Advertisements

ಅಂಬರೀಶ್ ಸುಮಲತಾ ಅವರಿಗೆ ಪ್ರೀತಿ ಹುಟ್ಟಿಸಿದ ಸಿನಿಮಾವಿದು, ರೆಬಲ್ ಸ್ಟಾರ್ ಗೆ ಫಸ್ಟ್ ಲವ್ ಆಗಿದ್ದೆ ಇಲ್ಲೇ !!

Cinema Entertainment

ನಮಸ್ತೆ ಸ್ನೇಹಿತರೆ, ನಟ ರೆಬಲ್ ಸ್ಟಾರ್ ಅಂಬರೀಶ್ ಅವರನ್ನು ಕನ್ನಡ ಚಿತ್ರರಂಗದಲ್ಲಿ ಕರ್ಣ ಎಂದೇ ಕರೆಯುತ್ತಾರೆ. ಏಕೆಂದರೆ ಅವರ ಸೇವಾ ಮನೋಭಾವ ಅಂತದ್ದು ಕಷ್ಟ ಎಂದು ಬಂದವರಿಗೆ ಮಾಡಿದಂತಹ ಸಹಕಾರ ಸಹಾಯ ಹಾಗಿತ್ತು. ಅಂಬರೀಶ್ ತಮ್ಮ ಬಿಂದಾಸ್ ಜೀವನವನ್ನು ಎಂಜಾಯ್ ಮಾಡುತ್ತಿದ್ದಾಗ, ಸೂಪರ್ಸುಂದರಿ ಎಂಟ್ರಿಕೊಟ್ಟರು. ಆನಂತರ ಅವರ ಇಡೀ ಜೀವನ ಬದಲಾವಣೆಯ ಪರ್ವಕ್ಕೆ ತೆರೆದುಕೊಳ್ಳುತ್ತದೆ. ಹೌದು ಅಂಬರೀಶ್ ಅವರ ಜೀವನವನ್ನು ಸುಂದರವಾಗಿಸಿದವರು ನಟಿ ಸುಮಲತಾ ಮತ್ತು ಅಂಬರೀಶ್ ಅನೇಕ ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುವ ಮೂಲಕ ಪ್ರೇಕ್ಷಕ ಪ್ರಭುವನ್ನು ರಂಜಿಸಿದ್ದರು.

Advertisements
Advertisements

ಅಷ್ಟೇ ಅಲ್ಲದೆ ಈ ಜೋಡಿಯನ್ನು ಪ್ರೇಕ್ಷಕ ಬಹುವಾಗಿ ಒಪ್ಪಿಕೊಂಡಿದ್ದರು ಮತ್ತೆ ಮತ್ತೆ ಈ ಜೋಡಿ ಬರಲಿ ಎಂದು ಬೇಡಿಕೊಳ್ಳುತ್ತಿದ್ದವರು ಇದ್ದರು. ಈ ಕಾರಣಕ್ಕಾಗಿಯೇ ಒಂದು ಸಿನಿಮಾ ತೆರೆ ಮೇಲೆ ಬಂದು ಅದ್ಭುತ ಯಶಸ್ಸಿಗೆ ಕಾರಣವಾಗುತ್ತದೆ. ಅಲ್ಲದೆ ಈ ವಿಶಿಷ್ಟ ಸಿನಿಮಾದಿಂದಾಗಿ ಅಂಬರೀಷ್ ಮತ್ತು ಸುಮಲತಾ ನಿಜಜೀವನದಲ್ಲೂ ಒಂದಾಗುತ್ತಾರೆ. ಅಷ್ಟಕ್ಕೂ ಆ ಸಿನಿಮಾ ಯಾವುದು ಎಂದು ತಿಳಿದುಕೊಳ್ಳಬೇಕಾದರೆ ಇದನ್ನು ಸಂಪೂರ್ಣವಾಗಿ ಓದಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

ನ್ಯೂ ಡೆಲ್ಲಿ ಎಂಬ ಮಲಯಾಳಂ ರಿಮೇಕ್ ಸಿನಿಮಾವನ್ನು ತೆಲುಗು ನಿರ್ದೇಶಕರಾದ ಜೋಶಿಯವರೇ ನಿರ್ದೇಶನ ಮಾಡುತ್ತಾರೆ. ದೆಹಲಿ ಮೂಲದ ಪತ್ರಕರ್ತನೊಬ್ಬ ಇಬ್ಬರು ರಾಜಕಾರಣಿಗಳ ಮುಖವಾಡವನ್ನು ಜನರ ಎದುರು ತೆರೆದಿಡಲು ಹೋದಾಗ ಆತನ ವೈಯಕ್ತಿಕ ಬದುಕು ಹೇಗೆ ಹಳಿ ತಪ್ಪುತ್ತದೆ. ಮತ್ತು ಆತನನ್ನು ಸಮಾಜ ಹೇಗೆ ತನ್ನ ಒಂದು ಕೆಟ್ಟ ಕೃತ್ಯಕ್ಕೆ ಬಳಸಿಕೊಂಡು ನಂತರ ಆತನ ಮೇಲೆ ಆರೋಪವನ್ನು ವರಿಸಿ ಹೇಗೆ ಕೈದಿಯನ್ನಾಗಿ ಮಾಡುತ್ತದೆ ಮತ್ತು ಆತ ತನ್ನ ಒಂದು ಪ್ರೀತಿಯ ಮೂಲಕ ಸಮಾಜದ ದುರವಸ್ಥೆಯನ್ನು ಹೇಗೆ ಸರಿಪಡಿಸುತ್ತೇನೆ ಎಂಬುದು ಆ ಚಿತ್ರದ ಕಥೆಯಾಗಿತ್ತು.

ಈ ಸಿನಿಮಾದ ಶೂಟಿಂಗ್ ಸಮಯದಲ್ಲಿ ಇವರಿಬ್ಬರೂ ಪ್ರೀತಿಯಲ್ಲಿ ಮುಳುಗಿ ಹೋಗಿದ್ದರು. ಹೀಗಾಗಿ ಮದುವೆಯಾಗಬೇಕು ಎನ್ನುವ ಪ್ರಸ್ತಾಪ ಇಬ್ಬರ ಮನೆಯಿಂದಲೂ ಕೇಳಿಬರುತ್ತದೆ ಕೊನೆಗೆ ಅಂಬರೀಶ್ ಅವರು ಸಹ ಮದುವೆಗೆ ಒಪ್ಪಿಗೆಯನ್ನು ಕೊಡುತ್ತಾರೆ. ನಂತರ ಸುಮಲತಾ ಅವರು ಕೂಡ ತಮ್ಮ ಬಹುಕಾಲದ ಪ್ರೀತಿಯನ್ನು ವಿವಾಹವಾಗುವ ಮೂಲಕ ಉಳಿಸಿಕೊಳ್ಳುತ್ತಾರೆ. ಹೀಗಾಗಿ ನ್ಯೂ ಡೆಲ್ಲಿ ಸಿನಿಮಾ ಕನ್ನಡ ಸಿನಿಮಾ ರಂಗದ ಮಟ್ಟಿಗೆ ಪ್ರಯೋಗಾತ್ಮಕ ಸಿನಿಮಾವಾಗಿ ಹಾಗೂ ಸುಮಲತಾ ಹಾಗೂ ಅಂಬರೀಶ್ ಅವರ ವೈಯಕ್ತಿಕ ಜೀವನದ ಮಹತ್ತರ ಸಿನಿಮಾವಾಗಿ ಹೊರಹೊಮ್ಮುತ್ತದೆ. ಈ ಕುರಿತು ನಿಮ್ಮ ಅನಿಸಿಕೆ ಏನು ಎಂಬುದನ್ನು ತಪ್ಪದೆ ಕಾಮೆಂಟ್ ಮೂಲಕ ತಿಳಿಸಿ.