Advertisements

ಗುಲಾಬಿಯಂತ ತುಟಿಯನ್ನ ಟಚ್ ಮಾಡಿದ ಆರ್ಯವರ್ಧನ್ ಗುರೂಜಿ! ನಂತರ ಅಮೂಲ್ಯ ಮಾಡಿದ್ದೇನು ಗೊತ್ತಾ? ಅಲ್ಲಿ ನಡೆದದ್ದೇ ಬೇರೆ..

Kannada News

ಬಿಗ್ ಬಾಸ್ ಸೀಸನ್ 9 ಎರಡನೇ ವಾರಕ್ಕೆ ಕಾಲಿಟ್ಟಿದೆ. ಈ ಬಾರಿ ಸಾಕಷ್ಟು ಮನೋರಂಜನೆಯನ್ನು ಹೊಂದಿರುವ ಬಿಗ್ ಬಾಸ್ ಅತ್ಯುತ್ತಮ ಸ್ಪರ್ಧಿಗಳನ್ನು ಕೂಡ ಹೊಂದಿದೆ. ಎಲ್ಲಾ ಸ್ಪರ್ಧಿಗಳು ತಾವು ಗೆಲ್ಲಲೇ ಬೇಕು ಅಂತ ಹಠ ಹೊತ್ತು ಬಂದಂತಿದೆ. ಎಲ್ಲಾ ಟಾಸ್ಕ್ ಗಳಲ್ಲಿಯೂ ಬಹಳ ಆಸಕ್ತಿಯಿಂದ ಸ್ಪರ್ಧಿಗಳು ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಬಿಗ್ ಬಾಸ್ ಕೊಡುವ ಟಾಸ್ಕ್ ಗಳೂ ಕೂಡ ವಿಭಿನ್ನ ಹಾಗೂ ಕಠಿಣವಾಗಿದ್ದು ಸ್ಪರ್ಧಿಗಳು ಟಾಸ್ಕ್ ಗೆಲ್ಲಲು ತಮ್ಮ ಹೆಚ್ಚಿನ ಪರಿಶ್ರಮವನ್ನು ಹಾಕುತ್ತಿದ್ದಾರೆ.

ಈ ವಾರದ ಕೊನೆಯಲ್ಲಿ ಕಾಲಿಗೊಂದು ಕಾಲ ಎನ್ನುವ ಟಾಸ್ಕ್ ನೀಡಲಾಗಿತ್ತು ಕನ್ನಡ ಬಿಗ್ ಬಾಸ್ ಒಟಿಟಿ ವರ್ಷನ್ ನ ವಿನ್ನರ್ ರೂಪೇಶ್ ಶೆಟ್ಟಿ ಹಾಗೂ ಬಿಗ್ ಬಾಸ್ ನ ಹಳೆಯ ಸ್ಪರ್ಧಿ ದೀಪಿಕಾ ದಾಸ್ ಮತ್ತು ಇಟಿಟಿ ಸ್ಪರ್ಧಿ ಸಾನಿಯಾ ಅಯ್ಯರ್ ಹಾಗೂ ಹಳೆಯ ಬಿಗ್ ಬಾಸ್ ಸ್ಪರ್ಧಿ ದಿವ್ಯ ಉರುಡುಗ ಇಬ್ಬರೂ ಜೋಡಿಗಳಾಗಿ ಈ ಟಾಸ್ಕ್ ನಲ್ಲಿ ಭಾಗವಹಿಸಿದ್ದರು. ನಾಲ್ಕು ಗಂಟೆಗೂ ಹೆಚ್ಚು ಕಾಲ ಈ ಟಾಸ್ಕ್ ನಡೆದಿತ್ತು. ಇದರಲ್ಲಿ ಕೊನೆಗೆ ಯಶಸ್ವಿಯಾಗಿದ್ದು ದಿವ್ಯ ಉರುಡುಗ ಹಾಗೂ ಸಾನಿಯಾ ಅಯ್ಯರ್.

Advertisements
Advertisements

ಇನ್ನು ಟಾಸ್ಕ್ ನಡೆಯುತ್ತಿರುವ ವೇಳೆ ಅವರಿಗೂ ಮನರಂಜನೆ ಕೊಡುತ್ತಾ ತಾವು ಮನರಂಜನೆ ಪಡೆದುಕೊಳ್ಳುತ್ತ ಇದ್ದ ಉಳಿದ ಸ್ಪರ್ಧಿಗಳಲ್ಲಿ, ಆರ್ಯವರ್ಧನ್ ಗುರೂಜಿ ಹಾಗೂ ಅಮೂಲ್ಯ ಅವರ ಮಾತು ಹೈಲೈಟ್ ಆಗಿದೆ. ಇತ್ತೀಚೆಗೆ ಆರ್ಯವರ್ಧನ್ ಗುರೂಜಿ ಬಿಗ್ ಬಾಸ್ ಮನೆಯಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಆಗಿದ್ದಾರೆ. ಗುರೂಜಿ ಅವರಿಗೆ ಫ್ರಾಂಕ್ ಮಾಡುತ್ತಾ, ಅವರನ್ನು ಕಿಚಾಯಿಸುತ್ತಾ ಎಲ್ಲಾ ಸ್ಪರ್ಧಿಗಳು ಗುರೂಜಿಯವರ ಜೊತೆ ಹೆಚ್ಚು ಬೆರೆತಿದ್ದಾರೆ.

ಅಲ್ಲದೆ ಆರ್ಯವರ್ಧನ್ ಗುರೂಜಿ ಕೂಡ ಆಗಾಗ ನಾನು ಈ ಮನೆಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೇನೆ ಎಂದು ಹೇಳುತ್ತಲೇ ಇರುತ್ತಾರೆ. ಇನ್ನು ಕಾಲಿಗೊಂದು ಕಾಲ ಟಾಸ್ಕ್ ನಡೆಯುವ ವೇಳೆ ಅಮೂಲ್ಯ ಅವರು ಗುರೂಜಿ ಪಕ್ಕ ಕುಳಿತಿದ್ರು. ಈ ಸಮಯದಲ್ಲಿ ಗುರೂಜಿ ಅಮೂಲ್ಯ ಅವರ ತುಟಿಯನ್ನು ನೋಡಿ ಭವಿಷ್ಯ ಹೇಳೋದಕ್ಕೆ ಶುರು ಮಾಡಿದ್ರು. ಹೀಗೆ ಚೂಪಾದ ತುಟಿ ಇದ್ರೆ ತುಂಬಾ ಒಳ್ಳೆಯದು ಎಲ್ಲರೂ ನಿಮ್ಮ ಹಿಂದೆ ಬರುತ್ತಾರೆ ಅಂತ ಗುರುಜಿ ಹೇಳಿದ್ದಾರೆ.

ಇದಕ್ಕೆ ಅಮೂಲ್ಯ ನಕ್ಕು ಎಲ್ಲರ ಜೊತೆ ಈ ವಿಷಯವನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಪಕ್ಕದಲ್ಲಿಯೇ ಕುಳಿತಿದ್ದ ರಾಕೇಶ್ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಅಂತ ಗುರೂಜಿಯನ್ನು ಕೇಳಿದರು. ನಿನಗೆ ಯಾವ ಹುಡುಗಿಯು ಬೀಳಲ್ಲ ನೀನೆ ಅವರ ಹಿಂದೆ ಹೋಗ್ತೀಯ ಅಂತ ಹೇಳಿ ನಕ್ಕರು. ಕೊನೆಗೆ ಗುರೂಜಿಯವರ ಬಳಿ ತುಟಿಯ ಭವಿಷ್ಯ ತಿಳಿದುಕೊಳ್ಳುವುದಕ್ಕೆ ಎಲ್ಲರಿಗೂ ಆಸಕ್ತಿ ಮೂಡಿತು.

ಇದೇ ಸಮಯದಲ್ಲಿ ಅರುಣ್ ಸಾಗರ್ ನನ್ನ ತುಟಿ ನೋಡಿ ಭವಿಷ್ಯ ಹೇಳಿ ಅಂತ ಗುರೂಜಿಯನ್ನು ಕೇಳಿದರು. ನೀನು ಮೊದಲು ಮೀಸೆ ಬೋಳಿಸಿಕೊಂಡು ಬಾ, ಆಮೇಲೆ ಭವಿಷ್ಯ ಹೇಳ್ತೀನಿ, ನಿನ್ನ ತುಟಿ ಕಾಣೀಸುವುದೇ ಇಲ್ಲ ಅಂತ ಗುರೂಜಿ ತಮಾಷೆ ಮಾಡಿದ್ದಾರೆ. ಓಟಿಟಿಯಲ್ಲಿ ಬಿಗ್ ಬಾಸ್ ಮನೆಯಲ್ಲಿದ್ದ ಅರ್ಯವರ್ಧನ್ ಗುರೂಜಿ ಇದೀಗ ಸೀಸನ್ 9ಕ್ಕೂ ಕಾಲಿರಿಸಿದ್ದಾರೆ. ಇನ್ನು ಈ ವಾರ ನಾನೇ ಕ್ಯಾಪ್ಟನ್ ಆಗಬೇಕು ಅಂತ ಹಠ ತೊಟ್ಟಿದ್ದಾರೆ. ಉಳಿದ ಸ್ಪರ್ಧಿಗಳು ಗುರೂಜಿ ಅವರಿಗೆ ವೋಟ್ ಮಾಡ್ತಾರಾ? ಗುರೂಜಿ ಇವರ ಕ್ಯಾಪ್ಟನ್ ಆಗ್ತಾರ? ಅನ್ನೋದನ್ನ ಕಾದು ನೋಡಬೇಕು.

Leave a Reply

Your email address will not be published.