Advertisements

ಚಿಕ್ಕ ಹುಡುಗಿಯಾಗಿದ್ದಾಗ ಉಚಿತವಾಗಿ ಸೀಬೆಕಾಯಿ ಕೊಡುತ್ತಿದ್ದ ಅಜ್ಜಿಗೆ ಈ ಯುವತಿ ಮಾಡಿದ್ದೇನು ಗೊತ್ತಾ? ನೋಡಿ..

Kannada News

ನಮಸ್ತೆ ಸ್ನೇಹಿತರೆ, ನಮ್ಮ ಬಾಲ್ಯದ ದಿನಗಳಲ್ಲಿ ನಾವು ತುಂಬಾ ಖುಷಿ ಪಟ್ಟಿರುತ್ತೇವೆ ಅಂತಹ ಕ್ಷಣಗಳು ಪದೇ ಪದೇ ನೆನಪಿಗೆ ಬರುತ್ತಿರುತ್ತವೆ..  ಹಾಗೆ ಬಾಲ್ಯದ ಆಟ, ಪಾಠ, ಸ್ನೇಹಿತರು, ಶಾಲೆಯ ದಿನಗಳು ಇವೆಲ್ಲವನ್ನು ನಾವು ಬುದಕಿರುವವರೆಗೂ ಮರೆಯಲು ಸಾಧ್ಯವಿಲ್ಲ.. ಅದೇ ರೀತಿ ಕೆಲವರು ಬೆಳೆದು ದೊಡ್ಡವರಾದಂತೆ ಬಾಲ್ಯದ ಕ್ಷಣಗಳು, ಶಾಲೆಯ ನೆನಪುಗಳನ್ನು  ಮರುನೆನಪು ಮಾಡಿಕೊಳ್ಳಲು ಊರಿನ ಕಡೆಗೆ ಹೋಗುತ್ತಾರೆ.. ಇದೇ ರೀತಿ ಬಾಲ್ಯ ಜೀವನದ ಅನುಭವವನ್ನು ಪಡೆಯಲು ಊರಿಗೆ ಹೋದ ಶಾಲಿನಿ ಎಂಬ ಯುವತಿಯ ಜೀವನದಲ್ಲಿ ನಡೆದ ಘಟನೆಯ ಬಗ್ಗೆ ತಿಳಿದುಕೊಳ್ಳೋಣ.. ಶಾಲಿನಿಯವರು ಹುಟ್ಟಿದ್ದು ತಮಿಳುನಾಡಿನ ಸೇಲಂನ ಪಕ್ಕದ ಒಂದು ಊರಿನಲ್ಲಿ.. ಈ ಊರಿನ ಸರ್ಕಾರಿ ಶಾಲೆಯಲ್ಲಿ ಶಾಲಿನಿಯವರು ವಿದ್ಯಾಭ್ಯಾಸ ಮಾಡುತ್ತಿದ್ದರು..

ಸರ್ಕಾರಿ ಶಾಲೆಯಾಗಿದ್ದರಿಂದ ಮಧ್ಯಾಹ್ನ ಮಕ್ಕಳಿಗೆ ಉಚಿತವಾಗಿ ಊಟವನ್ನು ನೀಡುತ್ತಿದ್ದರು.. ಇನ್ನೂ ಈ ಶಾಲೆಯ ಹೊರಗಡೆ ವಯಸ್ಸಾದ ಸರೋಜಮ್ಮ ಎಂಬ ಅಜ್ಜಿ ತಳ್ಳುವ ಗಾಡಿಯಲ್ಲಿ ಸೀಬೆಕಾಯಿಗಳನ್ನು ಮಾರುತ್ತಿದ್ದರು.. ಮಕ್ಕಳು ಮಧ್ಯಾಹ್ನದ ಊಟವನ್ನು ಮುಗಿಸಿದ ನಂತರ ನೇರವಾಗಿ ಅಜ್ಜಿಯ ಹತ್ತಿರ ಬಂದು ಸೀಬೆಕಾಯಿಯನ್ನು ತೆಗೆದುಕೊಂಡು ತಿನ್ನುತ್ತಿದ್ದರು.. ಆದರೆ ಶಾಲಿನಿ ಅತ್ತಿರ ಹಣವಿಲ್ಲದ ಕಾರಣ ದೂರ ನಿಂತು ಬೇರೆಯವರು ತಿನ್ನುವುದನ್ನು ನೋಡುತ್ತಿದ್ದಳು.. ಪ್ರತಿದಿನ ಶಾಲಿನಿ ಇದೇ ರೀತಿ ಮಾಡುತ್ತಿದ್ದ ಕಾರಣ ಸರೋಜಮ್ಮ ಒಂದು ದಿನ ಶಾಲಿನಿಯನ್ನು ಕರೆದು ನಿನಗೆ ಏನು ಬೇಕು ಎಂದು ಕೇಳಿದ್ದಾರೆ.. ಆಗ ಶಾಲಿನಿ ಏನು ಮಾತನಾಡದೆ ಸೀಬೆಕಾಯಿ ಕಡೆಗೆ ಮುಖ ಮಾಡಿ ನೋಡುತ್ತಿದ್ದಳು..

ಈಗಾಗಿ ಅಜ್ಜಿ ಒಂದು ಸೀಬೆಕಾಯಿಯನ್ನು ಶಾಲಿನಿಗೆ ಉಚಿತವಾಗಿ ನೀಡುತ್ತಾಳೆ.. ನಂತರ ಶಾಲಿನಿ ಖುಷಿಯಿಂದ ಸೀಬೆಕಾಯಿಯನ್ನು ತಿನ್ನುತ್ತಾಳೆ.. ಈಗೆ ಮರುದಿನವೂ ಕೂಡ ಶಾಲಿನಿ ಮೊದಲಿನಂತೆ ಸೀಬೆಕಾಯಿಯನ್ನು ನೋಡುತ್ತಾ ನಿಂತಿರುವ ಸಂದರ್ಭದಲ್ಲಿ ಸರೊಜಮ್ಮ ಅಜ್ಜಿ ಕರೆದು ನೀನು ನನಗೆ ಮೊಮ್ಮಗಳು ಇದ್ದ ಹಾಗೆ.. ನಿನಗೆ ನಾನು ಇನ್ನು ಮುಂದೆ ಪ್ರತಿದಿನ ಉಚಿತವಾಗಿ ಸೀಬೆಕಾಯಿಯನ್ನು ಕೊಡುತ್ತೇನೆಂದು ಅಜ್ಜಿ ಹೇಳುತ್ತಾರೆ.. ಅಂದಿನಿಂದ ಸರೋಜಮ್ಮ ಅಜ್ಜಿ ಪ್ರತಿದಿನ ಅಂದರೆ ಶಾಲಿನಿ ಹತ್ತನೇ ತರಗತಿ ಮುಗಿಸುವವರೆಗೂ ಕೂಡ ಸೀಬೆಕಾಯಿಯನ್ನು ಉಚಿತವಾಗಿ ಕೊಡುತ್ತಿದ್ದರು.. ಇನ್ನು ಶಾಲಿನಿ 10ನೇ ತರಗತಿ ವಿದ್ಯಾಭ್ಯಾಸ ಮುಗಿದ ನಂತರ ಕುಟುಂಬ ಸಮೇತ ಹಳ್ಳಿಯಿಂದ ನಗರಕ್ಕೆ ಬಂದುಬಿಡುತ್ತಾಳೆ..

ನಂತರ ಪಿಯು ಮುಗಿಸಿ, ಇಂಜಿನಿಯರಿಂಗ್ ಪದವಿಯಲ್ಲೂ ಕೂಡ ಉತ್ತಮ ಅಂಕಗಳನ್ನು ಪಡೆದು 12 ಲಕ್ಷ ಸಂಭಾವನೆ ಕೊಡುವ ಪ್ರತಿಷ್ಠಿತ ಐಟಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ.. ತಿಂಗಳಿಗೆ ಒಂದು ಲಕ್ಷ ಹಣ ಸಂಭಾವನೆ ಬರಲು ಶುರುವಾದಾಗ  ಒಳ್ಳೆಯ ಅಪಾರ್ಟ್‌ಮೆಂಟ್ ನಲ್ಲಿ ಪ್ಲಾಟ್ ಒಂದು ಖರೀದಿ ಮಾಡಿ ತಂದೆ ತಾಯಿಯ ಜೊತೆ ಸುಖ ಜೀವನ ನಡೆಸುತ್ತಿರುತ್ತಾರೆ.. ಒಂದು ದಿನ ಶಾಲಿನಿ ಓದಿದ ಸ್ಕೂಲ್ ನಿಂದ ಮಾಸ್ಟರ್ ಕರೆ ಮಾಡಿ ಹಳೆಯ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಕಾರ್ಯಕ್ರಮವಿದೆ ತಪ್ಪದೇ ನೀನು ಬರಬೇಕು ಎಂದು ಹೇಳಿ ಪೋನ್ ಕಟ್ ಮಾಡುತ್ತಾರೆ.. ಆಗ ಶಾಲಿನಿಗೆ ತುಂಬಾ ಖುಷಿಯಾಗಿ ನನ್ನ ಶಾಲೆ, ಶಿಕ್ಷಕರು, ಸ್ನೇಹಿತರು ಮತ್ತು  ಸೀಬೆಕಾಯಿ ಕೊಟ್ಡ ಸರೋಜಮ್ಮ ಅಜ್ಜಿಯನ್ನು ನೆನಪು ಮಾಡಿಕೊಳ್ಳುತ್ತಾರೆ..

ನಂತರ ಶಾಲಿನಿ ಪಾಠ ಕಲಿಸಿದ ಶಿಕ್ಷಕರಿಗೆಲ್ಲ ಡ್ರೆಸ್ ಪರ್ಚೇಸ್ ಮಾಡುತ್ತಾರೆ.. ಹಾಗೆ ಸರೋಜಮ್ಮ ಅಜ್ಜಿಗೂ ಕೂಡ ಒಂದು ರೇಷ್ಮೆ ಸೀರೆ ಎರಡು ಚಿನ್ನದ ಕಿವಿ ಓಲೆಗಳನ್ನು ಖರೀದಿ ಮಾಡುತ್ತಾಳೆ.. ನಂತರ ಶಾಲೆಯ ಕಾರ್ಯಕ್ರಮಕ್ಕೆ ಬಂದ ಶಾಲಿನಿ ಮೊದಲು ಅಜ್ಜಿಯನ್ನು ನೋಡಬೇಕೆಂದು ಬರುತ್ತಾಳೆ ಆದರೆ ಅಲ್ಲಿ ಸರೋಜಮ್ಮ ಅಜ್ಜಿ ಕಾಣಿಸಲೇ ಇಲ್ಲ ಕೊನೆಗೆ ಎಲ್ಲಾ ಕಡೆ ವಿಚಾರಿಸಿದರು ಅಜ್ಜಿಯ ಬಗ್ಗೆ ಯಾವ ಮಾಹಿತಿಯೂ ಕೂಡ ಸಿಗಲಿಲ್ಲ.. ಅಜ್ಜಿ ಸಿಗದ ಕಾರಣ ಬೇಸರದಿಂದ ಶಾಲೆಯ ಕಾರ್ಯಕ್ರಮ ಮುಗಿಸಿ ಶಿಕ್ಷಕರಿಗೆ ತಂದಿದ್ದ ಉಡುಗೊರೆಗಳನ್ನು ಕೊಟ್ಟು.. ಕೆಲವು ಸಮಯ ಹಳೆಯ ಸ್ನೇಹಿತರ ಜೊತೆ ಕಳೆಯುತ್ತಾರೆ.. ಇನ್ನು ಸ್ನೇಹಿತರ ಬಳಿ ಸರೋಜಮ್ಮ ಅಜ್ಜಿಯ ಬಗ್ಗೆ ವಿಚಾರಿಸಿದಾಗ ಅಜ್ಜಿಯ ಗಂಡ ಸ’ತ್ತ ನಂತರ ಮಾನಸಿಕವಾಗಿ ಕುಗ್ಗಿ ಹೋದ ಸರೋಜಮ್ಮ ಊರಿನ  ಸುತ್ತ ಮುತ್ತ ಓಡಾಡುತ್ತಿದ್ದಾಳೆ ಎಂದು ಹೇಳುತ್ತಾರೆ.

ನಂತರ ನೋವಿನಿಂದ ಕಾರಿನಲ್ಲಿ ನಗರದ ಕಡೆಗೆ ಹೊರಟ ಶಾಲಿನಿ ತಂದಿದ್ದ ಸೀರೆ ಹಾಗು ಓಲೆಗಳನ್ನು ಯಾರಿಗಾದರೂ ಕೊಟ್ಟು ಬಿಡೋಣ ಎಂದುಕೊಂಡು ತಿರ್ಮಾನ ಮಾಡುತ್ತಾರೆ.. ಈಗೆ ದಾರಿ ಮಧ್ಯದಲ್ಲಿ ವಯಸ್ಸಾದ ಒಬ್ಬ ಮಹಿಳೆಯನ್ನು ನೋಡಿದ ಶಾಲಿನಿ ಈ ಅಜ್ಜಿಗೆ ಕೊಟ್ಟುಬಿಡೋಣ ಎಂದುಕೊಂಡು ಹತ್ತಿರ ಹೋಗುತ್ತಾರೆ.. ಇನ್ನು ಅಲ್ಲಿ ಕೂತಿದ್ದ ಅಜ್ಜಿಯ ಹತ್ತಿರ ಸರೋಜಮ್ಮನ ಬಗ್ಗೆ  ಹೇಳಿ ಅವರಿಗೆ ಪ್ರೀತಿಯಿಂದ ಸೀರೆ ಒಲೆಗಳನ್ನು ತಂದಿದ್ದೆ ಆದರೆ ಅವರು ಸಿಗಲಿಲ್ಲ ನೀವೆ ತೆಗೆದುಕೊಳ್ಳಿ ಎಂದು ಹೇಳುತ್ತಾರೆ..

ಶಾಲಿನಿ ಹೇಳಿದ ಕಥೆಯನ್ನ ಕೇಳಿ ಆ ಅಜ್ಜಿ ತನ್ನ ಬಳಿಯಿದ್ದ ಒಂದು ಸೀಬೆಕಾಯಿಯನ್ನು ಶಾಲಿನಿಗೆ ಕೊಡುತ್ತಾಳೆ.. ಆಗ ಶಾಲಿನಿಗೆ ಅನುಮಾನ ಮೂಡಿ ನೀವು ಯಾರು ಎಂದು ವಿಚಾರಿಸಿದಾಗ ಅದೇ ಸರೋಜಮ್ಮ ಎಂದು ಗೊತ್ತಾಗುತ್ತದೆ.. ತಕ್ಷಣ ಆ ಅಜ್ಜಿಯ ಕಾಲಿಗೆ ಬಿದ್ದ ಶಾಲಿನಿ ತಪ್ಪಾಯಿತು ನನಗೆ ಗುರುತಿಸಲು ಸಾಧ್ಯವಾಗಲಿಲ್ಲ ಎಂದು ಕಣ್ಣೀರು ಹಾಕುತ್ತಾರೆ.. ಇನ್ನು ಅಜ್ಜಿಗೆ ಯಾರು ಇಲ್ಲ ಎಂದು ತಿಳಿದ ಶಾಲಿನಿ ಸರೋಜಮ್ಮ ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋಗಿ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.. ಸ್ನೇಹಿತರೆ ಈ ನೈಜ ಘಟನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನು ತಿಳಿಸಿ..