Advertisements

ನಿರೂಪಣೆಯಲ್ಲಿ ಅನುಶ್ರೀಯನ್ನು ಹಿಂದಿಕ್ಕಿದ ಮೋಹಕ ಸುಂದರಿ ಶ್ವೇತಾ ಚೆಂಗಪ್ಪ! ನಿರೂಪಣೆಗೆ ಪಡೆಯುತ್ತಿರುವ ಸಂಭಾವನೆ ಅದೆಷ್ಟು ಗೊತ್ತಾ?

Kannada News

ನಮಸ್ಕಾರ ಪ್ರಿಯ ವೀಕ್ಷಕರೆ ಮನುಷ್ಯನಿಗೆ ದುಡಿಮೆಯ ಜೊತೆ ಸ್ವಲ್ಪ ಕಾಲ ಮನರಂಜನೆ ಬೇಕು. ಸಿನೆಮಾ, ಸಿರಿಯಲ್ , ರಿಯಾಲಿಟಿ ಶೋ, ಇನ್ನಿತರ ಕಾರ್ಯಕ್ರಮಗಳು ಜನರಿಗೆ ಮತ್ತಷ್ಟು ಉತ್ಸಾಹ ಆನಂದವನ್ನು ತಂದು ಕೊಡುತ್ತವೆ. ಇತ್ತಿಚಿಗಂತು ಸಿನೆಮಾಗಳಿಗಿಂತ ಹೆಚ್ಚಾಗಿ ರಿಯಾಲಿಟಿ ಶೋಗಳು ಹೆಚ್ಚು ಪ್ರಸಿದ್ದಿ ಪಡೆದಿವೆ. ಉದಾಹರಣೆಗೆ ಹೇಳಬೇಕೆಂದರೆ ಬಿಗ್ ಬಾಸ್ ಶೊ…. ಇನ್ನು ಕಾರ್ಯಕ್ರಮಗಳು ಹಿಟ್ ಆಗಲಿಕ್ಕೆ ಕಾರ್ಯಕ್ರಮದ ಆಯೋಜನೆಯ ಜೊತೆಗೆ ಕಾರ್ಯಕ್ರಮದ ನಿರೂಪಕರ ಶ್ರಮವು ಅಷ್ಟೆ ಇರುತ್ತದೆ. ಇನ್ನು ನಿರೂಪಕರ ವಿಷಯಕ್ಕೆ ಬಂದರೆ ಮಾತಿನ ಮೂಲಕ ಜನರ ಮನಗೆದ್ದು, ಅಂದು ಇಂದು ಮುಂದೆ ಯಾವಾಗಲು ಸದಾ ಮಾತಾನಾಡುತ್ತಲೆ ಎಲ್ಲರ ಹೃದಯ ಗೆದ್ದ ಖ್ಯಾತ ನಿರೂಪಕಿ ಎಂದರೆ ಅನುಶ್ರೀ.

Advertisements
Advertisements

ಹೌದು ಕನ್ನಡ ಕಿರುತೆರೆಯ ಯಾವುದೇ ರಿಯಾಲಿಟಿ ಶೋ ಆಗಲಿ ಅಥವಾ ಜೀ ವಾಹಿನಿಯಲ್ಲಿ ಪ್ರಸಾರವಾಗುವ ಎಲ್ಲಾ ಕಾರ್ಯಕ್ರಮಗಳಲ್ಲಿಯೂ ಹೆಚ್ಚು ಕಡಿಮೆ ಅನುಶ್ರೀ ಅವರ ನಿರೂಪಣೆ ಇದ್ದೇ ಇರುತ್ತೆ. ಇನ್ನು ಸಿನಿಮಾ ಇಂಡಸ್ಟ್ರಿಯಲ್ಲಿ ಸಿನಿಮಾ ಇವೆಂಟ್ ಗಳು ನಡದರು ಅಲ್ಲಿಯೂ ಕೂಡ ಅನುಶ್ರೀ ಅವರದ್ದೇ ಮಾತುಗಾರಿಕೆ! ಒಟ್ಟಾರೆಯಾಗಿ ಹೇಳುವುದಾದರೆ ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಹಾಗೂ ಕಿರುತೆರೆ ಲೋಕದಲ್ಲಿ ನಂಬರ್ ಒನ್‌ ನಿರೂಪಕಿ ಎಂದರೆ ಅದು‌ ಅನುಶ್ರೀ ಮಾತ್ರ. ಆದರೆ ಸಮಯ ಹೇಗೆ ಸರಿಯುತ್ತೆ, ಯಾರ ಸ್ಥಾನಕ್ಕೆ ಯಾರು ಬೇಕಾದರು ಬರಬಹುದು ಎಂಬುವುದಕ್ಕೆ ಈಗ ಅನುಶ್ರೀ ಅವರೆ ಉದಾಹರಣೆ. ಹೌದು ಇಡೀ ಕನ್ನಡ ಇಂಡಸ್ಟ್ರಿ ಯಲ್ಲಿ ಆ್ಯಂಕರ್ ಆದ ಅನುಶ್ರೀ ಅವರ ಧ್ವನಿ ಮಾಧುಯ್ರ್ಯದಿಂದ ಗುರುತಿಸಿಕೊಂಡವರು ಆದರೆ ಈಗ ಅವರಿಗೆ ಸರಿ ಸಾಟಿಯಾಗಿ, ನಿಲ್ಲಲು ಮತ್ತೊಬ್ಬ ನಿರೂಪಕಿ‌ ರೆಡಿಯಾಗಿದ್ದಾರೆ..

ಅವರು ಯಾರು ಅಂತೀರಾ ಹಾಗಿದ್ದರೆ ಈ ಸ್ಟೋರಿನಾ ಪೂರ್ತಿಯಾಗಿ ಓದಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ‌ಶೇರ್ ಮಾಡಿ…ಮಧುರ ಮಾತು, ಮುಗುಳು ನಗೆ, ಮಾತಿನಲ್ಲೆ ಮನ ಮುಟ್ಟುವ ಮಾತುಗಾರಿಗೆ ಇರುವ ನಿರೂಪಕಿ ಎಂದರೆ ಅನುಶ್ರೀ ಆದರೆ ಈಗ ಅವರಿಗೆ ಸವಾಲಾಗುವಂತೆ ಮತ್ತೊಬ್ಬ ನಿರೂಪಕಿ ರೆಡಿಯಾಗಿದ್ದಾರೆ ಎಂಬ ಮಾತುಗಳು ಆಗಾಗ ಕೇಳಿಬರುತ್ತಿವೆ. ಹೌದು ಅನುಶ್ರೀಗೆ ಪೈಪೋಟಿ ಮಾಡಲು ರೆಡಿಯಾದ ನಿರೂಪಕಿ ಬೇರೆ ಯಾರು ಅಲ್ಲ ಹಲವು ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಬ್ಯುಟಿಫುಲ್ ಮುಮೆನ್ ಶ್ವೇತಾ ಚೆಂಗಪ್ಪ.

ಮೂಲತ ಕೊಡಗಿನವರಾದ ಶ್ವೇತಾ ಚಂಗಪ್ಪ ಅವರು ಈಗಾಗಲೆ ಕನ್ನಡ ಚಲನಚಿತ್ರ ರಂಗದಲ್ಲಿ ಸಾಕಷ್ಟು ಹೆಸರು ಗಳಿಸಿಕೊಂಡಿದ್ದಾರೆ. ಧಾರಾವಾಹಿಗಳಲ್ಲಿ ಕೂಡ ನಟಿಸಿರುವ ಶ್ವೇತಾ ಚಂಗಪ್ಪ ತಂಗಿಗಾಗಿ, ವರ್ಷ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ ಕನ್ನಡದ ದಿಗ್ಗಜ ನಟರಾದ ವಿಷ್ಣುವರ್ಧನ್ ಹಾಗೂ ಶಿವರಾಜ್ ಕುಮಾರ್ ಮೊದಲಾದವರು ಜೊತೆ ಅಭಿನಯಿಸಿ ಸೈ ಎನಿಸಿಕೊಂಡವರು. ಇನ್ನು ಶ್ವೇತ ಚಂಗಪ್ಪ ಹಲವು ರಿಯಾಲಿಟಿ ಶೋ ಗಳಲ್ಲಿಯೂ ಕೂಡ ಭಾಗವಹಿಸಿದ್ದಾರೆ.ಅಪಾರ ಜನಮನ್ನಣೆಯನ್ನು ಪಡೆದಿದ್ದಾರೆ. ಶ್ವೇತಾ ಅವರು ತಂಗಿಗಾಗಿ ಇನ್ನು ಹಲವು ಸಿನೆಮಾಗಳಲ್ಲಿ ನಟಿಸಿ ಸಿನಿ ದಿಗ್ಗಜರುಗಳಿಂದ ಮೆಚ್ಚುಗೆ ಪಡೆದುಕೊಂಡವರು.

ಶೇತಾ ಕೇಲವ ನಟನೆ ಮಾತ್ರವಲ್ಲದೆ ತಮ್ಮ ದೇಹ ಹಾಗೂ ಸೌಂದರ್ಯದ ‌ಕಾಳಜಿ ಜೊತೆಗೆ ಅವರು ಒಳ್ಳೆಯ ನೃತ್ಯಗಾರ್ತಿ ಆಗಿದ್ದಾರೆ. ಅದಷ್ಟೆ ಅಲ್ಲದೆ ಅವರಿಗೆ ಮದುವೆಯಾಗಿ ಮುದ್ದಾದ ಮಗು ಒಂದಿದೆ. ಶ್ವೇತಾ ಚಂಗಪ್ಪ ಕನ್ನಡಿಗರಿಗೆ ಮತ್ತಷ್ಟು ಹತ್ತಿರವಾದುದು ಅವರು ಸೃಜನ ಲೋಕೆಶ ಅವರ ಮಜಾ ಟಾಕೀಸ್ ನಲ್ಲಿ ಕಾಣಿಸಿಕೊಂಡಾಗ.ಕಾಮಿಡಿಯನ್‌ ಆಗಿ ನಮ್ಮನ್ನೆಲ್ಲ‌ ನಗಿಸಿರೊದು ಮರೆಯುವ ಹಾಗಿಲ್ಲ.

ಇನ್ನು ನಟಿಯಾದರು ಇವರಿಗೆ ನಿರೂಪಣೆ ಎಂದರೆ ಹೆಚ್ಚಿನ ಆಸಕ್ತಿ. ಹೀಗಾಗಿ ಶ್ವೇತ ಚಂಗಪ್ಪ ಅವರು ಸಾಕಷ್ಟು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿದ್ದಾರೆ. ಈಗಷ್ಟೆ ಹಿಂದೆ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಯಾರಿಗುಂಟು ಯಾರಿಗಿಲ್ಲ, ಕುಣಿಯೋಣು ಬಾರ ರಿಯಾಲಿಟಿ ಶೋಗಳನ್ನು ಹಾಗೂ ಸ್ಟಾರ್ ಸುವರ್ಣ ವಾಹಿನಿಯ ಡಾನ್ಸ್ ಜೂನಿಯರ್ಸ್ ಶೋವನ್ನು ಶ್ವೇತಾ ಚೆಂಗಪ್ಪ ನಡೆಸಿಕೊಟ್ಟಿದ್ದರು. ಅವರ ನಿರೂಪಣೆ ಅನೇಕರ ಗಮನ ಸೆಳೆದಿತ್ತು. ಅದರಂತೆ ಅವರು ತಮಗೆ ಅವಕಾಶ ಸಿಕ್ಕಾಗಲೆಲ್ಲ ನಿರೂಲಣೆಯನ್ನು‌ ಮಾಡುತ್ತಾರೆ.

ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೋಡಿ ನಂಬರ್ 1 ಕಾರ್ಯಕ್ರಮದ ನಿರೂಪಕಿಯಾಗಿ ಶ್ವೇತಾ ಚಂಗಪ್ಪ ಕಾರ್ಯನಿರ್ವಹಿಸುತ್ತಿದ್ದಾರೆ. ನಟಿ ಹಾಗೂ ಕನ್ನಡದ ಅತ್ಯುತ್ತಮ ನಟಿ ಎನಿಸಿಕೊಂಡಿರುವ ಶ್ವೇತಾ ಚಂಗಪ್ಪ ಅವರು ಇದೀಗ ಅನುಶ್ರೀ ಅವರನ್ನು ಮೀರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಶ್ವೇತಾ ಚಂಗಪ್ಪ ಅವರ ನಿರೂಪಣೆ ಜನರಿಗೆ ಬಹಳ ಇಷ್ಟವಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ‌ ಅಭಿಪ್ರಾಯಗಳನ್ನು ಹಂಚಿಕೊಳ್ಳಿತ್ತಿದ್ದಾರೆ.

ಕೇವಲ ನಿರೂಪಣೆ ಮಾತ್ರವಲ್ಲದೆ ಶ್ವೇತಾ ಚೆಂಗಪ್ಪ ಅನುಶ್ರೀ ಅವರಿಗಿಂತ ಹೆಚ್ಚಿನ ಸಂಭಾವನೆ ಪಡೆಯುತ್ತಾರೆ ಎಂಬ ಮಾತುಗಳು ಸಹ ಹರಿದಾಡುತ್ತಿವೆ. ಇಷ್ಟು ದಿನ ನಿರೂಪಣೆ ಎಂದರೆ ಅನುಶ್ರೀ ಹಾಗೂ ಅನುಶ್ರೀ ಎಂದರೆ ನಿರೂಪಣೆ ಅಂತ ಅನಿಸುತ್ತಿತ್ತು ಆದರೆ ನಿಧಾನವಾಗಿ ಶ್ವೇತಾ ಚೆಂಗಪ್ಪ ಅವರು ಸಹ ನಿರೂಪಕಿ ಸ್ಥಾನವನ್ನು ಪಡೆದುಕೊಳ್ಳುತ್ತಿದ್ದಾರೆ.