Advertisements

ಅನಂತ್ ನಾಗ್ ರವರ ಅಳಿಯ ಯಾರು ಗೊತ್ತಾ..? ಅವರು ಕೂಡ ತುಂಬಾ ಫೇಮಸ್.. ಮೊದಲ ಬಾರಿಗೆ ನೋಡಿ..

Cinema Kannada News

ನಮಸ್ತೆ ಸ್ನೇಹಿತರೆ, ಕನ್ನಡ ಚಿತ್ರರಂಗ ಕಂಡ ಪ್ರತಿಭಾನ್ವಿತ ನಟರಲ್ಲಿ ಅನಂತನಾಗ್ ಕೂಡ ಒಬ್ಬರು. ಅನಂತನಾಗ್ ಅವರು ಸೆಪ್ಟೆಂಬರ್ 4, 1948 ರಲ್ಲಿ ಜನಿಸಿದರು. ಕನ್ನಡ, ಕೊಂಕಣಿ ಮರಾಠಿ ರಂಗಭೂಮಿಯಲ್ಲಿ 8 ವರ್ಷಗಳ ಕಾಲ ಅನಂತನಾಗ್ ಅವರು ತೊಡಗಿಸಿಕೊಂಡರು.. 1973 ರಲ್ಲಿ ಅನಂತ್ ನಾಗ್ ಅವರು ಕನ್ನಡ ಸಿನಿಮಾ ಲೋಕಕ್ಕೆ ಸಂಕಲ್ಪ ಎಂಬ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದ ನಂತರ ಹಂಸ ಗೀತೆ, ಬಯಲು ದಾರಿ, ಮಿಂ’ಚಿನ ಓಟ, ಬೆಂಕಿಯ ಬಲೆ, ಚಂದನದ ಗೊಂಬೆ ಇಬ್ಬನಿ ಕರಗಿತು. ನಾನಿನ್ನ ಬಿಡಲಾರೆ.. ಇನ್ನು ಮುಂತಾದ ಸಿನಿಮಾಗಳಲ್ಲಿ ಜೀವಿಸಿದ್ದಾರೆ ಅನಂತನಾಗ್.

Advertisements
Advertisements

ಅನಂತನಾಗ್ ಅವರು ನಟಿಸಿರುವ ಸಿನಿಮಾಗಳು ಇವರಿಗೆ ತುಂಬಾ ಹೆಸರು ಮತ್ತು ಕೀರ್ತಿ ತಂದುಕೊಟ್ಟಿವೆ. ಕಾಲಾಂತರದಲ್ಲಿ ಹಾಸ್ಯ ಪ್ರಧಾನ ಚಿತ್ರಗಳಲ್ಲಿ ನಾಯಕರಾಗಿ ಅಭಿನಯಿಸಿ ಪ್ರೇಕ್ಷಕರನ್ನು ರಂಜಿಸಿದ್ದಾರೆ. ಗಣೇಶನ ಮದುವೆ.. ಗಣೇಶ ಸುಬ್ರಹ್ಮಣ್ಯ, ಗೌರಿ ಗಣೇಶ, ಯಾರಿಗೂ ಹೇಳ್ಬೇಡಿ, ಇನ್ನೂ ಮುಂತಾದ ಹಾಸ್ಯ ಚಿತ್ರಗಳ ಮೂಲಕ ಪ್ರೇಕ್ಷಕರನ್ನ ಅನಂತ್ ನಾಗ್ ಅವರು ಸಕ್ಕತ್ ನಟಿಸಿ ಎಂಟರ್ಟೈನ್ ಮಾಡಿದ್ದಾರೆ.. ಇನ್ನೂ ರಾಜಕೀಯಕ್ಕೂ ದುಮುಕಿದ ಇವರು ಬೆಂಗಳೂರಿನ ಮಲೇಶ್ವರಂ ವಿಧಾನಸಭಾ ಕ್ಷೇತ್ರದಿಂದ ಚುನಾಯಿತರಾಗಿ ಶಾಸಕರಾದರು.

ನಂತರ ಜೆಎಚ್ ಪಟೇಲ್ ಅವರ ಮಂತ್ರಿ ಮಂಡಲದಲ್ಲಿ ಮಂತ್ರಿಯಾಗಿ ಸೇವೆಯನ್ನು ಸಹ ಸಲ್ಲಿಸಿದ್ದಾರೆ.‌ ಇನ್ನೂ ಅನಂತ್ ನಾಗ್ ಅವರು ಕನ್ನಡದ ಖ್ಯಾತ ನಟಿಯಾಗಿದ್ದ ಗಾಯತ್ರಿ ಅವರನ್ನು ಮದುವೆ ಆಗಿದ್ದಾರೆ.. ಈ ದಂಪತಿಗಳಿಗೆ ಅಧಿತಿ ಎಂಬ ಹೆಣ್ಣು ಮಗಳಿದ್ದಾರೆ. ಇವರು ಪೋಸ್ಟ್ ಗ್ರ್ಯಾಜ್ಯುಯೇಷನ್ ಮುಗಿಸಿದ್ದು ಖಾಸಗಿ ಕಂಪನಿ ಒಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ವಿವೇಕ್ ಅನ್ನುವವರನ್ನ ಪ್ರೀತಿಸಿ ಮದುವೆಯಾಗಿದ್ದಾರೆ.. ವಿವೇಕ್ ಅವರು ಕೂಡ ಖಾಸಗಿ ಕಂಪನಿಯಲ್ಲಿ ದೊಡ್ಡ ಕೆಲಸವನ್ನು ಮಾಡ್ತಿದ್ದಾರೆ. ಇದರ ಬಗ್ಗೆ ನೀವೇನಂತಿರಾ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.