ನಮಸ್ಕಾರ ಗೆಳೆಯರೆ ಟಿವಿಯಲ್ಲಿ ಪ್ರಸಾರವಾಗುವ ಹಲವು ರಿಯಾಲಿಟಿ ಶೋಗಳಲ್ಲಿ ಅತೀ ಹೆಚ್ಚು ಜನ ಮನ್ನಣೆ ಗಳಿಸುತ್ತಿರುವುದು ಬಿಗ್ ಬಾಸ್ ಶೊ… ಅದಾಗಲೇ ಎಂಟು ಸಿಸನ್ ಗಳನ್ನು ಯಶಸ್ವಿಯಾಗಿ ಕೊನೆಯಾಗಿಸಿದ್ದು, ಸದ್ಯ ಒಂಬತ್ತನೇ ಶೊ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಮನೆಲಿ ಸದ್ಯ ಎಲ್ಲ ಅಭ್ಯರ್ಥಿಗಳು ತಮ್ಮ ತಮ್ಮ ಟಾಸ್ಕಗಳ ಮಧ್ಯ ಬ್ಯುಸಿಯಾಗಿದ್ದಾರೆ. ಇನ್ನು ವೀಕ್ಷಕರು ತಮ್ಮ ನೆಚ್ಚಿನ ಕಂಟೆಸ್ಟಂಟ್ಗಳಿಗೆ ವೋಟ್ ಕೊಡ ಮಾಡುತ್ತಿದ್ದಾರೆ.

ಈಗ ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಹಳೆಯ ಹಾಗೂ ಹೊಸ ಸ್ಪರ್ಧಿಗಳು ಅತ್ಯಂತ ಕಾಳಜಿಯಿಂದ ಟಾಸ್ಕಗಳನ್ನು ಆಡುತ್ತಿದ್ದಾರೆ.ಇನ್ನು ಬಿಗ್ ಬಾಸ್ ಮನೆ ಎಂದರೆ ಕಾಮೆಡಿ, ಸಿರಿಯಸ್, ಆಟ, ಹಾಡು, ಜಗಳ ಎಲ್ಲವು ಕಾಮನ್. ಕೆಲವು ಸ್ಪರ್ಧಿಗಳು ಎಲ್ಲರೊಂದಿಗೆ ಬೇರೆತರೆ ಇನ್ನು ಕೆಲವರು ತಮ್ಮ ಲೋಕದಲ್ಲಿಯೇ ಮುಳುಗಿ ಹೋಗಿರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ ಮಯೂರಿ,ಅಮೂಲ್ಯ ಗೌಡ, ಐಶ್ವರ್ಯ ಪಿಸೆ .ಇವರೆಲ್ಲ ಟಾಸ್ಕಗಳನ್ನು ಚನ್ನಾಗಿ ನಿಭಾಯಿಸಿದರು, ಅಷ್ಟೊಂದು ಮನೆಯಲ್ಲಿ ಎಲ್ಲರೊಂದಿಗೆ ಬೇರೆಯುತಿಲ್ಲ.

ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಸ್ಪರ್ಧಿಗಳಲ್ಲಿ ಅತೀ ಹೆಚ್ಚು ಎಲ್ಲರ ಗಮನ ಸೆಳೆಯುತ್ತಿರುವುದು ಅಮೂಲ್ಯ ಗೌಡ. ಹೌದು ಕಮಲಿ ಧಾರಾವಾಹಿ ಮೂಲಕ ಬೆಳ್ಳಿ ತರೆಗರ ಹೆಜ್ಜೆ ಇಟ್ಟ ಅಮೂಲ್ಯ ಸದ್ಯಾ ಕರ್ನಾಟಕದ ಮೂಲೆಮೂಲೆಗಳಲ್ಲಿ ಪರಿಚಿತರಾಗಿದ್ದಾರೆ. ಇವರು ಬಿಗ್ ಬಾಸ್ ಮನೆಯಲ್ಲಿ ಹಳೆಯ ಸ್ಪರ್ಧಿ ದೀಪಿಕಾ ದಾಸ್ ಅವರೊಂದಿಗೆ ವಾರ ಪೂರ್ತಿ ಸಮಯವನ್ನು ಕಳೆಯಬೇಕಿದೆ. ಒಟ್ಟಾರೆ ಅಮೂಲ್ಯ ಗೌಡ ಕಮಲಿ ಧಾರಾವಾಹಿಯಂತೆಯೇ ನಿಜ ಜೀವನದಲ್ಲಿಯೂ ತುಂಬಾ ಸಾಪ್ಟ್ ಆಗಿದ್ದೀರಾ ಎಂಬುವುದು ಅವರ ಅಭಿಮಾನಿಗಳ ಅಭಿಪ್ರಾಯ.
ದೀಪಿಕಾ ಹಾಗೂ ಅಮೂಲ್ಯ ಇಬ್ಬರು ಸೇರಿ ಅರ್ಧ ಚಂದ್ರದ ಬಾಕ್ಸ್ ಮೇಲೆ ನಿಂತುಕೊಳ್ಳುವ ಟಾಸ್ಕ ಮಾಡಿದ್ದರು. ಸತತವಾಗಿ ಮೂರು ಗಂಟೆಗಳ ಕಾಲ ಅರ್ಧಚಂದ್ರದ ಬಾಕ್ಸ್ ಮೇಲೆ ನಿಲ್ಲುವುದರ ಮೂಲಕ ಈ ಟಾಸ್ಕ ನಲ್ಲಿ ವಿನ್ ಆಗಿದ್ದಾರೆ. ಬರೊಬ್ಬರಿ ಮೂರು ಗಂಟೆಗಳ ಕಾಲ ನಿಂತುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅಮೂಲ್ಯ ಹಾಗೂ ದೀಪಿಕಾ.

ಇನ್ನು ಬಿಗ್ ಬಾಸ್ ಮನೆ ಅಂದರೆ ಸುಮ್ನೆನಾ … ಇಲ್ಲಿ ಅವರಿವರು ಮಾತನಾಡಲೆ ಬೇಕು ಕಾದಾಡಲೆ ಬೇಕು. ಎಲ್ಲ ಟಾಸ್ಕಗಳನ್ನು ಗೆದ್ದರು ಸಹ ಅಮೂಲ್ಯ ಮಾತ್ರ ಎಲ್ಲರೊಂದಿಗೆ ಬೆರೆಯದೆ ತಮ್ಮ ಪಾಡಿಗೆ ತಾವು ಇರುವುದನ್ನು ನಾವೆಲ್ಲ ನೋಡಿದ್ದೇವೆ. ನಮ್ಮ ಹಾಗೆ ಮನೆಯ ಇನ್ನೊಬ್ಬ ಸ್ಪರ್ಧಿ ಮಯೂರಿ ಅವರು ನೀವ್ ಇರೋದೆ ಹೀಗೆನಾ? ಎಂದು ಅಮೂಲ್ಯರಿಗೆ ಕೇಳಿದ್ದಾರೆ.ಈ ಪ್ರಶ್ನೆಗೆ ಉತ್ತರಿಸಿದ ಅಮೂಲ್ಯ ಹೌದು ನಾನು ಇರೋದು ಹೀಗೆನೆ. ನನ್ನ ಜೊತೆ ಮಾತನಾಡಿದವರೊಂದಿಗೆ ನಾನು ತುಂಬಾ ಚನ್ನಾಗಿ ಮಾತನಾಡುತ್ತೆನೆ. ನನಗೆ ಎಲ್ಲರೊಂದಿಗೆ ಆತ್ಮೀಯವಾಗಿ ಮಾತನಾಡಲು ಸ್ವಲ್ಪ ಸಮಯಬೇಕು. ಇದು ನನ್ನ ಅಹಂ, ಅಟಿಟ್ಯುಡ್ ಅಥವಾ ದುರಹಂಕಾರವಲ್ಲ. ಇದು ನಾನು ಬಳೆದ ನೆಚರ್ ಅಷ್ಟೆ ಎಂದು ಉತ್ತರಿಸಿದ್ದಾರೆ.
ಅದಷ್ಟೆ ಸುಮ್ಮನಿರದ ಅಮೂಲ್ಯ ನನಗೆ ಬಿಗ್ ಬಾಸ್ ಮನೆಲಿ ಇರಲು ಕಷ್ಟವಾಗುತ್ತಿದೆ. ಯಾಕೆ ಎಂದು ಮತ್ತೆ ಮಯೂರಿ ಕೇಳಿದಾಗ ಗೊತ್ತಿಲ್ಲ. ಸುಮ್ಮನೆ ಇಲ್ಲಿ ಸಮಯ ಕಳೆಯಿತ್ತಿದ್ದೇನೆ ಎಂದಿದ್ದಾರೆ. ಮನೆಗೆ ಬಂದು ವಾರಗಳೆ ಕಳೆದರು ಅಮೂಲ್ಯ ಮಾತ್ರ ಯಾರೊಂದಿಗೆ ಸಹ ಬೆರೆಯದೆ ಇದ್ದಿರುವುದು ಬೇರೆಯವರ ಗಾಸಿಫ್ಗೆ ಕಾರಣವಾಗಿರಬಹುದು.
ತಮ್ಮ ನಾಚುರಲ್ ಬ್ಯೂಟಿಯಿಂದಾಗಿ ಬಿಗ್ ಬಾಸ್ ಮನೆಯ ಸಿಂಡ್ರೆಲ್ಲಾ ಎಂದು ಅಮೂಲ್ಯ ಅಭಿಮಾನಿಗಳಿಂದ ಕರೆಸಿಕೊಂಡಿದ್ದಾರೆ. ಸಧ್ಯ ಅವರು ತಾವು ಇರುವುದು ಹೇಗೆ ಎಂದು ಎಲ್ಲರೊಂದಿಗೆ ಹೇಳಿಕೋಂಡಿದ್ದಾರೆ. ಜಾಸ್ತಿ ಮಾತನಾಡದೆ ಇರುವುದು ಅವರ ಸ್ವಭಾವ. ಅದಾಗಲೆ ವಾರಗಳು ಕಳೆದಿವೆ, ಎಲಿಮಿನೆಂಟ್ ಯಾರಾಗುತ್ತಾರೆ ಎಂಬುವುದು ಸಹ ನಿಗೂಢ.