ನಮಸ್ಕಾರ ವೀಕ್ಷಕರೆ ಡಾಕ್ಟರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೆ ತಕ್ಕ ಮಗಳು ಎನಿಸಿಕೊಂಡ ವಂದಿತಾ ತನ್ನ ತಾಯಿ ಅಶ್ವಿನಿ ಮೇಡಮ್ ಅವರಿಗೆ ಏನು ಮಾಡಿದ್ದಾರೆ ಗೊತ್ತಾ ನಿಜಕ್ಕೂ ಶಾಕ್ ಆಗ್ತೀರಾ ಈ ಸಂಪೂರ್ಣ ಮಾಹಿತಿ ಓದಿ ನೋಡಿ
ಹೌದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಹೃದಯಾಘಾತ ಸಮಸ್ಯೆಯಿಂದಾಗಿ ನಮ್ಮೆಲ್ಲರನ್ನು ಅಗಲಿದ ಮೇಲೆ ಸಿನಿಮಾ ಜವಾಬ್ದಾರಿಯ ಜೊತೆಗೆ ಮನೆಯ ಹಾಗೂ ಮಕ್ಕಳ ಜವಾಬ್ದಾರಿಯನ್ನು ಹೊತ್ತಿರುವ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಗಳು ವಂದಿತಾ ಓದುತ್ತಿರುವ ಶಾಲೆಗೆ ಭೇಟಿ ನೀಡಿದ್ದರು ಹೌದು ಅಪ್ಪನಿಗೆ ತಕ್ಕ ಮಗಳು ಎನಿಸಿಕೊಂಡಿರುವ ವಂದಿತಾ ರವರು ಓದಿನಲ್ಲಿ ಬಹಳ ಮುಂದೆ ಇದ್ದು ಹಿರಿಯರ ಕೈಯಲ್ಲಿ ತಾಯಿಗೆ ಸನ್ಮಾನ ಮಾಡಿಸಿದ ಕೀರ್ತಿ ತಂದುಕೊಟ್ಟಿದ್ದಾರೆ,ವಂದಿತ ಹತ್ತನೇ ತರಗತಿಯನ್ನು ಸೋಫಿಯಾ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಮುಗಿಸಿದ್ದು ಮಿನಿ ಗ್ರಾಜುಯೇಷನ್ ಮುಗಿಸಿರುವ ಕಾರಣ ಶಾಲೆಯಲ್ಲಿ ಸಮಾರಂಭ ಮಾಡಲಾಯಿತು ಈ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಸ್ಥರು ದೊಡ್ಮನೆಯ ರಾಜ್ ಕುಟುಂಬದವರು ಆಗಮಿಸಿದ್ದರು..

ಅದರಂತೆ ಮಗಳ ಶೈಕ್ಷಣಿಕ ವಿಷಯದ ಕುರಿತು ಮಾಹಿತಿ ತಿಳಿಯುವ ಸಲುವಾಗಿ ಧೀರೇಂದ್ರ ರಾಮಕುಮಾರ್, ಯುವ ರಾಜ್ ಕುಮಾರ್, ವಿನಯ ರಾಜಕುಮಾರ್, ರಾಘವೇಂದ್ರ ರಾಜಕುಮಾರ್, ಲಕ್ಷ್ಮಿ ಅಮ್ಮ ಹಾಗೂ ಅಶ್ವಿನಿ ಪುನೀತ್ ರಾಜಕುಮಾರ್ ಸಹ ಬಂದಿದ್ದು ಶಾಲೆಯ ಮಕ್ಕಳು ರಾಜಕುಮಾರ್ ಕುಟುಂಬವನ್ನು ಹಾಡಿ ಹೊಗಳಿದರು ಅಷ್ಟೇ ಅಲ್ಲದೆ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಶಾಲು ಹೊದಿಸಿ ಹೂಗುಚ್ಛವನ್ನು ನೀಡುವ ಮೂಲಕ ಸನ್ಮಾನವನ್ನು ಮಾಡಿದರು.. ಹೀಗೆ ತಂದೆಯ ಆಸೆಯನ್ನು ನಿರ್ವಹಿಸಲೆ ಬೇಕು ಎಂಬ ಇಬ್ಬರು ಹೆಣ್ಣುಮಕ್ಕಳು ದೃತಿ ಮತ್ತು ವಂದಿತಾ ಬಹಳ ಶಿಸ್ತಿನಿಂದ ವಿದ್ಯೆ ಕಲಿತಿದ್ದು ತಾಯಿಗೂ ಕೂಡ ಸನ್ಮಾನ ಮಾಡಿಸಿದ್ದಾರೆ ಈ ಸಂದರ್ಭದಲ್ಲಿ ಮಾತನಾಡಿರುವ ವಂದಿತಾ ಅಪ್ಪ ಇಂದು ನಮ್ಮೊಂದಿಗೆ ಇದ್ದಿದ್ದರೆ ಬಹಳ ಸಂತೋಷ ಪಡುತ್ತಿದ್ದರು

ನಾನು ನನ್ನ ಶಾಲೆಯ ಎಲ್ಲಾ ಫಂಕ್ಷನ್ ಗಳಿಗೆ ಕಾರ್ಯಕ್ರಮಗಳಿಗೆ ಪಪ್ಪಾ ಅವರನ್ನು ಕರೆದುಕೊಂಡು ಬರುತ್ತಿದ್ದೆ ಆದರೆ ಪಪ್ಪ ನಮ್ಮ ಜೊತೆ ಇಲ್ಲ ಐ ಮಿಸ್ ಯು ಡ್ಯಾಡಿ ಎಂದು ಮಾತನಾಡುತ್ತಾ ಸ್ಟೇಜ್ ಮೇಲೆ ಕಣ್ಣೀರು ಹಾಕಿದ್ದಾರೆ ಪುನೀತ್ ರಾಜಕುಮಾರ್ ಅವರು ಪ್ರೀತಿಯ ಮಕ್ಕಳ ವಂದಿತಾ ದೃತಿಯ ಈ ಉನ್ನತ ಮಟ್ಟದ ವಿದ್ಯಾಭ್ಯಾಸವನ್ನು ನೋಡಿದಿದ್ದರೆ ಅತಿ ಹೆಚ್ಚಾಗಿ ಸಂತೋಷಪಡುತ್ತಿದ್ದರು ಇನ್ನೂ ಮಕ್ಕಳ ಜೊತೆ ತುಂಬಾ ಸಮಯವನ್ನು ಕಳೆಯುತ್ತಿದ್ದರು ಮಕ್ಕಳು ತುಂಬಾ ಚೆನ್ನಾಗಿ ಓದಬೇಕೆಂಬ ಅಪ್ಪು ಅವರಿಗೆ ಆಸೆ ಇತ್ತು ಅಪ್ಪನ ಆಸೆಯನ್ನು ನೆರವೇರಿಸುತ್ತಿದ್ದಾರೆ ತಂದೆಗೆ ತಕ್ಕ ಮಕ್ಕಳು, ಹಾಗೂ ಅಪ್ಪನಂತೆ ಕಷ್ಟದಲ್ಲಿದ್ದವರಿಗೆ ಬಡವರಿಗೆ ಸಹಾಯ ಮಾಡಲು ಮುಂದೆ ಇರುತ್ತಾರೆ ಈ ಮಾಹಿತಿಯ ಬಗ್ಗೆ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ..