Advertisements

ಸೀವೇಜ್ ಪೈಪ್ನಿಂದ ಈಕೆ ಬಡವರಿಗಾಗಿ ಎಂತಹ ಪ್ರ’ಯೋಗ ಮಾಡಿದ್ದಾಳೆ ಗೊತ್ತಾ..? ಈಕೆ ಮಾಡಿದ ಪ್ರ’ಯೋಗ ನೋಡಲು ಸಾವಿರಾರು ಜನ ಬರುತ್ತಿದ್ದಾರೆ.

Inspiration Science Technology

ನಮಸ್ತೆ ಸ್ನೇಹಿತರೆ, ಭಾರತ ದೇಶವು ದಿನೇದಿನೆ ಅಭಿವೃದ್ಧಿ ಹೊಂದುತ್ತಿದೆ. 2019 ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಭಾರತವು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ದೇಶವಾಗಿದೆ. ಆದರೆ ಅದೇ ಅಧ್ಯಯನವು ನಮ್ಮ ದೇಶದಲ್ಲಿ 6 ಕೋಟಿಗೂ ಹೆಚ್ಚು ಜನರಿಗೆ ವಾಸಿಸಲು ಮನೆ ಮತ್ತು ವಸತಿ ಇಲ್ಲ ಎಂದು ಪ್ರಸ್ತಾಪಿಸಿದೆ. ನಮ್ಮ ದೇಶದಲ್ಲಿ ಅನೇಕ ಜನರು ಒಣಹುಲ್ಲಿನ ಅಥವಾ ಗುಡಿಸಲುಗಳಿಂದ ಮಾಡಿದ ಮನೆಗಳಲ್ಲಿ ವಾಸ ಮಾಡುತ್ತಿದ್ದಾರೆ, ಕೆಲವರು ಅನಿವಾರ್ಯವಾಗಿ ಶಿಪಿಂಗ್ ಕಂಟೇನರ್ಗಳಲ್ಲಿ ವಾಸಿಸುತ್ತಿದ್ದಾರೆ.

Advertisements
Advertisements

ಹವಾಮಾನ ಬದಲಾವಣೆಯಾದಂತೆಲ್ಲಾ, ಈ ಜನರು ಆಗಾಗ ತಾವು ವಾಸಿಸುವ ಜಾಗವನ್ನು ಬದಲಾಯಿಸಬೇಕಾಗುತ್ತದೆ. ಆದ್ದರಿಂದ ಈ ತೊಂದರೆಯನ್ನು ನಿಭಾಯಿಸಲು ತೆಲಂಗಾಣದ ಬೊಮ್ಕಲ್ ಗ್ರಾಮದಲ್ಲಿ ವಾಸಿಸುವ ಪೆರಲಾ ಮಾನಸ ರೆಡ್ಡಿ ಎಂಬುವವರು ಒಂದು ಹೊಸ ಪ್ರಯೋಗವನ್ನು ಮಾಡಿದ್ದಾರೆ. ಅವರು ಹಾಂಗ್ಕಾಂಗ್ನ ಓಪಾಡ್ ಮನೆಗಳಿಂದ ಸ್ಫೂರ್ತಿ ಪಡೆದು ಅಗ್ಗದ ಓಪಾಡ್ ಟ್ಯೂಬ್ ಹೌಸ್ ಅನ್ನು ರಚಿಸಿದ್ದಾರೆ. ಅಂದರೆ ಕೊಳವೆಗಳನ್ನು ಬಳಸಿಕೊಂಡು ಮನೆಯನ್ನು ನಿರ್ಮಿಸಿದ್ದಾರೆ. ಹಾಂಗ್ಕಾಂಗ್‌ನ ‘ಜೇಮ್ಸ್ ಲಾ ಸೈಬರ್ಟೆಕ್ಚರ್’ ಎಂಬ ಕಂಪನಿಯು ಜನರಿಗೆ ಸಹಾಯಕವಾಗಲೆಂದು ಅಂತಹ ಸಣ್ಣ ಮನೆಗಳನ್ನು ತಯಾರಿಸಲು ಪ್ರಾರಂಭಿಸಿತು.

ಮಾನಸ ಅವರು ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಸಿವಿಲ್ ಎಂಜಿನಿಯರ್ ಅಧ್ಯಯನ ಮಾಡಿ ಪದವಿಯನ್ನು ಪಡೆದಿದ್ದಾರೆ. ಈ ಕೊಳವೆ ಪೈಪ್ಗಳನ್ನು ತೆಲಂಗಾಣದ ಉತ್ಪಾದಕರಿಂದ ಸಂಗ್ರಹಿಸಲಾಗಿದೆ ಎಂದು ಅವರು ಹೇಳ್ತಿದ್ದಾರೆ. ಈ ಎಲ್ಲಾ ಕೊಳವೆಗಳನ್ನು ನಮ್ಮ ಅವಶ್ಯಕತೆಗೆ ಅನುಗುಣವಾಗಿ ದೊಡ್ಡ ಮತ್ತು ಸಣ್ಣ ಗಾತ್ರಗಳಲ್ಲಿ ನೀಡಲು ಸಿದ್ಧವಾಗಿದ್ದರೂ, ಈ ಎಲ್ಲಾ ಕೊಳವೆಗಳು ದುಂಡಗಿನ ಆಕಾರದಲ್ಲಿವೆ. ಅದೇನೇ ಇದ್ದರೂ, 3 ಜನರ ಕುಟುಂಬಗಳು ಈ ಪೈಪ್‌ನಲ್ಲಿ ಆರಾಮವಾಗಿ ವಾಸಿಸಬಹುದು. ಇಂತಹ ಮನೆಗಳನ್ನು ನಿರ್ಮಿಸಲು ಕೇವಲ 15 ರಿಂದ 20 ದಿನಗಳು ಬೇಕಾಗುತ್ತದೆ ಎಂದು ಮಾನಸ ಹೇಳುತ್ತಾರೆ.

ಮಾನಸಾ ಸಮನ್ವಿ ಕನ್ಸ್ಟ್ರಕ್ಷನ್ಸ್ ಎಂಬ ಹೆಸರಿನ ಸ್ಟಾರ್ಟ್ ಅಪ್ ಅನ್ನು ಪ್ರಾರಂಭಿಸಿದ್ದಾರೆ. ಇದರಲ್ಲಿ, ಮನೆ ನಿರ್ಮಿಸುವ ಜವಾಬ್ದಾರಿಯನ್ನು ಬಹಳ ಕಡಿಮೆ ವೆಚ್ಚದಲ್ಲಿ ತೆಗೆದುಕೊಳ್ಳಲಾಗುತ್ತದೆ. ಬೇಸಿಗೆಯಲ್ಲಿ ಹೆಚ್ಚುತ್ತಿರುವ ತಾ’ಪಮಾ’ನ ಅಥವಾ ಮಳೆಗಾಲದಲ್ಲಿ ಪ್ರ’ವಾ’ಹದ ನೀರಿನಿಂದಾಗಿ ಬಡ ಜನರು ಆಗಾಗ ತಮ್ಮ ಮನೆಗಳನ್ನು ಬದಲಾಯಿಸಿಕೊಳ್ಳುತ್ತಿದ್ದರು ಎಂಬ ಕಾರಣದಿಂದ ಅಂತಹ ಮನೆಗಳನ್ನು ನಿರ್ಮಿಸಲು ನಾನು ಮುಂದಾದೆ ಎಂದು ಮಾನಸ ಹೇಳುತ್ತಾರೆ.

ಮನೆಯಿಲ್ಲದ ಜನರು ರಸ್ತೆಯ ಬದಿಯಲ್ಲಿ ಬೃಹತ್ ಕೊಳವೆಗಳಲ್ಲಿ ವಾಸಿಸುತ್ತಿದ್ದರು, ನಾನು ಅನೇಕ ಬಾರಿ ಅಂತಹ ದೃಶ್ಯಗಳನ್ನ ನೋಡುತ್ತಿದ್ದೆ ಎಂದು ಮಾನಸಾ ಹೇಳುತ್ತಾರೆ. ಅಲ್ಲಿಂದ, ಈ ಸಣ್ಣ ಕೆಟ್ಟ ಪೈಪ್ ಬಳಸಿ ಏಕೆ ಉತ್ತಮ ಮನೆ ಮಾಡಬಾರದು ಎಂಬ ಕಲ್ಪನೆ ನನಗೆ ಬಂದಿತು. ಇದರಿಂದ ಗ್ರಾಹಕರಿಗೆ 1 ಬಿಎಚ್ಕೆ, 2 ಬಿಎಚ್ಕೆ ಮತ್ತು 3 ಬಿಎಚ್ಕೆ ಮನೆಗಳನ್ನು ನಿರ್ಮಿಸಬಹುದು. ಈ ಆಲೋಚನೆ ಮಾನಸರವರಿಗೆ ತುಂಬಾ ಯಶಸ್ಸನ್ನು ನೀಡಿದೆ. ಹಲವಾರು ಕಡೆಗಳಿಂದ ಸಾವಿರಾರು ಆರ್ಡರ್ ಗಳು ಬರುತ್ತಿವೆ. ಮಾನಸ ಅವರು ಮಾಡಿದ ಈ ಹೊಸ ಪ್ರಯೋಗದ ಬಗ್ಗೆ ನೀವೇನಂತೀರಿ ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.