ನಮಸ್ಕಾರ ವೀಕ್ಷಕರೆ ಚಂದನವನದಲ್ಲಿ ಗೋಲ್ಡನ್ ಕ್ವೀನ್ ಎಂದೇ ಖ್ಯಾತಿ ಪಡೆದಿರುವ ಅಪ್ಪಟ ಕನ್ನಡತಿ ಎಂದರೆ ನಟಿ ಅಮೂಲ್ಯ ಅವರು ಹೌದು ಬಾಲನಟಿಯಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ಈ ನಟಿ ನಂತರದ ದಿನಗಳಲ್ಲಿ ಚಿತ್ರರಂಗದ ಟಾಪ್ ನಟಿಯಾಗಿ ಬೆಳೆಯುತ್ತಾರೆ ಮಂಡ್ಯದಲ್ಲಿ ಜನಿಸಿದ ನಟಿ ಅಮೂಲ್ಯ ಅವರು ಹುಟ್ಟಿದ್ದು ಬೆಳೆದಿದ್ದು ಮಾತ್ರ ಬೆಂಗಳೂರಿನಲ್ಲಿ ಜಯಲಕ್ಷ್ಮಿ ಎಂಬ ದಂಪತಿಗೆ ಜನಿಸಿದ ಅಮೂಲ್ಯ ಅವರಿಗೆ ಇಬ್ಬರು ಸಹೋದರರು ಕೂಡ ಇದ್ದು ಚಿಕ್ಕ ವಯಸ್ಸಿನಲ್ಲೆ ಭರತನಾಟ್ಯ ಕ್ರೀಡೆ ಹಾಗೂ ನೃತ್ಯ ಎಲ್ಲದರಲ್ಲೂ ಕೂಡ ಪರಿಣಿತಿ ಹೊಂದಿದ್ದರು ಐದನೇ ವಯಸ್ಸಿನಲ್ಲಿಯೇ ಡಾಕ್ಟರ್ ವಿಷ್ಣುವರ್ಧನ್ ಅವರ ಪರ್ವ ಚಿತ್ರದ ಮೂಲಕ ಬಾಲನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡುತ್ತಾರೆ, ಬಾಲನಟಿಯಾಗಿ ಸುಮಾರು ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ಅಮೂಲ್ಯ ಅವರು ಕಲಾ ಸಾಮ್ರಾಟ್ ಎಸ್ ನಾರಾಯಣ್ ನಿರ್ದೇಶನದಲ್ಲಿ 2007ರಲ್ಲಿ ಬಿಡುಗಡೆಯಾದ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಹೆಜ್ಜೆ ಇಡುತ್ತಾರೆ.

ಚಿಕ್ಕ ವಯಸ್ಸಿನಲ್ಲೇ ತಮ್ಮ ಮುಗ್ಧತೆ ಹಾಗೂ ಅಭಿನಯದ ಮೂಲಕ ಸೂಪರ್ ಸ್ಟಾರ್ ಆದ ಈ ನಟಿ ಚಿತ್ರರಂಗದ ಭರವಸೆಯ ನಟಿ ಆಗುತ್ತಾರೆ ಸದ್ಯ ಇದೀಗ ತಾಯಿಯಾಗಿರುವ ಅಮೂಲ್ಯ ಅವಳಿ ಜವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ ಅಭಿಮಾನಿಗಳು ಸಹ ಕೂಡ ಈ ಸುದ್ದಿಯನ್ನು ಸಂಭ್ರಮಿಸಿದ್ದರು ಮದುವೆಯಾದ ಬಳಿಕ ಸಿನಿಮಾದಿಂದ ಬಹಳ ಅಂತರ ಕಾಯ್ದುಕೊಂಡಿದ್ದರು ನಟಿ ಅಮೂಲ್ಯ, ಮಾಧ್ಯಮಗಳ ಕಣ್ಣಿಗೂ ಕೂಡ ಬೀಳದೆ ವೈವಾಹಿಕ ಜೀವನವನ್ನು ಆರಂಭಿಸಿದರು ಇದೀಗ ಅಮೂಲ್ಯ ಗರ್ಭಿಣಿಯಾದಾಗ ಮಾಡಿಸಿದ ಫೋಟೋಶೂಟ್ ಅನ್ನು ಹಂಚಿಕೊಂಡಿದ್ದು ಒಂದು ಸಿಹಿ ಸುದ್ದಿಯನ್ನು ನೀಡಿದ್ದಾರೆ

ಹೌದು ನಟಿ ಅಮೂಲ್ಯ ಇದೀಗ ಮತ್ತೆ ಚಿತ್ರರಂಗಕ್ಕೆ ಬರುವ ಬಗ್ಗೆ ಮಾತನಾಡಿದ್ದಾರೆ ಈಗಾಗಲೇ ಮೇಘನಾರಾಜ್ ಸರ್ಜಾ ಹಾಗು ಅನೇಕ ನಟ ನಟಿಯರು ತಾಯಿಯಾದ ಬಳಿಕ ಕೂಡ ಸಿನಿಮಾ ರಂಗವನ್ನು ಮುಂದುವರಿಸಿ ಕೊಂಡಿದ್ದಾರೆ ಹಾಗೆಯೇ ಅಮೂಲ್ಯ ಕೂಡ ಇದೇ ದಾರಿ ಹಿಡಿಯುವ ಮೂಲಕ ಮತ್ತೆ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಒಟ್ಟಾರೆ ಅಮೂಲ್ಯ ಅಭಿಮಾನಿಗಳಿಗೆ ಇದೊಂದು ದೊಡ್ಡ ಸಿಹಿಸುದ್ದಿ ಎಂದರೆ ತಪ್ಪಾಗಲಾರದು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..