Advertisements

ಆಂಕರ್ ಅನುಶ್ರೀ ಬಗ್ಗೆ ಯಾರಿಗೂ ಗೊತ್ತಿಲ್ಲದ ಸತ್ಯಗಳು ಇವೇ ನೋಡಿ.!

Cinema

ನಮಸ್ಕಾರ ವೀಕ್ಷಕರೆ ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕು ಅನ್ನೋದು ಅನುಶ್ರೀ ಚಿಕ್ಕಂದಿನ ಆಶಯವಾಗಿತ್ತು
ಆದ್ರೆ ಅವರು ಚಿಕ್ಕವರಿದ್ದಾಗಲೇ ತಂದೆ ತಾಯಿ ಬೇರ್ಪಟ್ಟರು ಆದಾಗಿಯೂ ಎದೆಗುಂದದೆ ಅನುಶ್ರೀ ಅವರ ತಾಯಿ ಮಗಳನ್ನು ಮಗನನ್ನು ಕಷ್ಟಪಟ್ಟು ಓದಿಸುತ್ತಿದ್ದರು.. ಅನುಶ್ರೀ ಅವರು ಪಿಯುಸಿ ಓದುತ್ತಿದ್ದಾಗ ತನ್ನ ತಾಯಿಯ ಕಷ್ಟ ನೋಡಲಾಗದೆ ತಾನೂ ದುಡಿಯಬೇಕು ಮನೆಯ ಜವಾಬ್ದಾರಿ ತಾಯಿ ತಮ್ಮನ ಜವಾಬ್ದಾರಿ ತಾನು ಹೊರಬೇಕು ಅನ್ನೋ ಮನಸ್ಸು ಧೈರ್ಯ ಅನುಶ್ರೀ ಅವರಲ್ಲಿ ಹುಟ್ಟುತ್ತದೆ ಆದರೆ ಏನು ಮಾಡಬೇಕು ಎಂದು ಗೊತ್ತಿಲ್ಲ ತಮ್ಮ ಮಾತಿನ ಚಾತುರ್ಯವನ್ನೆ ಬಂಡವಾಳ ವನ್ನಾಗಿಸಿಕೊಂಡು ಮಂಗಳೂರಿನ ನಮ್ಮ ಟಿವಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ಪಿಯುಸಿ ಓದುತಿದ್ದ ಅನುಶ್ರೀ ಅಲ್ಲಿ ಅನುಶ್ರೀಗೆ ಬರುತ್ತಿದ್ದದ್ದು ಸ್ವಲ್ಪ ಹಣ ಆ ಹಣ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ

Advertisements
Advertisements

ಆಗ ಬೆಂಗಳೂರಿನ ಬಸ್ಸು ಹತ್ತಿ ಆತಂಕ ಭಯದ ಜೊತೆ ಹತ್ತಾರು ಕನಸುಗಳನ್ನು ಹೊತ್ತು ತಾಯಿಯನ್ನು ಸಂತೋಷವಾಗಿ ರಿಸಬೇಕು ಅನ್ನೋ ಛಲದಿಂದ ಬೆಂಗಳೂರಿಗೆ ಬಂದು ಇಳಿಯುತ್ತಾರೆ.. ತಮ್ಮ ಪ್ರತಿಭೆಯಿಂದ ಈಟಿವಿಯಲ್ಲಿ ಕೆಲಸಕ್ಕೆ ಸೇರುತ್ತಾರೆ ಅಲ್ಲಿ ಒಂದು ಎಪಿಸೋಡ್ ಗೆ ಅನುಶ್ರೀಗೆ ಬರುತ್ತಿದ್ದು ಕೇವಲ 250 ರೂಪಾಯಿ ಹ್ಯಾಂಕರ್ ಆಗಿ ಡಬ್ಬಿಂಗ್ ಆರ್ಟಿಸ್ಟ್ ಆಗಿ ಈಕೆ ಕಷ್ಟಪಟ್ಟು ದುಡಿದ ಅನುಶ್ರೀ ಕೊನೆಗೆ ಒಂದು ದಿನ ಕನ್ನಡಿಗರ ಮನೆ ಮಾತಾಗುತ್ತಾರೆ ನೂರಾರು ಪ್ರತಿಭಾವಂತರ ಜೊತೆ ಪೈಪೋಟಿಗೆ ನಿಂತು ಕೊನೆಗೆ ಕನ್ನಡದ ಕಿರುತೆರೆಯಲ್ಲಿ ನಂಬರ್ ಒನ್ ಹ್ಯಾಂಕರ್ ಆಗಿ ಹೊರಹೊಮ್ಮುತ್ತಾರೆ ಇನ್ನೊಂದು ಕಡೆ ತಮ್ಮನನ್ನು ಚೆನ್ನಾಗಿ ಓದಿಸಿ ವಿದ್ಯಾವಂತನಾಗಿ ಮಾಡುತ್ತಾರೆ

ತಾಯಿಯನ್ನು ಹೂವಿನಲ್ಲಿಟ್ಟು ಸಾಕುತ್ತಾರೆ ತುಂಬಾ ಜನಕ್ಕೆ ಗೊತ್ತಿಲ್ಲದ ಇನ್ನೊಂದು ವಿಷಯ ಅಂದರೆ ಮೊದಲು ಮೊಗ್ಗಿನ ಮನಸ್ಸು ಚಿತ್ರದಲ್ಲಿ ನಟಿಸುವಂತೆ ನಿರ್ದೇಶಕ ಶಶಾಂಕ್ ಅವರು ಮೊದಲು ಕೇಳಿದ್ದು ಅನುಶ್ರೀ ಅವರನ್ನು ಆದರೆ ತುಂಬಾ ಸಂಕೋಚ ಮನೋಭಾವ ಹೊಂದಿದ್ದ ಅನುಶ್ರೀ ನಟನೆ ಮಾಡಲು ಹಿಂಜರಿಯುತ್ತಾರೆ ಡಬ್ಬಿಂಗ್ ಆರ್ಟಿಸ್ಟ್ ವಿಭಾಗದಲ್ಲಿ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ ಪಡೆದಿದ್ದಾರೆ ಅನುಶ್ರೀ ಅನ್ನೋದು ಇನ್ನೊಂದು ಮೆಚ್ಚುವಂತಹ ವಿಷಯ ತಮ್ಮ ಪ್ರತಿಭೆಯನ್ನು ನಂಬಿ ಬೆಂಗಳೂರು ಬಸ್ಸು ಹತ್ತಿದ ಆಂಕರ್ ಅನುಶ್ರೀ ಈ ಹಂತಕ್ಕೆ ಬೆಳೆದಿದ್ದಾರೆ ಅಂದರೆ ಅವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ ಅನುಶ್ರೀ ಅವರ ಚಲ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.