Advertisements

ಅನಿರುದ್ಧ್ ಅಹಂಕಾರಿಯಾದ್ರಾ? ಅನಿರುದ್ಧ್ ಜಗಕ್ಕೆ ಕನ್ನಡದ ಸ್ಟಾರ್ ನಟನ ಎಂಟ್ರಿ ಯಾರು ನೋಡಿ!

Cinema Entertainment

ಪ್ರಿಯ ಓದುಗರೇ ಇತ್ತೀಚಿಗೆ ಮೂಡಿಬರುತ್ತಿರುವ ಧಾರಾವಾಹಿಗಳಲ್ಲಿ ಜೊತೆ ಜೊತೆಯಲ್ಲಿ ದಾರವಾಹಿ ತುಂಬಾನೇ ಫೇಮಸ್ ಆಗಿತ್ತು. ಎಷ್ಟರಮಟ್ಟಿಗೆ ಎಂದರೆ ಚಿಕ್ಕಮಕ್ಕಳಿಂದ ವಯಸ್ಸಾದವರು ಸಹ ಸಂಜೆಯಾದರೆ ಸಾಕು ಟಿವಿ ಮುಂದೆ ಹಾಜರಾಗುತ್ತಿದ್ದರು. ಅಷ್ಟರಮಟ್ಟಿಗೆ ಈ ಧಾರಾವಾಹಿ ಹೆಸರು ಪಡೆದಿತ್ತು. ಆದರೆ ಇದೀಗ ಈ ಧಾರಾವಾಹಿಯ ಪ್ರಮುಖ ನಟರಾದ ಅನಿರುದ್ಧ ಅವರನ್ನು ಧಾರಾವಾಹಿ ಇಂದ ಕೈಬಿಡಲಾಗಿದೆ. ಇದು ನಿಜವೋ? ಸುಳ್ಳೋ?ಇದಕ್ಕೆ ಕಾರಣವೇನು?ಎಂಬುದನ್ನು ಈ ಲೇಖನದಲ್ಲಿ ಹೇಳ್ತೀವಿ ಇದನ್ನು ಪೂರ್ಣವಾಗಿ ಓದಿ. ಜೊತೆ ಜೊತೆಯಲಿ ಧಾರಾವಾಹಿ ಮೂಡಿ ಬಂದಾಗಿನಿಂದ ಇನ್ನುಳಿದ ಧಾರಾವಾಹಿಗಳತ್ತ ಪ್ರೇಕ್ಷಕರು ಗಮನಹರಿಸುವದೇ ಕಡಮೆ ಮಾಡಿದ್ದರು.

Advertisements
Advertisements

ಅದು ಆ ಎಲ್ಲಾ ಧಾರವಾಹಿಗಳನ್ನು ಬದಿಗೆ ಸರಿಸಿ ಹೆಚ್ಚಿನ ಟಿ.ಆರ.ಪಿ. ಯನ್ನು ಸಹ ಗಳಿಸಿತ್ತು. ಸಿನಿಮಾಗಳಂತೆ ಈ ಧಾರವಾಹಿ ಎಲ್ಲರ ಮನೆ ಮಾತಾಗಿತ್ತು. ಕಾರಣ ನಟ ಅನಿರುದ್ಧ್ ಅವರ ನಟನೆ ಅಷ್ಟರಮಟ್ಟಿಗೆ ಎಲ್ಲರ ಮನಸ್ಸನ್ನು ಛಾಪು ಮೂಡಿಸಿತ್ತು.ಇದು ಮೊದಲು ಪೋಸಿಟಿವ್ ಪಾತ್ರವಾಗಿತ್ತು. ಆಗ ಎಲ್ಲರೂ ಇದೇ ಧಾರಾವಾಹಿಯನ್ನು ಇಷ್ಟಪಡುತ್ತಿದ್ದರು. ಆದರೆ ತೀರಾ ಇತ್ತೀಚಿಗೆ ಧಾರವಾಹಿಯ ತಿರುವು ಬೇರೆಬೇರೆಯಾಯಿತು. ಅಲ್ಲಿ ನಟ ಅನಿರುದ್ಧ ಅವರ ಪಾತ್ರ ಇದ್ದಕ್ಕಿದ್ದಂತೆ ನೆಗೆಟಿವ್ ಆಗಿ ಬದಲಾಯಿತು. ಈ ಮೊದಲು ಅನಿರುದ್ಧ ಅವರನ್ನು ಫಾಸಿಟಿವ್ ಆಗಿ ನೋಡಿದ ಪ್ರೇಕ್ಷಕರು ಅದ್ಯಾಕೋ ನೆಗೆಟಿವ್ ಪಾತ್ರದಲ್ಲಿ ನೋಡಲು ಇಷ್ಟಪಡಲಿಲ್ಲ. ಹೀಗಾಗಿ ಧಾರಾವಾಹಿಯನ್ನು ನೋಡುವವರ ಸಂಖ್ಯೆ ಕಡಿಮೆ ಆಯಿತು. ಇದರ ಟಿಆರ್ಪಿ ಕೂಡ ಕಡಿಮೆಆಗತಾ ಬಂತು.

ಆಗಲೇ ಈ ಧಾರವಾಹಿಯ ನಿರ್ದೇಶಕರಿಗೂ ಹಾಗೂ ನಟ ಅನಿರುದ್ಧ ಅವರಿಗೂ ಕೂಡ ಒಳ ಜಗಳಗಳು ಪ್ರಾರಂಭವಾದ. ನಿರ್ದೇಶಕರಾದ ಆರೂರು ಜಗಧೀಶ್ ಅವರು ಹೇಳುವಂತೆ ನಟ ಅನಿರುದ್ಧ ಅವರಿಗೆ ತನ್ನಿಂದಲೇ ಧಾರಾವಾಹಿ ನಡೆಯುತ್ತಿದೆ ಎನ್ನುವ ಮನೋಭಾವನೆ ಬೆಳೆದಿದೆ. ಈ ಸ್ಕ್ರೀಟ್ ಸರಿಯಾಗಿಲ್ಲ ಎಂದು ನಮಗೆ ಬುದ್ಧಿವಾದ ಹೇಳುವ ಮಟ್ಟಿಗೆ ಅವರು ಬೆಳೆದಿದ್ದಾರೆ. ಆದ್ದರಿಂದ ಜಗಳಗಳು ಆರಂಭವಾಗಿ ಅವರನ್ನು ಧಾರಾವಾಹಿ ಇಂದ ಕೈಬಿಡಲಾಯಿತು ಎನ್ನುತ್ತಿದ್ದಾರೆ.
ನಟ ಅನಿರುದ್ಧ ಅವರು ಹೇಳುವಂತೆ ನನಗು ಸಿನಿಮಾದ ನಂಟಿದೆ. ಈ ಮೊದಲು ನನ್ನ ಫಾಸಿಟಿವ್ ಆಗಿ ತೋರಿಸುವುದಾಗಿ ಹೇಳಿದರು.ಅದಕ್ಕೆ ನಾನು ಧಾರಾವಾಹಿ ಮಾಡಲು ಒಪ್ಪಿಕೊಂಡಿದ್ದೆ. ಆದರೆ ಇತ್ತೀಚೆಗೆ ಸಡನ್ನಾಗಿ ಅವರು ನೀಡಿತು ಪಾತ್ರಕ್ಕೆ ಬದಲಾಯಿಸಿದರು.

ಅದು ಅಲ್ಲದೆ ನನ್ನ ಜಾಗಕ್ಕೆ ಮತ್ತೊಬ್ಬ ನಟನನ್ನು ಮೊದಲೇ ಗೊತ್ತು ಮಾಡಿಕೊಂಡಿದ್ದರು. ಇದೆ ಕಾರಣದಿಂದ ನನಗೆ ಘಟನೆ ವೇಳೆ ಕಿರಿಕಿರಿ ಮಾಡಿದರು ಎಂದು ಹೇಳುತ್ತಿದ್ದಾರೆ. ಈ ಕಾರಣದಿಂದ ಈ ಧಾರಾವಾಹಿ ನಾನು ಹಿಂದೆ ಸರಿಯಬೇಕು ಬಂತು ಎಂದರು.
ನಿರ್ದೇಶಕರಾದ ಆರೂರು ಜಗದೀಶ್ ಅವರು ಹಾಗೂ ನಟ ಅನಿರುದ್ಧ ಅವರು ಕುಳಿತು ಮಾತನಾಡಿಕೊಂಡರೆ ಸಣ್ಣ ಜಗಳ ಕೂಡ ಬಗೆಹರಿಯುತಿತ್ತು. ಆದ್ರೆ, ಇದು ವಿಕೋಪಕ್ಕೆ ತಿರುಗಿದ್ದು ಧಾರಾವಾಹಿ ಇಂದಲೇ ನಟ ಅನಿರುದ್ಧ ಅವರನ್ನು ಕೈಬಿಟ್ಟಿದ್ದು ಅಲ್ಲದೆ ಅವರನ್ನು ಬೇರೆ ಯಾವ ಧಾರಾವಾಹಿಯನ್ನೂ ಭಾಗವಹಿಸುವಂತೆ ವರ್ಷ ನಿರ್ಬಂಧ ಹೇರಿದ್ದಾರೆ. ಇದು ಸರಿಯಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.


ಇದೀಗ ಜೊತೆ ಜೊತೆಯಲ್ಲಿ ಧಾರಾವಾಹಿಯ ಅನಿರುದ್ಧ್ ಪಾತ್ರದಲ್ಲಿ ಸಿನಿಮಾ ನಟ ವಿಜಯ ರಾಘವೇಂದ್ರ ಅವರು ಬರುತ್ತಿದ್ದಾರೆ. ಹೌದು.. ಇತ್ತೀಚಿಗೆ ಅವರು ನಟಿಸಿದ ಯಾವ ಒಂದು ಸಿನಿಮಾ ಕೂಡ ಅಷ್ಟೊಂದು ಹೆಸರನ್ನು ಮಾಡುತ್ತಿಲ್ಲ. ಈ ಕಾರಣದಿಂದಾಗಿ ವಿಜಯರಾಘವೇಂದ್ರ ಅವರು ಇದೀಗ ಧಾರಾವಾಹಿ ಯತ್ತ ಮುಖ ಮಾಡಿದ್ದಾರೆ. ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಜೊತೆ ಜೊತೆಯಲಿ ಧಾರವಾಹಿಯ ಪ್ರೇಕ್ಷಕರು ಹೇಗೆ ಇವರನ್ನು ಸ್ವೀಕಾರ ಮಾಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.