಳಿದಳು

ಆಗ ಸಾವಿತ್ರಮ್ಮ ಹೋಗ್ಲಿಬಿಡಿ ಈಗ ನನ್ನ ಅಕೌಂಟ್ ನಿಂದ ನಾನು ಎಷ್ಟು ಡ್ರಾ ಮಾಡಬಹುದು ಅದನ್ನಾದರೂ ಹೇಳಿ ಎಂದು ಹೇಳಿದರು ಕ್ಯಾಶಿಯರ್ ಮಹಿಳೆ ಅಜ್ಜಿ ಈಗ ನೀವು 5 ಲಕ್ಷದವರೆಗೆ ಹಣ ಡ್ರಾ ಮಾಡಬಹುದು ಎಂದು ಹೇಳಿದರು.. ಕೂಡಲೇ ಸಾವಿತ್ರಮ್ಮ ಮತ್ತೊಂದು ಐದು ಲಕ್ಷ ರೂಪಾಯಿಗೆ ಚೆಕ್ ಬರೆದು ಕ್ಯಾಶಿಯರ್ ಗೆ ಕೊಟ್ಟರು ಆಗ ಕ್ಯಾಶಿಯರ್ ಅಜ್ಜಿಯ ಬಳಿ 5 ಲಕ್ಷದ ಚೆಕ್ ಪಡೆದು ತುಂಬಾ ಸಮಾಧಾನದಿಂದ ನಮ್ರತೆಯಿಂದ ಐದು ಲಕ್ಷ ಹಣವನ್ನು ಸಾವಿತ್ರಮ್ಮಗೆ ಕೊಟ್ಟಳು.. ಈಗ ಸಾವಿತ್ರಮ್ಮ 5 ಲಕ್ಷ ರೂಪಾಯಿ ಯಲ್ಲಿ ಕೇವಲ ಒಂದೇ ಒಂದು 500 ರೂಪಾಯಿ ನೋಟ್ ಎತ್ತಿಕೊಂಡು ತನ್ನ ಪರ್ಸ್ ನಲ್ಲಿ ಇಟ್ಟುಕೊಂಡು ಮಿಕ್ಕ 4 ಲಕ್ಷದ 99 ಸಾವಿರದ ಐನೂರು ರೂಪಾಯಿಯನ್ನು ಮತ್ತೆ ತನ್ನ ಅಕೌಂಟ್ ಗೆ ಡೆಪಾಸಿಟ್ ಮಾಡಿ ಎಂದು ಸಾವಿತ್ರಮ್ಮ ಪುನಹ ಬ್ಯಾಂಕ್ ಕ್ಯಾಶಿಯರ್ ಗೆ ಆ ಹಣವನ್ನು ವಾಪಸ್ ಕೊಟ್ಟಳು ಈಗ ಕ್ಯಾಷಿಯರ್ ಗೆ ತನ್ನ ತಪ್ಪಿನ ಅರಿವಾಯಿತು ಕ್ಯಾಶಿಯರ್ ಗೆ ಬುದ್ಧಿ ಬಂತು ಏನಪ್ಪಾ ಇದು ಈ ವಯಸ್ಸಾದ ಅಜ್ಜಿ ನನ್ನ ಹತ್ತಿರನೇ ಇಷ್ಟೊಂದು ಟೆಕ್ನಿಕ್ ಮಾಡುತ್ತಿದ್ದಾಳೆ ಎಂದು ಕ್ಯಾಶಿಯರ್ ಮನಸಿನಲ್ಲೇ ಅಂದುಕೊಂಡಳು ಕೆಲವು ರೂಲ್ಸ್ ಗಳು ಹೇಗೆ ಕಠಿಣವಾಗಿದ್ದರೂ ಮನುಷ್ಯರಾದ ನಾವು ಕೆಲವು ಬಾರಿ ರೂಲ್ಸ್ ಗೆ ಮೀರಿ ಮಾನವೀಯತೆಯ ವರ್ತನೆಯನ್ನು ತೋರಿಸಬೇಕು ಒಬ್ಬರ ಬಟ್ಟೆ ಮತ್ತು ಮಾತನಾಡುವ ಶೈಲಿ ನೋಡಿ ಅವರ ಯೋಗ್ಯತೆ ನಾ ನಾವುಗಳು ಯಾವತ್ತೂ ಅಳೆಯಬಾರದು ಎ

ಲ್ಲರನ್ನೂ ಸಮಾನವಾಗಿ ನೋಡಬೇಕು ಮುಖಪುಟದಿಂದ ಪುಸ್ತಕದ ಬೆಲೆಯನ್ನು ಯಾವತ್ತೂ ಅಳತೆ ಮಾಡಬಾರದು ಇದಕ್ಕೆ ಒಂದು ಉದಾಹರಣೆಯಾಗಿ ಈ ಅಜ್ಜಿಯ ಕಥೆಯನ್ನು ನಿಮಗೆ ಹೇಳಿದ್ದು ಈ ಕಥೆಯ ನೀತಿ ಏನು ಅಂತ ನಿಮಗೆ ಆಗಲೇ ಅರ್ಥವಾಗಿರುತ್ತೆ ಸಾವಿತ್ರಮ್ಮ ಕೇಳಿದ 500 ರೂಪಾಯಿನಾ ಆ ಬ್ಯಾಂಕ್ ಕ್ಯಾಶಿಯರ್ ಮೊದಲೇ ಕೊಟ್ಟು ಬಿಟ್ಟಿದ್ದರೆ ಇಷ್ಟೊಂದು ಸಮಯ ವ್ಯರ್ಥ ವಾಗುತ್ತಿರಲಿಲ್ಲ ಈಗ ನೋಡಿ ನೂರಾರು ಜನ ಹಣ ಪಡೆಯಲು ಕಾಯುತ್ತಾ ನಿಂತಿದ್ದಾರೆ ಸಾವಿತ್ರಮ್ಮ ಅಜ್ಜಿಯ ಅಕೌಂಟ್ ಬ್ಯಾಲೆನ್ಸ್ ನೋಡಿ ಕ್ಯಾಶಿಯರ್ ಗೆ ಒಂದು ಕ್ಷಣ ಗಾಬರಿಯಾಯಿತು 5 ಕೋಟಿ ಇದೇ ಅಲ್ವಾ ಅಜ್ಜಿ ಅಕೌಂಟ್ ನಲ್ಲಿ ಅಂತ ಏನೋ ಒಂದು ಸಾವಿರನೊ ಅಥವಾ ಎರಡು ಸಾವಿರನೊ ಅಜ್ಜಿ ಅಕೌಂಟ್ ನಲ್ಲಿ ಇರಬಹುದು ಎಂದು ಕ್ಯಾಶಿಯರ್ ಮಹಿಳೆ ಅಜ್ಜಿಗೆ ಮೊದಲು ಮರ್ಯಾದೆ ಕೊಡದೆ ಚೀಪಾಗಿ ಮಾತನಾಡಿದ್ದಳು ಆದರೆ ಅಜ್ಜಿ ಅಕೌಂಟ್ ನೋಡಿದ ತಕ್ಷಣ ಶಾಕ್ ಆಗಿ ಹೋದಳು ಬ್ಯಾಂಕ್ ಕ್ಯಾಶಿಯರ್, ಅದಕ್ಕಾಗಿ ಹೊರಗಡೆ ಕಾಣಿಸುವ ವೇಷಭೂಷಣ ನೋಡಿ ಯಾರನ್ನು ಸಾಧಾರಣ ಅಂತ ಅಂದುಕೊಳ್ಳಬಾರದು ಅದೆ ಈ ಕಥೆಯ ನೀತಿ ಸ್ನೇಹಿತರೆ, ಸಾವಿತ್ರಮ್ಮ ಬ್ಯಾಂಕ್ ಕ್ಯಾಶಿಯರ್ ಗೆ ಕಲಿಸಿದ ರೀತಿ ನಿಮಗೆ ಇಷ್ಟವಾಗಿದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..