Advertisements

ಮದುವೆ ಆಗ್ತೀನಿ ಎಂದಾಗ ಈ ವ್ಯಕ್ತಿಗೆ ಪುನೀತ್​ ಕಡೆಯಿಂದ ಸಿಕ್ಕಿತ್ತು ವಿಶೇಷ ಟಿಪ್ಸ್! ಅದೇನು ಗೊತ್ತಾ?

Cinema

ನಮಸ್ಕಾರ ವೀಕ್ಷಕರೆ ದಾನಿಶ್ ಸೇತ್ ಅವರ ನಟನೆಯ ಒನ್ ಕಟ್ ಟು ಕಟ್ ಚಿತ್ರ ಫೆಬ್ರವರಿಯಲ್ಲಿ ತೆರೆಗೆ ಬರುತ್ತಿದೆ. ಈ ಸಿನಿಮಾವನ್ನು ಪಿಆರ್ ಕೆ ಪ್ರೊಡಕ್ಷನ್ ನಿರ್ಮಾಣ ಮಾಡಿದೆ. ಪಿಆರ್ ಕೆ ಜೊತೆ ಅವರು ನಟಿಸು ತ್ತಿರುವ ಎರಡನೆಯ ಸಿನಿಮಾ ಇದಾಗಿದೆ. ನಟ ದಾನಿಶ್ ಅವರು ಇತ್ತೀಚಿನ ವರ್ಷಗಳಲ್ಲಿ ಸಿನಿಮಾರಂಗದಲ್ಲಿ ಸಖತ್ ಆಕ್ಟಿವ್ ಆಗಿದ್ದಾರೆ. ಇತ್ತೀಚೆಗಷ್ಟೇ ಅವರ ನಟನೆಯ ಹಂಬಲ್ ಪೊಲಿಟಿಷಿಯನ್ ನೋಗರಾಜ್ ವೆಬ್ ಸಿರಿಸ್ ಸರಣಿ ಕೂಡ ಮೆಚ್ಚುಗೆಯನ್ನು ಪಡೆದುಕೊಂಡಿದೆ.

[widget id=”custom_html-5″]


ಈಗ ಒನ್ ಕಟ್ ಟು ಕಟ್ ಸಿನಿಮಾ ರಿಲೀಸ್ ಆಗಲು ರೆಡಿಯಾಗಿದೆ. ಈ ಚಿತ್ರದ ಬಗ್ಗೆ ಮಾತನಾಡುವಾಗ ಪುನೀತ್ ಅವರನ್ನು ದಾನಿಶ್ ನೆನಪಿಸಿಕೊಂಡರು. ತಮ್ಮ ಮದುವೆಯ ದಿನ ದಾನಿಶ್ ಅವರಿಗೆ ಪುನೀತ್ ಅವರು ಹೇಳಿದ ವಿಶೇಷ ಮಾತೊಂದನ್ನು ದಾನಿಶ್ ಈಗ ವ್ಯಕ್ತಪಡಿಸಿದ್ದಾರೆ. ಅನ್ಯರಂಗಸ್ವಾಮಿ ಜೊತೆ ದಾನಿಶ್ ಅವರು ಸಿಂಪಲ್ ಆಗಿ ಮದುವೆ ಆಗಿದ್ದರೂ.

[widget id=”custom_html-5″]

[widget id=”custom_html-5″]

Advertisements
Advertisements

[widget id=”custom_html-5″]

ಕಳೆದ ವರ್ಷ ಜೂನ್ 9 ರಂದು ಮದುವೆ ನೋಂದಣಿ ಮಾಡಿಸಿಕೊಂಡರೆ ಜೂನ್ 10ರಂದು ಆಪ್ತರ ಸಮ್ಮುಖದಲ್ಲಿ ಉಂಗುರ ಬದ ಲಾಯಿಸಿಕೊಂಡರು. ನಾನು ಮತ್ತು ಅನ್ಯ ನಮ್ಮ ಕುಟುಂಬದವರು ಹಾಗೂ ಆಪ್ತರು ಎನಿಸಿಕೊಂಡ 15 ಜನರ ಸಮ್ಮುಖದಲ್ಲಿ ಉಂಗುರ ಬದಲಾಯಿಸಿ ಕೊಂಡೆವು.ನಮ್ಮನ್ನು ಆಶೀರ್ವದಿಸಿ ಎಂದು ದಾನಿಶ್ ಅವರು ಬರೆದುಕೊಂಡಿದ್ದರು. ಮದುವೆಯ ದಿನ ಪುನೀತ್ ರಾಜಕುಮಾರ್ ಅವರು ನನಗೆ ಕಾಲ್ ಮಾಡಿದ್ದರು.ಆ ವೇಳೆ ಫ್ಯಾಮಿಲಿಗೆ ಯಾವಾಗಲೂ ಮೊದಲ ಆದ್ಯತೆ ನೀಡಬೇಕೆಂದು ಹೇಳಿದ್ದರು. ಪುನೀತ್ ಸರ್ ಅವರು ಚಿತ್ರರಂಗದಲ್ಲಿ ಎಷ್ಟೇ ಬ್ಯುಸಿ ಯಾಗಿದ್ದರೂ ಕೂಡ ಕುಟುಂಬಕ್ಕೆ ಅವರು ಆದ್ಯತೆ ನೀಡುತ್ತಿದ್ದರು ಅವರು ನಮಗೆ ಮಾದರಿ ಎಂದು ದಾನಿಶ್ ಅವರು ಹೇಳಿದ್ದಾರೆ.

[widget id=”custom_html-5″]

ಇನ್ನು ಒನ್ ಕಟ್ ಟು ಕಟ್ ಚಿತ್ರವನ್ನು ಪುನೀತ್ ರಾಜಕುಮಾರ್ ಅವರು ವೀಕ್ಷಣೆ ಮಾಡಿದ್ದರು.ಅಲ್ಲದೆ ಆ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಪುನೀತ್ ಅವರ ಜೊತೆ ಕಳೆದ ಸಮಯವೆ ನಮ್ಮ ಅದೃಷ್ಟ ವೆನಿಸುತ್ತದೆ ಅವರು ತೋರಿಸಿದಂತಹ ಪ್ರೀತಿ ಅಭಿಮಾನ ನಾನು ಸದಾ ನೆನಪಿಸಿಕೊಳ್ಳುವೆ. ಪುನೀತ್ ಇಲ್ಲವೆಂಬುದನ್ನು ನಾನು ಹೇಳಲು ಆಗುವುದಿಲ್ಲ ಪುನೀತ್ ಅವರು ನಮ್ಮ ಇದ್ದಾರೆ ಎಂದುಕೊಂಡು ಅವರ ಹಾದಿಯಲ್ಲಿ ಬೆಳೆಯೋಣ ವೆಂದು ದಾನಿಶ್ ಅವರು ಮೀಡಿಯಾಗಳ ಮುಂದೆ ತಮ್ಮ ಮೆಚ್ಚಿನ ಆಪ್ತರಾದ ಅಪ್ಪು ಬಗ್ಗೆ ಭಾವುಕವಾದ ಮಾತುಗಳನ್ನಾಡಿದರು.

[widget id=”custom_html-5″]