ಮಹಿಳೆಯೊಬ್ಬಳು ತನ್ನ ಪತಿ ಇಷ್ಟಪಟ್ಟ ಹುಡುಗಿಯೊಂದಿಗೆ ಸಾಂಪ್ರದಾಯಿಕವಾಗಿ ಆಂಧ್ರಪ್ರದೇಶದ ತಿರುಪತಿಯಲ್ಲಿ ಮದುವೆ ಮಾಡಿದ್ದಾರೆ. ತಿರುಪತಿಯ ದಕ್ಕಿಲಿಯ ಅಂಬೇಡ್ಕರ್ ನಗರದ ನಿವಾಸಿ ಕಲ್ಯಾಣ್ ಯೂಟ್ಯೂಬ್ ಮತ್ತು ಶೇರ್ ಚಾಟ್ನಲ್ಲಿ ರೀಲ್ಸ್ ಮಾಡುವ ಮೂಲಕ ಜನಪ್ರಿಯತೆ ಗಳಿಸಿದ್ದರು. ಈ ವೇಳೆ ಅವರಿಗೆ ಕಡಪಾ ಮೂಲದ ವಿಮಲಾ ಅವರು ಪರಿಚಯವಾಗಿ ಇಬ್ಬರ ನಡುವೆ ಸ್ನೇಹ ಬೆಳೆದು ನಂತರ ಪ್ರೀತಿ ಚಿಲುಮಿದೆ. ಕೆಲವು ವರ್ಷಗಳ ಹಿಂದೆ ಇಬ್ಬರೂ ವಿವಾಹ ಕೂಡ ಆದರು. ನಂತರ ಇಬ್ಬರೂ ಜೊತೆಗೂಡಿ ರೀಲ್ಸ್ ಮಾಡಿ ಸೋಶಿಯಲ್ ಮೀಡಿಯಾ ಫ್ಲಾಟ್ಫಾರ್ಮ್ಗಳಲ್ಲಿ ಶೇರ್ ಮಾಡಿಕೊಳ್ಳುವುದರ ಮೂಲಕ ಫೇಮಸ್ ಆಗಿದ್ದರು. ಜೊತೆಗೆ ಈ ಜೋಡಿಗೆ ಸಾಕಷ್ಟು ಫಾಲೋವರ್ಸ್ ಕೂಡ ಇದ್ದಾರೆ.

ಹೀಗಿದ್ದರೂ ಗಂಡನ ನಡವಳಿಕೆಯಲ್ಲಿ ಆಗುತ್ತಿರುವ ಬದಲಾವಣೆಗಳನ್ನು ಗಮನಿಸಲಾರಂಭಿಸಿದ ವಿಮಲಾಗೆ, ಕಲ್ಯಾಣ್ ವಿಶಾಖಪಟ್ಟಣಂನ ಯುವತಿಯನ್ನು ಇಷ್ಟಪಟ್ಟಿದ್ದರು. ಆದರೆ ಅನಿವಾರ್ಯ ಕಾರಣಗಳಿಂದ ಇಬ್ಬರೂ ಬೇರೆಯಾಗಿದ್ದರು. ಅಂದಿನಿಂದ ಇಬ್ಬರ ನಡುವೆ ಯಾವುದೇ ಸಂಪರ್ಕ ಇರಲಿಲ್ಲ ಎಂಬ ವಿಚಾರ ತಿಳಿದು ಬಂದಿದೆ.
ಮತ್ತೊಂದೆಡೆ ಕಲ್ಯಾಣ್ ಮದುವೆಯಾಗಿರುವ ಸುದ್ದಿಯನ್ನು ಕೇಳಿದ ನಿತ್ಯಾ, ನಂತರ ಕಲ್ಯಾಣ್ನನ್ನು ಮದುವೆಯಾಗಲು ಅನುಮತಿ ನೀಡುವಂತೆ ವಿಮಲಾರನ್ನು ಬೇಡಿಕೊಂಡಿದ್ದಾಳೆ. ಅಲ್ಲದೇ ಕಲ್ಯಾಣ್ ಮತ್ತು ನನ್ನ ಮದುವೆಯಾದ ಬಳಿಕ ಎಲ್ಲರೂ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸೋಣ ಎಂದು ವಿಮಾಲಾರಿಗೆ ಕೇಳಿಕೊಂಡಿದ್ದಾಳೆ.

ಇದರಿಂದ ಒಂದು ಕ್ಷಣ ತಬ್ಬಿಬ್ಬಾದ ವಿಮಲಾ ಆಲೋಚಿಸಲು ಕೊಂಚ ಸಮಯ ತೆಗೆದುಕೊಂಡು ನಂತರ ಮದುವೆಗೆ ಗ್ರೀನ್ ಸಿಗ್ನಿಲ್ ನೀಡಿದ್ದಾರೆ. ಅಲ್ಲದೇ ತಾವೇ ಮುಂದೆ ನಿಂತು ಪತಿ ಕಲ್ಯಾಣ್ ಹಾಗೂ ನಿತ್ಯ ಮದುವೆಯನ್ನು ಸಾಂಪ್ರದಾಯಿಕವಾಗಿ ಮಾಡಿದ್ದಾರೆ. ಬಳಿಕ ಮೂವರು ಒಟ್ಟಿಗೆ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಹಲವಾರು ಚರ್ಚೆಗೆ ಕಾರಣವಾಗಿದೆ.