ನಮಸ್ಕಾರ ವೀಕ್ಷಕರೆ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ಕನ್ನಡ ಕಿರುತೆರೆ ಲೋಕದಲ್ಲಿ ಸಾಕಷ್ಟು ಧಾರಾವಾಹಿಗಳು ಹೊಚ್ಚಹೊಸ ಕಥೆಯ ಮೂಲಕ ಪ್ರೇಕ್ಷಕರ ಮನೆ ಬಾಗಿಲಿಗೆ ತಲುಪಿದೆ ಕಳೆದ ವರ್ಷ ಕಿರುತೆರೆ ಲೋಕದಲ್ಲಿ ಸಹೋದರ-ಸಹೋದರಿಯ ಸಂಬಂಧವನ್ನು ಸಾರುವ ಅಣ್ಣ-ತಂಗಿ ಧಾರಾವಾಹಿಯು ಪ್ರಸಾರವಾಗಿತ್ತು ತುಳಸಿ ಮತ್ತು ಶಿವರಾಜು ಈ ಧಾರವಾಹಿಯ ಮುಖ್ಯ ಪಾತ್ರಗಳಾಗಿವೆ ಹೌದು ಈ ದಾರವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದ ನಟಿ ಮಾನ್ಸಿ ಜೋಶಿ ಈ ಧಾರಾವಾಹಿಯಿಂದ ಹೊರಬಂದಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ ಕನ್ನಡ ತೆಲುಗು ಹಾಗೂ ತಮಿಳು ಕಿರುತೆರೆ ಲೋಕದಲ್ಲಿ ನಟಿ ಮಾನ್ಸಿಯವರು ಸಕ್ರಿಯರಾಗಿದ್ದಾರೆ ಇನ್ನು ರಾಧಾರಮಣ ಧಾರಾವಾಹಿಯಲ್ಲಿ ರಮಣನ ತಂಗಿಯ ಪಾತ್ರದಲ್ಲಿ ನಟಿಸಿದ್ದರು ಅಂದಹಾಗೆ ಮುಗ್ದೆ ಪಾತ್ರದಲ್ಲಿ ನಟಿಸಿ ಸೈ ಅನಿಸಿಕೊಂಡಿದ್ದ ತದನಂತರದಲ್ಲಿ ಪಾರು ಧಾರವಾಹಿಯಲ್ಲಿ ನೆಗೆಟಿವ್ ರೋಲ್ ನಲ್ಲಿ ನಟಿಸಿದ್ದರು ಇನ್ನು ನಾಯಕಿ ಎಂಬ ಧಾರಾವಾಹಿಯಲ್ಲೂ ಮಾನ್ಸಿ ಜೋಷಿ ನಟಿಸಿದ್ದರು ಅದಾದ ಬಳಿಕ ಕನ್ನಡದ ಕಸ್ತೂರಿ ನಿವಾಸ ಧಾರಾವಾಹಿಯ ತೆಲುಗು ರಿಮೇಕ್ ನಲ್ಲಿ ಮಾನ್ಸಿ ಕಾಣಿಸಿಕೊಂಡಿದ್ದರು..

ಕನ್ನಡ ಮಾತ್ರವಲ್ಲದೆ ತಮಿಳಿನ ಅಮೃತವರ್ಷಿಣಿ ಧಾರಾವಾಹಿಯಲ್ಲೂ ನಟಿಸಿದ್ದಾರೆ ಕೊರೋನಾ ಕಾರಣದಿಂದ ಈ ಧಾರವಾಹಿಯಿಂದ ಅರ್ಧಕ್ಕೆ ಕೈ ಬಿಟ್ಟರು ಇತ್ತೀಚೆಗೆ ನಟಿ ಮಾನ್ಸಿ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಕಾರು ಖರೀದಿ ಮಾಡುವ ಮೂಲಕ ಸುದ್ದಿಯಾಗಿದ್ದಾರೆ ಆಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ಮಾನ್ಸಿ ಹುಟ್ಟು ಹಬ್ಬದ ಪ್ರಯುಕ್ತ ಹೊಸ ಕಾರು ಖರೀದಿಸಿದ್ದೇನೆ ನನ್ನ ಪರಿಶ್ರಮಕ್ಕೆ ಸಿಕ್ಕಿರುವ ಪ್ರತಿಫಲ ಇದು ಅಪ್ಪ ಅಮ್ಮನ ಆಶೀರ್ವಾದಕ್ಕೆ ಧನ್ಯವಾದಗಳು ಅಂತ ತಿಳಿಸಿದ್ದರು ಸಾಕಷ್ಟು ಧಾರವಾಹಿಗಳಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಅಣ್ಣ-ತಂಗಿ ಪಾತ್ರದಲ್ಲಿ ಪಾಸಿಟಿವ್ ರೋಲ್ ನಲ್ಲಿ ಕಾಣಿಸಿಕೊಂಡಿದ್ದರು ಅಂದಹಾಗೆ ಅಣ್ಣ-ತಂಗಿ ಧಾರಾವಾಹಿಯಲ್ಲಿ ಮಾನ್ಸಿ ಸಂಧ್ಯಾ ಎನ್ನುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಆದರೆ ಇದೀಗ ದಿಢೀರ್ ಹೊರಬಂದಿರೋಧು ಅಚ್ಚರಿಗೆ ಕಾರಣವಾಗಿದೆ

ಆದರೆ ನಟಿ ಮಾನ್ಸಿ ಜಾಗಕ್ಕೆ ಮತ್ತೋರ್ವ ನಟಿ ಜೆಸಿಕಾ ಕಾಣಿಸಿಕೊಳ್ಳಲಿದ್ದಾರೆ ಹೌದು ಈ ಬಗ್ಗೆ ಧಾರಾವಾಹಿ ತಂಡ ಯಾವುದೇ ಮಾಹಿತಿ ಹೊರಕೊಟ್ಟಿಲ್ಲ ನಟಿ ಮಾನ್ಸಿ ಅಣ್ಣ-ತಂಗಿಯಿಂದ ಹೊರ ಬಂದಿರೋದು ವೈಯಕ್ತಿಕ ಕಾರಣದಿಂದ ಎನ್ನಲಾಗಿದೆ ಅಂದಹಾಗೆ ಮುಂಬರುವ ದಿನಗಳಲ್ಲಿ ಯಾವ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಕೆರಳಿಸಿದೆ ನಟಿ ಮಾನ್ಸಿ ಅವರು ಮುಂದಿನ ದಿನಗಳಲ್ಲಿ ಯಾವ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಾರ ಎಂದು ಕಾದುನೋಡಬೇಕಾಗಿದೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..