ಕನ್ನಡದಲ್ಲಿ ನಟಿಸದಿದ್ದರು ಕನ್ನಡದ ಬಗ್ಗೆ ಪ್ರೀತಿಯನ್ನು ಹೊಂದಿರುವ ನಟಿ ಅನುಷ್ಕಾ ಶೆಟ್ಟಿ . ರಶ್ಮಿಕ ಮಂದಣ್ಣ ಹಾಗೂ ದೀಪಿಕಾ ಪಡುಕೋಣೆ ತರಹ ಹುಡುಗಿಯಲ್ಲ. ಹಾಗೆ ತನ್ನ ವೈಯಕ್ತಿಕ ವಿಷಯಗಳ ಬಗ್ಗೆ ಅನುಷ್ಕಾ ಶೆಟ್ಟಿ ಮಾತನಾಡುವುದು ತುಂಬಾ ಕಡಿಮೆ.ಆದರೆ ಇದೆ ಮೊದಲ ಬಾರಿಗೆ ತಮ್ಮ ಅಂತರಾಳದ ಬಗ್ಗೆ ಮಾತನಾಡಿದ್ದು. ತನ್ನ ಮೊದಲ ಕ್ರಶ್ ಯಾರ ಮೇಲೆ ಆಗಿದ್ದು ಎಂಬ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ ಅನುಷ್ಕಾ ಶೆಟ್ಟಿ. ಇತ್ತೀಚೆಗೆ ಮಾತೃಭಾಷೆಯಲ್ಲಿ ತಾಯಿ ಹುಟ್ಟುಹಬ್ಬಕ್ಕೆ ಶುಭಾಶಯ ತಿಳಿಸಿ ನನ್ನ ಹೃದಯದ ಭಾಷೆ ಯಾವತ್ತಿದ್ರೂ ಕನ್ನಡ ಎಂದು ತೋರಿಸಿದ್ದಾರೆ . ಬೆರಳೆಣಿಕೆಯಷ್ಟು ಚಿತ್ರಗಳನ್ನು ಮಾಡಿರುವ ರಶ್ಮಿಕ ಮಂದಣ್ಣ ಹಾಗೂ ತನಗಿರುವ ವ್ಯತ್ಯಾಸ ಏನೂ ಎಂಬುವುದನ್ನು ತೋರಿಸಿದರು ಅನುಷ್ಕಾ ಶೆಟ್ಟಿ. ಒಂದು ಸಂದರ್ಶನ ನೀಡುವ ಸಮಯದಲ್ಲಿ ಅಭಿಮಾನಿಯೊಬ್ಬ ನಿಮ್ಮ ಮೊದಲ ಕ್ರಶ್ ಯಾರ ಮೇಲೆ ಆಗಿದ್ದು ಎಂದು ಅನುಷ್ಕಾ ಶೆಟ್ಟಿಯನ್ನು ಕೇಳಿಯೇಬಿಟ್ಟ.

ಅದಕ್ಕೆ ಉತ್ತರಿಸಿದ ಅನುಷ್ಕ ನನಗೆ ಮೊದಲು ವಿಪರೀತ ಕ್ರಶ್ ಆಗಿದ್ದು ರಾಹುಲ್ ದ್ರಾವಿಡ್ ಮೇಲೆ ಎಂದು ಹೇಳಿದರು. ರಾಹುಲ್ ದ್ರಾವಿಡ್ ಅವರಲ್ಲಿರುವ ತಾಳ್ಮೆ ನಡುವಳಿಕೆ ಬ್ಯಾಟಿಂಗ್ ಮಾಡುವ ವಿಧಾನ ನಾಯಕತ್ವದ ಗುಣಗಳನ್ನು ನೋಡಿ ಹುಚ್ಚು ಹಿಡಿಯುವಷ್ಟು ಅವರನ್ನ ಇಷ್ಟಪಟ್ಟಿದ್ದರಂತೆ ಅನುಷ್ಕಾ. ದ್ರಾವಿಡ್ ಅಂದರೆ ಎಲ್ಲಿಲ್ಲದ ಪ್ರೀತಿ ಅನುಷ್ಕಾ ಅವರಿಗೆ ಇತ್ತಂತೆ. ಆದರೆ ದ್ರಾವಿಡ್ಗೆ ಆಗಾಗಲೇ ಮದುವೆಯಾಗಿತ್ತು ಅಂದುಕೊಳ್ಳಿ. ಎರಡು ಭಾಷೆಗಳಲ್ಲಿ ನಂಬರ್1 ನಟಿಯಾಗಿ ಮಿಂಚಿ ಹೆಚ್ಚು ಸಂಭಾವನೆ ಪಡೆದರು ಯಾವತ್ತು ಕಾಂಟ್ರವರ್ಸಿ ಮಾಡಿಕೊಂಡವರಲ್ಲ ಅನುಷ್ಕಾ ಶೆಟ್ಟಿ . ಒಂದು ದಿನ ಬಾಹುಬಲಿ ಚಿತ್ರವನ್ನು ಹೈದರಾಬಾದ್ ಅಲ್ಲಿ ಕೂತು ಸೋಶಿಯಲ್ ಮೀಡಿಯಾದಲ್ಲಿ ಪ್ರಮೋಷನ್ ಮಾಡುತ್ತಿದ್ದರು ಅನುಷ್ಕ ಮತ್ತು ಪ್ರಭಾಸ್..
ಒಬ್ಬ ಅಭಿಮಾನಿ ಕನ್ನಡದಲ್ಲಿ ಯಾವಾಗ ನಟಿಸುತ್ತೀರಾ ಎಂಧು ಕೇಳಿದಾಗ ಕನ್ನಡದಲ್ಲೆ ಉತ್ತರಿಸಿದ ಅನುಷ್ಕಾ ಶೆಟ್ಟಿ. ನನಗೆ ಒಂದು ಕಥೆ ಸಿಕ್ಕರೆ ಖಂಡಿತ ಮಾಡುವ ಆಸೆ ನನಗೂ ಇದೆಯೆಂದು ಹೇಳಿದರು. ಸಡನ್ ಆಗಿ ಅನುಷ್ಕ ಶೆಟ್ಟಿ ಕನ್ನಡದಲ್ಲಿ ಮಾತನಾಡಿದ್ದನ್ನು ನೋಡಿ ಪ್ರಭಾಸ್ ಕೂಡ ಆಶ್ಚರ್ಯಪಟ್ಟರು. ಇದು ಮಾತೃಭಾಷೆಯನ್ನು ಉಳಿಸುವ ಬೆಳೆಸುವ ವಿಧಾನ ಕನ್ನಡ ಚಿತ್ರದಲ್ಲಿ ಅವಕಾಶ ಪಡೆದು ಅಲ್ಲಿಂದ ಬೆಳೆದ ದೀಪಿಕಾ ಪಡುಕೋಣೆ ಮತ್ತು ರಶ್ಮಿಕ ಮಂದಣ್ಣ ಯಾವತ್ತು ಕನ್ನಡಿಗರಿಗೆ ಹೆಮ್ಮೆ ಆಗುವಂತೆ ನಡೆದುಕೊಳ್ಳಲಿಲ್ಲ. ಅವರ ಬಗ್ಗೆ ಯಾಕೆ ಬಿಡಿ ನಿಮ್ಮ ಇಂಟರ್ನೆಟ್ ಕೂಡ ವೇಸ್ಟ್ ಆಗುತ್ತೆ. ಏನೇ ಆದರೂ ತಾಯಿಯನ್ನು ತಾಯಿ ಭಾಷೆಯನ್ನು ಮರೆತವರು ಉದ್ದಾರಾದ ನಿದರ್ಶನಗಳು ಈ ಪ್ರಪಂಚದಲ್ಲಿಯೆ ಇಲ್ಲ ಅಲ್ಲವೆ..