Advertisements

ಬಿಗ್ ಬಾಸ್ ಸ್ಪರ್ಧಿ ಹಾಗೂ ನಟಿ ಅನುಪಮಾ ಗೌಡ ಆ’ತ್ಮಹ’ತ್ಯೆಗೆ ಯತ್ನ.!! ಯಾಕೆ ಗೊತ್ತಾ?

Cinema Entertainment

ನಮಸ್ತೆ ಸ್ನೇಹಿತರೆ ಅನುಪಮಾ ಗೌಡ ಅವರು ಅಕ್ಕ ಎಂಬ ಕನ್ನಡ ಸೀರಿಯಲ್ ಮೂಲಕ ಕಿರುತೆರೆಯ ಪ್ರೇಕ್ಷಕರಿಗೆ ಪರಿಚಯವಾದರು. ಇವರು ಅಕ್ಕ ಸೀರಿಯಲ್ ನಲ್ಲಿ ಡಬಲ್ ರೋಲ್ ಮಾಡುವುದರ ಮೂಲಕ ಪ್ರೇಕ್ಷಕರ ಮನಗೆದ್ದರು. ನಂತರ ಕನ್ನಡದ ಬಿಗ್ ಬಾಸ್ ಸೀಸನ್ ೫ರಲ್ಲಿ ಭಾಗವಹಿಸಿ ಎಲ್ಲಾ ಪ್ರೇಕ್ಷಕರ ಮನೆ ಮಾತಾದರು.
ಇತ್ತೀಚಿಗೆ ರಿಲೀಸಾದ ‘ಆ ಕ’ರಾಳ ರಾತ್ರಿ’ ಎಂಬ ಕನ್ನಡದ ಚಿತ್ರದಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ಕನ್ನಡ ಸಿನಿರಂಗಕ್ಕೆ ಗ್ರಾಂಡ್ ಎಂಟ್ರಿ ನೀಡಿದರು. ಇವರು ‘ತ್ರಯಂಬಕಂ’ ಎಂಬ ಚಿತ್ರದಲ್ಲಿ ರಾಘವೇಂದ್ರ ರಾಜ್ ಕುಮಾರ್ ಜೊತೆ ಕೂಡ ತೆರೆಯನ್ನು ಹಂಚಿಕೊಂಡಿದ್ದಾರೆ. ಸುವರ್ಣ ಟಿವಿಯಲ್ಲಿ ಪ್ರಸಾರವಾಗುವ ‘ಮಜಾ ಭಾರತ’ ದಲ್ಲಿ ಸಹ ನಿರೂಪಕಿ ಆಗಿದ್ದರು.

Advertisements
Advertisements

ಸದ್ಯ ನಿರುಪಮಾ ಗೌಡ ಅವರು ‘ರಾಜಾ- ರಾಣಿ’ ಎಂಬ ಕನ್ನಡದ ಶೋನಲ್ಲಿ ನಿರೂಪಣೆ ಮಾಡುತ್ತಿದ್ದಾರೆ. ಈ ಶೋ 12 ಜೋಡಿಗಳ ಮಧ್ಯೆ ನಡೆಯುವ ಶೋ ಆಗಿದೆ. ಇತರ ರಿಯಾಲಿಟಿ ಶೋಗಳಿಗಿಂತ ‘ರಾಜಾ ರಾಣಿ’ ಶೋ ತುಂಬ ಡಿಫರೆಂಟ್ ಆಗಿದೆ. ಅನುಪಮಾ ಅವರಿಗೆ ಈ ಹಿಂದೆ ಬಿಗ್‌‌‌ಬಾಸ್‌ ಕಾರ್ಯಕ್ರಮದಲ್ಲಿ ಎಲ್ಲಾ ಬಿಗ್ ಬಾಸ್ ಮನೆಯ ಕುಟುಂಬದವರಿಗೆ ತಮ್ಮ ಜೀವನದಲ್ಲಿ ನಡೆದಿದ್ದ ಘಟನೆ ಹಾಗೂ ಅದು ಯಾರಿಗೂ ತಿಳಿಯದೆ ಇಲ್ಲಿಯವರೆಗೂ ಇರುವ ರಹಸ್ಯವನ್ನು ಹಂಚಿಕೊಳ್ಳುವ ವಿಶೇಷ ಟಾಸ್ಕನ್ನು ನೀಡಿದ್ದರು. ಆ ಟಾಸ್ಕನ ಅನುಸರಿಸಿ ಎಲ್ಲಾ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದಿದ್ದ ರಹಸ್ಯ ಕಥೆಗಳನ್ನು ಬಿಗ್ ಬಾಸ್ ಕ್ಯಾಮರಾ ಮುಂದೆ ಬಿಚ್ಚಿಡಬೇಕಾಗಿತ್ತು.

ಅದರಂತೆ ಬಿಗ್ ಬಾಸ್ ಕೆಮರಾ ಮುಂದೆ ನಿಂತು ಅನುಪಮಾ ನಾನು ಹಿಂದೆ ಆತ್ಮಹತ್ಯೆಗೆ ಶರಣಾಗಲು ಯತ್ನಿಸಿದ್ದೆ ಎಂದು ರಹಸ್ಯವನ್ನು ಎಲ್ಲರ ಮುಂದೆ ಹೇಳಿಕೊಂಡರು. ‘ಅಕ್ಕ’ ಸೀರಿಯಲ್ ಮೂಲಕ ಮನೆ ಮಾತಾಗಿ, ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಅನುಪಮಾ ಹಲವು ವರ್ಷದ ಹಿಂದೆ ಆ’ತ್ಮಹ’ತ್ಯೆ ಮಾಡಿಕೊಳ್ಳಲು ಪ್ರಯತ್ನ ಮಾಡಿದ್ದಾರಂತೆ. “2 ವರ್ಷದ ಹಿಂದೆ ಕೆಲವು ಕಾರಣಗಳಿಂದಾಗಿ ನನ್ನ ಮನ ನೊಂದು ಬಹಳ ಸಂಕಟವನ್ನು ಅನುಭವಿಸಿದ್ದೆ, ನಾನು ತುಂಬಾ ನಿರಾಸೆಗೊಂಡಿದ್ದ ನನ್ನ ಬಳಿ ಯಾರೂ ಇಲ್ಲ, ಏನೂ ಇಲ್ಲ ಎಂದು ಅಂದುಕೊಂಡಿದ್ದೆ. ಆಗ ನಾನು ಬದುಕುವುದು ವ್ಯರ್ಥ ಎಂದು ನಿರ್ಧಾರಿಸಿ ನಿದ್ದೆ ಮಾತ್ರೆಗಳನ್ನು ನುಂಗಿ ಆ’ತ್ಮಹ’ತ್ಯೆಗೆ ಪ್ರಯತ್ನಿಸಿದ್ದೆ. ನಾನು ಆ’ತ್ಮಹ’ತ್ಯೆಗೆ ಪ್ರಯತ್ನ ಮಾಡಿದಾಗ ನೇಹಾ ನನ್ನ ಜೊತೆಗೆ ಇಡೀ ದಿನ ಇದ್ದು ಕೊನೆಗೆ ನನ್ನ ಜೀವವನ್ನು ಉಳಿಸಿದಳು, ಆಕೆ ನನ್ನನ್ನು ಪ್ರೀತಿಯಿಂದ ನೋಡಿಕೊಂಡಳು. ಆಕೆಯಿಂದ ನನಗೆ ಪುನರ್ಜನ್ಮ ಲಭಿಸಿದೆ. ಹೀಗಾಗಿ ನನಗೆ ನೇಹಾ ಅಂದರೆ ತುಂಬಾ ಇಷ್ಟ.

“ ನಾನು ಆಗ ಇದ್ದ ರೀತಿಯಲ್ಲಿ ಈಗ ಇಲ್ಲ. ಮನಸ್ಸನ್ನು ತುಂಬಾ ಸ್ಟ್ರಾಂಗ್ ಆಗಿ‌ ಬದಲಾಯಿಸಿಕೊಂಡಿದ್ದೇನೆ, ಈಗ ನಾನು ಸಣ್ಣ ಪುಟ್ಟ ವಿಷಯಕ್ಕೆಲ್ಲ ಹತಾಶೆಗೊಳ್ಳೋದಿಲ್ಲ. ನನ್ನನ್ನು ನಾನೇ ಇಷ್ಟಪಡಲು ಶುರು ಮಾಡಿದ್ದೇನೆ.. ಇದೇ ನನ್ನ ಜೀವನದ ರಹಸ್ಯ” ಎಂದು ಅನುಪಮಾ ಗೌಡ ಬಿಗ್ ಬಾಸ್ ಕ್ಯಾಮೆರಾ ಮುಂದೆ ಹೇಳಿಕೊಂಡಿದ್ದಾರೆ. ಅನುಪಮ ಗೌಡ ಅವರ ಬಗ್ಗೆ ನಿಮ್ಮ ಅನಿಸಿಕೆ ಏನು ಸ್ನೇಹಿತರೆ. ಕಮೆಂಟ್ ಮಾಡಿ ತಿಳಿಸಿ.