Advertisements

ರಾತ್ರೋರಾತ್ರಿ ಈ ಅಜ್ಜಿ ಲಕ್ಷಾಧಿಪತಿ ಆಗಿಯೇ ಬಿಟ್ಟರು! ನಿಜ ವಿಷಯ ತಿಳಿದರೆ ನೀವು ಕೂಡ ಲಕ್ಷ ಗಳಿಸಬಹುದು !! ಹೇಗೆ ನೋಡಿ !!

Kannada News

ಸ್ನೇಹಿತರೆ, ನಮ್ಮ ಜೀವನದಲ್ಲಿ ಅದೃಷ್ಟ ಎಂಬುದು ಯಾವಾಗ, ಯಾವ ಕಡೆಯಿಂದ ಬರುತ್ತದೆ ಎಂದು ಯಾರೂ ಊಹೆ ಮಾಡಲು ಸಾಧ್ಯವಿಲ್ಲ. ಅದೃಷ್ಟ ಲಕ್ಷ್ಮಿಯು ಮನೆಯ ಬಾಗಿಲಿಗೆ ಬಂದರೆ ಅಷ್ಟೈಶ್ವರ್ಯವನ್ನೂ ತರುತ್ತಾಳೆ ಎಂಬ ಮಾತಿದೆ. ಕೆಲವರು ಜೀವನದಲ್ಲಿ ಮಾಡಿದ ಒಂದು ಸಣ್ಣ ಕೆಲಸದಿಂದಾಗಿ ಅದೃಷ್ಟವೆಂಬುದು ಒಲಿದು ರಾತ್ರೋರಾತ್ರಿಯಲ್ಲೇ ಕೋಟ್ಯಾಧಿಪತಿಗಳಾಗುತ್ತಾರೆ. ಇನ್ನು ಕೆಲವರು ಜೀವನದಲ್ಲಿ ಎಷ್ಟೇ ಕಷ್ಟ ಪಟ್ಟರು ತಮ್ಮ ಜೀವನವನ್ನು ಬದಲಿಸುವಂತಹ ಅದೃಷ್ಟ ಬರುವುದೇ ಇಲ್ಲ.

ಆದರೆ ಈ ಹಣ್ಣುಹಣ್ಣು ಮುದುಕಿ ಮಾಡಿದ ಈ ಒಂದು ಕೆಲಸದಿಂದಾಗಿ ಅದೃಷ್ಟ ಎಂಬುದು ಒಲಿದು ಒಂದೇ ರಾತ್ರಿಯಲ್ಲಿ ಲಕ್ಷಧೀಶೆಯಾಗಿದ್ದಾಳೆ. ಅಷ್ಟಕ್ಕೂ ಆ ಅಜ್ಜಿ ಮಾಡಿದ ಕೆಲಸವಾದರೂ ಏನು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ಕಲ್ಕತ್ತದ ದಕ್ಷಿಣ ಪರಂಗಣದ ಸುಂದರ್ಬನ್ಸ್ ಪ್ರದೇಶದಲ್ಲಿರುವ ಸಾಗರದೀಪದಲ್ಲಿ ವಾಸ ಮಾಡುವಂತಹ ಅಜ್ಜಿಯೊಬ್ಬಳಿಗೆ ವಯಸ್ಸಾದ ಮೇಲೆ ಅದೃಷ್ಟ ಎಂಬುದು ಖುಲಾಯಿಸಿದೆ. ಸುಮಾರು 70 ವರ್ಷಗಳ ಕಾಲ ಮೀನುಗಾರಿಕೆ ಮಾಡುತ್ತಾ ತನ್ನ ಜೀವನವನ್ನು ಸಾಗಿಸುತ್ತಿದ್ದ ಅಜ್ಜಿ ಪ್ರತಿದಿನ ಸಮುದ್ರ ತೀರಕ್ಕೆ ಹೋಗಿ ಮೀನುಗಳನ್ನು ಹಿಡಿದು ಅದನ್ನು ಮಾರಿ ಬಂದ ಹಣದಲ್ಲಿ ಹೊಟ್ಟೆಪಾಡನ್ನು ನೋಡಿಕೊಳ್ಳುತ್ತಿದ್ದಳು.

ಹೀಗೆ ಅಜ್ಜಿ ಹಿಡಿಯುತ್ತಿದ್ದ ಮೀನುಗಳನ್ನು ಬಾಲಾ ಮೀನು ಎಂದು ಕರೆಯುತ್ತಾರೆ ಈ ಮೀನನ್ನು ಹೆಚ್ಚಿನ ಜನ ಆಹಾರಕ್ಕಾಗಿ ಬಳಕೆ ಮಾಡುವುದಿಲ್ಲ. ಬದಲಿಗೆ ಆ ಮೀನಿನಲ್ಲಿ ಇರುವಂತಹ ಕೆಲವು ಅಂಶಗಳನ್ನು ಬಳಸಿಕೊಂಡು ಔಷಧಿಯನ್ನು ತಯಾರಿಸುತ್ತಾರೆ ಹಾಗೂ ಮೀನಿನ ಅಂಗಾಂಗಗಳನ್ನು ಏಷ್ಯಾದ ಇತರ ದೇಶಗಳಿಗೆ ರಫ್ತು ಮಾಡಲಾಗುತ್ತದೆ. ಇಷ್ಟೆಲ್ಲಾ ವಿಶೇಷತೆ ಇರುವಂತಹ ಮೀನಿನ ಒಂದು ಕೆಜಿಯ ಬೆಲೆ 6200 ರೂಪಾಯಿಗಳು.

ಹೀಗೆ ಸಮುದ್ರದಲ್ಲಿ ಅಜ್ಜಿಗೆ ಸಿಕ್ಕಿದ ಬಾಲ ಮೀನಿನ ಗಾತ್ರ 52 ಕೆಜಿ ಆ ದೊಡ್ಡ ಗಾತ್ರದ ಮೀನನ್ನು ಮಾರಾಟ ಮಾಡಿದ್ದರಿಂದ ಅಜ್ಜಿಗೆ ಬರೋಬ್ಬರಿ ಮೂರು ಲಕ್ಷ ಹಣ ಸಿಕ್ತು. ಒಂದೇ ಒಂದು ಮೀನು ನನ್ನ ಜೀವನವನ್ನೇ ಬದಲಿಸಿತು ಎಂದು ಅಜ್ಜಿ ಸಂತಸಪಟ್ಟಿದ್ದಾರೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.